ನವದೆಹಲಿ(ನ.26): ಇಪ್ಪತ್ತು ವರ್ಷದ ಯುವತಿಯನ್ನು ಆಕೆಯ ಗಂಡನೊಂದಿಗೆ ಮತ್ತೆ ಸೇರಿಸುತ್ತಾ, ವಯಸ್ಸಿಗೆ ಬಂದ ಹೆಣ್ಣು ಮಗಳು ತನಗಿಷ್ಟವಾದವರೊಂದಿಗೆ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯ ಹೊಂದಿದ್ದಾಳೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಸದ್ಯ ಬಿಜೆಪಿ ನೇತೃತ್ವದ ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲಿರುವ ಲವ್ ಜಿಹಾದ್ ವಿರೋಧಿ ಕಾನೂನು ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಇದರೊಂದಿಗೇ ವಯಸ್ಕ ಮಹಿಳೆ ತಾನು ಆಯ್ಕೆ ಮಾಡುವ ಯುವಕನೊಂದಿಗೆ ಮದುವೆಯಾಗುವ ಸ್ವಾತಂತ್ರ್ಯದ ಬಗ್ಗೆಯೂ ಚರ್ಚೆ ಹುಟ್ಟಿಕೊಳ್ಳಲಾರಂಭಿಸಿದೆ. ಹೀಗಿರುವಾಗಲೇ  ನ್ಯಾಯಮೂರ್ತಿ ವಿಪಿನ್ ಸಿಂಗ್ ಹಾಗೂ ರಜನೀಶ್ ಭಟ್ನಾಕರ್ ನೇತೃತ್ವದ ದ್ವಿಸದಸ್ಯ ಪೀಠ ಇಂತಹುದ್ದೊಂದು ತೀರ್ಪು ನೀಡಿರುವುದು ಭಾರೀ ಸಂಚಲನ ಮೂಡಿಸಿದೆ.

'ಲವ್ ಜಿಹಾದ್' ಬಲವಂತದ ಮತಾಂತರ; ಯೋಗಿ ಸರ್ಕಾರ ಸುಗ್ರಿವಾಜ್ಞೆ.. ಜೈಲು+ದಂಡ

ಏನಿದು ಪ್ರಕರಣ?

ಸುಲೇಖ ಹೆಸರಿನ ಇಪ್ಪತ್ತು ವರ್ಷದ ಯುವತಿಯನ್ನು ಬಬ್ಲೂ ಎಂಬಾತ ಕಿಡ್ನಾಪ್ ಮಾಡಿದ್ದಾನೆ ಹಾಗೂ ಆಕೆ ಅಪ್ರಾಪ್ತಳೆಂದು ದೂರು ನೀಡಿದ್ದರು. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಲೇಖ ವಿಚಾರಣೆ ನಡೆಸಿದಾಗ ತಾನು ಮನೆ ಬಿಟ್ಟು ತೆರಳಿದ್ದ ವೇಳೆ ತಾನೊಬ್ಬ ವಯಸ್ಕ ಹೆಣ್ಣಾಗಿದ್ದೆ. ಅಲ್ಲದೇ ಪರಸ್ಪರ ಇಷ್ಟಪಟ್ಟು ತಾವಿಬ್ಬರು ಮದುವೆಯಾಗಿಯೂ ತಿಳಿಸಿದ್ದಾಳೆ.

ಹಿಂದೂ ಮುಸ್ಲಿಂ ಬೇಧ ನಮಗಿಲ್ಲ, ಸಂಗಾತಿ ಜೊತೆ ಬಾಳಲು ಸ್ವತಂತ್ರ: ಮಹತ್ವದ ತೀರ್ಪು ಪ್ರಕಟ!

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸುಲೇಖರನ್ನು ಬಬ್ಲೂ ಜೊತೆಗೆ ಕಳುಹಿಸಿಕೊಟ್ಟಿದೆ. ಅಲ್ಲದೇ ಇಂತಹುದ್ದೊಂದು ಮಹತ್ವದ ತೀರ್ಪು ನೀಡಿದೆ.