Asianet Suvarna News Asianet Suvarna News

Ambulance ಸಿಗದೆ ಬೈಕ್‌ನಲ್ಲಿ ಮಗಳ ಮೃತದೇಹವನ್ನು 65 ಕಿ.ಮೀ. ಹೊತ್ತೊಯ್ದ ಪೋಷಕರು

ಬಾಲಕಿಗೆ ತೀವ್ರ ಜ್ವರವಿದ್ದ ಕಾರಣ, ಬಾಲಕಿಯನ್ನು ಖಮ್ಮಂನ ಸರ್ಕಾರಿ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ನಂತರ ಆಕೆಗೆ ಉಸಿರಾಟದ ಸಮಸ್ಯೆ ಇತ್ತು ಹಾಗೂ ಚಿಕಿತ್ಸೆ ಪಡಯುತ್ತಲೇ ಮೃತಪಟ್ಟಳು ಎಂದು ತಿಳಿದುಬಂದಿದೆ. 

adivasi man takes 3 year old daughters body on bike for 65 km after hospital refuses ambulance in telangana ash
Author
First Published Nov 8, 2022, 5:32 PM IST

ಆಸ್ಪತ್ರೆಯವರು (Hospital) ಆಂಬುಲೆನ್ಸ್ (Ambulance) ನಿರಾಕರಿಸಿದ ಕಾರಣಕ್ಕೆ 3 ವರ್ಷದ ಮಗಳ ಮೃತದೇಹವನ್ನು (Dead Body) ಬೈಕ್‌ನಲ್ಲಿ (Bike) ಸುಮಾರು 65 ಕಿ.ಮೀ. ಗಳಷ್ಟು ದೂರ ಹೊತ್ತೊಯ್ದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. ತೆಲಂಗಾಣದ ಖಮ್ಮಂ (Khammam) ಜಿಲ್ಲೆಯ ತಾಯಿ ಹಾಗೂ ಮಗು ಆರೋಗ್ಯ ಕೇಂದ್ರ (Mother and Child Health Care)  (ಎಂಸಿಎಚ್‌) (MCH) ನಿಂದ ತಂದೆ ಬೈಕ್‌ನಲ್ಲೇ ತೆಗೆದುಕೊಂಡು ಹೋಗಿದ್ದಾರೆ. ಖಮ್ಮಂನ ಸರ್ಕಾರಿ ಆಸ್ಪತ್ರೆ (Government Hospital) ಆಂಬುಲೆನ್ಸ್ ನೀಡಲು ನಿರಾಕರಿಸಿದೆ ಎನ್ನಲಾಗಿದ್ದು, ಹಾಗೂ ಖಾಸಗಿ ಆಂಬುಲೆನ್ಸ್‌ ತೆಗೆದುಕೊಂಡು ಹೋಗಲು ತಂದೆ ಬಳಿ ಹಣವಿಲ್ಲದ ಕಾರಣ 3 ವರ್ಷದ ಮಗಳ ಮೃತದೇಹವನ್ನು ಬೈಕ್‌ನಲ್ಲೇ ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. ತಂದೆ ವೆಟ್ಟಿ ಮಲ್ಲಯ್ಯ ಆದಿವಾಸಿ (Adivasi) ಜನಾಂಗದವರಾಗಿದ್ದು, ಅವರು ತೆಲಂಗಾಣದ ಖಮ್ಮಂ ಜಿಲ್ಲೆಯ ಎನ್ಕೂರು ಬಳಿಯ ಓಟಾ ಮೆಡೇಪಲ್ಲಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. 

ಗೋಥಿಕೋಯಾ ಜನಾಂಗದ 3 ವರ್ಷದ ಮಗಳು ವೆಟ್ಟಿ ಸುಕ್ಕಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಮೊದಲು ಆಕೆಯನ್ನು ಎನ್ಕೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ವೈದ್ಯರು ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಮ್ಮಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಸಲು ಹೇಳಿದರು. ಆದರೆ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಭಾನುವಾರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದಾಳೆ. 

ಇದನ್ನು ಓದಿ: ಕಲಬುರಗಿ: ಲಾರಿ, ಬೈಕ್‌ ಡಿಕ್ಕಿಯಾಗಿ ಇಬ್ಬರಿಗೆ ಗಾಯ, ಬಾರದ 108 ಆ್ಯಂಬುಲೆನ್ಸ್‌

ನಂತರ, ಬಾಲಕಿಯ ತಂದೆ ತಮ್ಮ ಗ್ರಾಮಕ್ಕೆ ಹೋಗಿ ಸಂಬಂಧಿಕರಿಗೆ ಈ ವಿಚಾರ ಮುಟ್ಟಿಸಿದ. ಬಳಿಕ, ಅದೇ ಗ್ರಾಮದ ಸಂಬಂಧಿಕರೊಬ್ಬರಿಂದ ಖಮ್ಮಂ ಸರ್ಕಾರಿ ಆಸ್ಪತ್ರೆಯಿಂದ ಮೆಡೇಪಲ್ಲಿ ಗ್ರಾಮಕ್ಕೆ ಆಕೆಯ ಮೃತದೇಹವನ್ನು ಸಾಗಿಸಲು ಬೈಕ್‌ ತೆಗೆದುಕೊಂಡು ಹೋಗಿದ್ದಾರೆ. ಇನ್ನು, ಬಾಲಕಿಗೆ ಆಂಬುಲೆನ್ಸ್‌ ನಿರಾಕರಿಸಿದ್ದು ಮಾತ್ರವಲ್ಲದೆ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಾಲಕಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದೂ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಆಂಬುಲೆನ್ಸ್ ಸೇವೆಗಳನ್ನು ನೀಡುವ ಸರ್ಕಾರದ ಸೌಲಭ್ಯಗಳ ಬಗ್ಗೆ ಬುಡಕಟ್ಟು ಜನಾಂಗದವರಿಗೆ ಸಾಮಾನ್ಯವಾಗಿ ಅರಿವಿಲ್ಲ ಎಂದೂ ಮೂಲಗಳು ತಿಳಿಸಿವೆ. 

ಘಟನೆಯ ವಿವರ..
ವೆಟ್ಟಿ ಸುಕ್ಕಿ ಎಂಬ ಬಾಲಕಿಗೆ ಕಳೆದ 3 ದಿನಗಳಿಂದ ಫಿಟ್ಸ್‌ ಬರುತ್ತಿತ್ತು ಹಾಗೂ ಅನಾರೋಗ್ಯವಿತ್ತು. ಈ ಹಿನ್ನೆಲೆ ಆಕೆಯ ಪೋಷಕರು ವೆಟ್ಟಿ ಮಲ್ಲಯ್ಯ ಹಾಗೂ ಆದಿ ಎನ್ಕೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಪವನ್‌ ಕುಮಾರ್‌, ಆಕೆಗೆ ತೀವ್ರ ಜ್ವರವಿದ್ದ ಕಾರಣ, ಬಾಲಕಿಯನ್ನು ಖಮ್ಮಂನ ಸರ್ಕಾರಿ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ನಂತರ ಆಕೆಗೆ ಉಸಿರಾಟದ ಸಮಸ್ಯೆ ಇತ್ತು ಹಾಗೂ ಆಕೆ ಚಿಕಿತ್ಸೆ ಪಡಯುತ್ತಲೇ ಮೃತಪಟ್ಟಳು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಹೊಸಕೋಟೆ: ಆ್ಯಂಬುಲೆನ್ಸ್‌ ಸಿಗದೆ ಟ್ಯಾಂಕರ್‌ ಚಾಲಕ ಸಾವು, ಆಕ್ರೋಶ

ಇನ್ನು, ಬೈಕ್‌ನಲ್ಲಿ ಮೃತದೇಹ ಸಾಗಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ವೆಟ್ಟಿ ಮಲ್ಲಯ್ಯ, ಆಂಬುಲೆನ್ಸ್‌ ಬಾಡಿಗೆ ಪಡೆಯಲು ನಮ್ಮಲ್ಲಿ ಹಣವಿರಲಿಲ್ಲ. ಈ ಹಿನ್ನೆಲೆ ದ್ವಿಚಕ್ರ ವಾಹನದಲ್ಲೇ ಆಕೆಯನ್ನು ಸಾಗಿಸಲಾಯಿತು ಎಂದು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎನ್‌ಜಿಒ ಕಾರ್ಯಕರ್ತ ಇ. ಶ್ರೀನಿವಾಸ್‌, ಆದಿವಾಸಿಗಳ ಬಳಿ 3 ವರ್ಷಗಳ ಹಿಂದೆ ರೇಷನ್‌ ಕಾರ್ಡ್‌ ಸಹ ಇರಲಿಲ್ಲ. ರಾಷ್ಟ್ರೀಯ ಮಾಧ್ಯಮವೊಂದರ ವರದಿ ನೋಡಿ ಗೋಥಿಕೋಯಾ ಜನಾಂಗದವರ ಕಷ್ಟ ಅರಿತ ಹೈಕೋರ್ಟ್‌, ಸರ್ಕಾರಕ್ಕೆ ರೇಷನ್‌ ಕಾರ್ಡ್‌ಗಳನ್ನು ನೀಡಲು ಹಾಗೂ ಕುಡಿಯುವ ನೀರು ಕೊಡಲು ಸೂಚನೆ ನೀಡಿದರು. ಇದಾದ ಬಳಿಕ, 2 ಬೋರ್‌ವೆಲ್‌ಗಳನ್ನು ಕೊರೆಯಲಾಯಿತು ಎಂದೂ ತಿಳಿಸಿದರು. 

ಇದನ್ನೂ ಓದಿ: Mumbai Accident: ಬಾಂದ್ರಾ - ವರ್ಲಿ ಸೀ ಲಿಂಕ್‌ನಲ್ಲಿ ಭೀಕರ ಅಪಘಾತಕ್ಕೆ ಐವರ ಬಲಿ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

Follow Us:
Download App:
  • android
  • ios