ರಾಜಭವನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಪುಣೆಯಿಂದ ಮುಂಬೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. 

ಮುಂಬೈ (ಜೂನ್ 14): ಪ್ರಧಾನಿ ನರೇಂದ್ರ ಮೋದಿ (Narendra Modi) ಭದ್ರತಾ ತಂಡದ ಭಾಗವಾಗಿದ್ದ ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್ (ಎಸ್ ಪಿಜಿ) ಸಿಬ್ಬಂದಿ, ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (uddhav thackeray) ಪುತ್ರ ಆದಿತ್ಯ ಠಾಕ್ರೆಗೆ (aditya thackeray) ಕಾರಿನಿಂದ ಕೆಳಗಿಳಿಯುವಂತೆ ಹೇಳಿದ ಘಟನೆ ನಡೆಸಿದೆ. ಉದ್ಧವ್ ಠಾಕ್ರೆ ಅವರು ತಮ್ಮ ಪುತ್ರ ಮತ್ತು ಸಚಿವ ಆದಿತ್ಯ ಅವರೊಂದಿಗೆ ಕೊಲಾಬಾದಲ್ಲಿರುವ ನೌಕಾಪಡೆಯ ಹೆಲಿಪೋರ್ಟ್ ಐಎನ್‌ಎಸ್ ಶಿಖರ್‌ಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ತೆರಳಿದ್ದ ವೇಳೆ ಈ ಘಟನೆ ನಡೆಸಿದೆ.

ಇಂದು ರಾಜಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪುಣೆಯಿಂದ (Pune) ಮುಂಬೈಗೆ (Mumbai) ಬಂದರು ಪ್ರಧಾನಿ ಅವರನ್ನು ಬರಮಾಡಿಕೊಳ್ಳಲು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಸಿಎಂ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಆಗಮಿಸಿದ್ದರು. ಮೂಲಗಳ ಪ್ರಕಾರ, ಐಎನ್‌ಎಸ್ ಶಿಖರ್ ಬೇಸ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿರುವ ವಿಐಪಿಗಳ ಪಟ್ಟಿಯಲ್ಲಿ ಆದಿತ್ಯ ಠಾಕ್ರೆ ಅವರ ಹೆಸರು ಇದ್ದಿರಲಿಲ್ಲ ಎಂದು ಎಸ್‌ಪಿಜಿ (SPG) ತಿಳಿಸಿದೆ. ಆ ಕಾರಣದಿಂದಾಗಿ ಮುಖ್ಯಮಂತ್ರಿಯ ಕಾರಿನಲ್ಲಿ ಶಿಖರ್ ಬೇಸ್ ಗೆ ಬಂದಿದ್ದ ಆದಿತ್ಯ ಠಾಕ್ರೆ ಅವರನ್ನು ಕಾರಿನಿಂದ ಕೆಳಗಿಳಿಸಲಾಗಿತ್ತು.

ಆದರೆ, ಎಸ್‌ಪಿಜಿಯ ಈ ವರ್ತನೆಯಿಂದ ಸಿಎಂ ಉದ್ಧವ್ ಠಾಕ್ರೆ ತೀವ್ರ ಬೇಸರಗೊಂಡಿದ್ದರು. ಆದಿತ್ಯ ಕೇವಲ ತನ್ನ ಮಗನಲ್ಲ. ಪ್ರೊಟೋಕಾಲ್ ಮಿನಿಸ್ಟರ್ ಅಡಿಯಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಬಂದಿದ್ದಾನೆ ಎಂದು ಅವರು ವಾದಿಸಿದರು. ನಂತರ, ಸಿಎಂ ಉದ್ಧವ್ ಅವರ ತೀವ್ರ ಅಸಮಾಧಾನದ ನಂತರ, ಆದಿತ್ಯ ಠಾಕ್ರೆ ಅವರಿಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ನೀಡಲಾಯಿತು.

ಇದೇ ವೇಳೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಅನುಮತಿ ನೀಡದಿರುವ ಬಗ್ಗೆ ಎನ್ ಸಿಪಿ ಅಸಮಾಧಾನ ವ್ಯಕ್ತಪಡಿಸಿದೆ. ಇದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಪಕ್ಷದ ಸಂಸದೆ ಸುಪ್ರಿಯಾ ಸುಲೆ ಅಮರಾವತಿಯಲ್ಲಿ ಹೇಳಿದ್ದಾರೆ. ಸುಪ್ರಿಯಾ ಸುಲೆ ಮತ್ತು ಎನ್‌ಸಿಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪುಣೆಯ ದೇಹುದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಒಂದೇ ವೇದಿಕೆಯಲ್ಲಿದ್ದರು. ಪ್ರಧಾನಿ ಮತ್ತು ದೇವೇಂದ್ರ ಫಡ್ನವಿಸ್ ವೇದಿಕೆಯಲ್ಲಿ ಭಾಷಣ ಮಾಡಿದರು. ಆದರೆ ಪುಣೆಯವರೇ ಆದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಭಾಷಣ ಮಾಡಲು ಅವಕಾಶ ನಿರಾಕರಿಸುವ ಮೂಲಕ ರಾಜಕೀಯ ಚರ್ಚೆಗೆ ಕಾರಣವಾಯಿತು. ಇದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಹೇಳಿದ್ದಾರೆ. ಇದು ಗಂಭೀರ ವಿಷಯ. ಇದು ರಾಜ್ಯದ ಉಪಮುಖ್ಯಮಂತ್ರಿಗೆ ಮಾಡಿದ ಅವಮಾನ. ಶಿಷ್ಟಾಚಾರದ ಪ್ರಕಾರ, ಅವರು ಪ್ರಧಾನಿಯನ್ನು ಬರಮಾಡಿಕೊಂಡಿದ್ದರು ಮತ್ತು ಶಿಷ್ಟಾಚಾರದ ಅಡಿಯಲ್ಲಿ ದೆಹಲಿ ಕಚೇರಿಯಲ್ಲಿ ಭಾಷಣಕ್ಕಾಗಿ ಪತ್ರ ಬರೆದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದಿದ್ದಾರೆ.

ರಾಜ್ಯಸಭೆ ಟಿಕೆಟ್: ಪ್ರಭಾವಿಗಳಿಗೂ ಮೋದಿ ಅರ್ಧಚಂದ್ರ

ಪ್ರಧಾನಿ ಮೋದಿ ಅವರು ರಾಜಭವನದಲ್ಲಿ ಅಂಡರ್ ಗ್ರೌಂಡ್ ರೆವಲ್ಯೂಷನರಿ ಗ್ಯಾಲರಿ ಮತ್ತು ನವೀಕರಿಸಿದ ವಸತಿ ಕಟ್ಟಡ 'ಜಲ್ ಭೂಷಣ್' ಅನ್ನು ಉದ್ಘಾಟಿಸಿದರು, ಇದು ರಾಜ್ಯಪಾಲರ ಕಚೇರಿ ಮತ್ತು ನಿವಾಸವನ್ನು ಹೊಂದಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರು ರಾಜಭವನ ಸಂಕೀರ್ಣದಲ್ಲಿರುವ ಐತಿಹಾಸಿಕ ಶ್ರೀ ಗುಂಡಿ ಮಂದಿರಕ್ಕೂ ಭೇಟಿ ನೀಡಿದರು.

India Gate: ಹಾರ್ದಿಕ್‌ ಕಾಂಗ್ರೆಸ್‌ ತೊರೆದಿದ್ದು ಯಾಕೆ?

ಭಾರತದ ಸ್ವಾತಂತ್ರ್ಯ ಚಳವಳಿಯಯಲ್ಲಿ ತಿಳಿಯದೇ ಇರುವ ಮತ್ತು ಅಪರಿಚಿತ ಕ್ರಾಂತಿಕಾರಿಗಳಿಗೆ ಗೌರವಾರ್ಥವಾಗಿ, 2016 ಭಾರತೀಯ ಕ್ರಾಂತಿಕಾರಿಗಳ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ವರ್ಷದಲ್ಲಿ ಇದನ್ನು ಸಮರ್ಪಿಸಲಾಗುತ್ತಿದೆ. . ನಾಗ್ಪುರದ ದಕ್ಷಿಣ ಮಧ್ಯ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರದ ಸಹಾಯದಿಂದ ಇತಿಹಾಸಕಾರ ಮತ್ತು ಬರಹಗಾರ ಡಾ.ವಿಕ್ರಂ ಸಂಪತ್ ಅವರ ಮಾರ್ಗದರ್ಶನದಲ್ಲಿ ಕ್ರಾಂತಿಕಾರಿಗಳ ಗ್ಯಾಲರಿಯನ್ನು ರಚಿಸಲಾಗಿದೆ.