ಆದಿ ಶಂಕರಾಚಾರ್ಯ ಕ್ರೂರ ಜಾತಿ ವ್ಯವಸ್ಥೆ, ಮನುಸ್ಮೃತಿ ಪ್ರತಿಪಾದಕ, ಕೇರಳ ಸಚಿವನ ವಿವಾದ!
ಪಿಣರಾಯಿ ವಿಜಯನ್ ಸರ್ಕಾರದ ಪ್ರಮುಖ ಸಚಿವ ಎಂಬಿ ರಾಜೇಶ್ ವಿವಾದಾತ್ಮ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದಿ ಶಂಕರಾಚಾರ್ಯ ಕ್ರೂರ ಜಾತಿ ವ್ಯವಸ್ಥೆಯನ್ನು, ಮನುಸ್ಮೃತಿಯನ್ನು ಪ್ರದಿಪಾದಿಸಿದ್ದಾರೆ ಅನ್ನೋ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ತಿರುವನಂತಪುರಂ(ಜ.03) ಹಿಂದೂ ಗುರುಗಳು, ಹಿಂದೂ ಆರಾಧನೆ, ಆಚರಣೆ ಮೇಲೆ ಶತ ಶತಮಾನಗಳಿಂದ ದಾಳಿ ನಡೆಯುತ್ತಲೇ ಇದೆ. ಮೊಘಲರು, ಸುಲ್ತಾನರು, ಬ್ರಿಟೀಷರು, ಡಚ್ಚರ್, ಪೋರ್ಚಗೀಸ್ ಸೇರಿದಂತೆ ಪ್ರತಿ ದಾಳಿಕೋರರು ಸುಲಭ ಟಾರ್ಗೆಟ್ ಹಿಂದೂ. ಸ್ವತಂತ್ರ ಭಾರತದಲ್ಲೂ ಈ ದಾಳಿಯ ಸ್ವರೂಪ ಬದಲಾಗಿದೆ. ಹಿಂದೂ ಧರ್ಮವನ್ನು ಅವೇಹಳನ ಮಾಡುವ, ಧರ್ಮ ಪ್ರತಿಪಾದಕರನ್ನು ದೂಷಿಸುವ ಕೆಲಸ ನಡೆಯುತ್ತಲೇ ಇದೆ. ಮತಕ್ಕಾಗಿ, ಚುನಾವಣೆ ಗೆಲ್ಲಲು ಮತಗಳ ದ್ರುವೀಕರಣಕ್ಕಾಗಿ ಈ ರೀತಿಯ ದಾಳಿ ಸಾಮಾನ್ಯವಾಗಿದೆ. ಇದೀಗ ಕೇರಳ ಸಚಿವ, ಸಿಪಿಎಂ ನಾಯಕ ಎಂಬಿ ರಾಜೇಶ್ ನಾಲಗೆ ಹರಿಬಿಟ್ಟಿದ್ದಾರೆ. ಅದ್ವೈತ ವೇದಾಂತ, ವೈದಿಕ ಸಿದ್ದಾಂತ, ಹಿಂದೂ ಧರ್ಮದ ಕುರಿತು ದೇಶಕ್ಕೆ ತಿಳಿಸಿದ ಮಹಾನ್ ಆಚಾರ್ಯ ಆದಿಶಂಕಾರಾಚಾರ್ಯರ ವಿರುದ್ಧ ಎಂಬಿ ರಾಜೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದಿ ಶಂಕರಾಚಾರ್ಯ ಕ್ರೂರ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸಿದ ವ್ಯಕ್ತಿ. ವರ್ಣಾಶ್ರಮವನ್ನು ಎತ್ತಿ ಹಿಡಿದ ಹಾಗೂ ಮನುಸ್ಮೃತಿ ಪ್ರತಿಪಾದಕರಾಗಿದ್ದಾರೆ. ಆದಿ ಶಂಕರಾಚಾರ್ಯ ಯಾವತ್ತಿಗೂ ಕೇರಳದ ಆಚಾರ್ಯನಲ್ಲ ಎಂದು ಎಂಬಿ ರಾಜೇಶ್ ಹೇಳಿದ್ದಾರೆ.
ಕೇರಳದ ವರಕ್ಕಲ್ ಶಿವಗಿರಿ ಮಠದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಎಂಬಿ ರಾಜೇಶ್, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇರಳಕ್ಕೆ ಯಾರಾದರೂ ಗುರು ಎಂದಿದ್ದರೆ ಅಂದು ನಾರಾಯಣ ಗುರು. ಆದಿ ಶಂಕರಾಚಾರ್ಯ ಎಂದಿಗೂ ಕೇರಳದ ಗುರುವಾಗಲು ಸಾಧ್ಯವಿಲ್ಲ. ಸಮಾನತೆಗಾಗಿ ಹೋರಾಡಿದ ನಾರಾಯಣಗುರು ನಮ್ಮ ಆದರ್ಶ. ಆದಿ ಶಂಕರಾಚಾರ್ಯ, ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಾರೆ. ಮನುಸ್ಮೃತಿಯನ್ನು ಪ್ರತಿಪಾದಿಸಿ ಕೆಳವರ್ಗ ಹಾಗೂ ಸಮಾಜದಿಂದ ತುಳಿತಕ್ಕೊಳಗಾಗಿದ್ದ ವರ್ಗವನ್ನು ಮತ್ತಷ್ಟು ಕೆಳಗೆ ತಳ್ಳಿದ್ದಾರೆ ಎಂದಿದ್ದಾರೆ.
ಭಾರತ ನೆಲ ಕಂಡ ಅಪರೂಪದ ದಾರ್ಶನಿಕ ಆದಿ ಶಂಕರಾಚಾರ್ಯರು
ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಬೇರುಬಿಡಲು ಶಂಕರಾಚಾರ್ಯರ ಕೊಡುಗೆ ಹೆಚ್ಚಿದೆ. ಹೀಗಾಗಿ ಆದಿ ಶಂಕರಾಚಾರ್ಯ ವರ್ಣಾಶ್ರಮ ಎತ್ತಿ ಹಿಡಿದು ಮೇಲ್ವರ್ಗಕ್ಕೆ ನೆರವಾಗಿದ್ದಾರೆ ಎಂದು ಹಿಂದೂ ಸಮುದಾಯವನ್ನು ಒಡೆಯುವ ಹೇಳಿಕೆ ನೀಡಿದ್ದಾರೆ. ಎಂಬಿ ರಾಜೇಶ್ ಹೇಳಿಕೆಗೆ ಕೇಂದ್ರ ಸಚಿವ ಮರುಳೀಧರನ್ ತಿರುಗೇಟು ನೀಡಿದ್ದಾರೆ. ನಾರಾಯಣಗುರು ಹಾಗೂ ಆದಿ ಶಂಕರಾಚಾರ್ಯ ಇಬ್ಬರೂ ಹಿಂದೂ ಧರ್ಮದ ಪ್ರತಿಪಾದಕರು. ಶ್ರೇಷ್ಠ ಸಿದ್ಧಾಂತದೊಂದಿಗೆ ಜನಸಾಮಾನ್ಯರಲ್ಲಿ ಸನಾತನ ಧರ್ಮದ ಕುರಿತು ಅರಿವು ಮೂಡಿಸಿ, ಸಮಾನತೆ ಹಾಗೂ ಒಗ್ಗಟ್ಟಿಗಾಗಿ ಶ್ರಮಿಸಿದ್ದಾರೆ. ಇದೀಗ ಎಂಬಿ ರಾಜೇಶ್ ಹಿಂದೂ ಧರ್ಮದೊಳಗೆ ಒಡಕು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಮರಳೀಧರನ್ ಹೇಳಿದ್ದಾರೆ.
ಸಿಪಿಎಂ ಯಾವತ್ತಿಗೂ ನೈಜ ಹಾಗೂ ವಾಸ್ತವ ವಿಷಗಳನ್ನು ಮುಂದಿಟ್ಟ ಚುನಾವಣೆ ಎದುರಿಸಿಲ್ಲ. ಸಮಾನತೆ, ಅಸ್ವೃಷ್ಯತೆ ಹೆಸರಿನಲ್ಲಿ ಸುಳ್ಳುಗಳನ್ನೇ ಹೇಳಿ ಮತ ಪಡೆಯುತ್ತಿದೆ. ಇದೀಗ ಆದಿ ಶಂಕರಾಚಾರ್ಯರ ಕುರಿತು ಸುಳ್ಳು ಹಬ್ಬಿಸಿ ಮತ ಪಡೆಯಲು ಯತ್ನಿಸುತ್ತಿದೆ ಎಂದು ಮುರಳೀಧರನ್ ಹೇಳಿದ್ದಾರೆ.
8ನೇ ಶತಮಾನದಲ್ಲಿ ಕೇರಳದ ಕಾಲಡಿಯಲ್ಲಿ ಜನಿಸಿದ ಆದಿ ಶಂಕರಾಚಾರ್ಯ ತನ್ನ 33ನೇ ವಯಸ್ಸಿಗೆ ಆದ್ವೈತ ಸಿದ್ದಾಂತವನ್ನು ದೇಶಕ್ಕೆ ನೀಡಿ ಮಹಾನ್ ಆಚಾರ್ಯ. ಶಂಕರಾಚಾರ್ಯರು ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಮೊದಲ ಆಚಾರ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Modi In Kedarnath| ಕೇದಾರನ ರುದ್ರಾಭಿಷೇಕ ಮಾಡಿ, ಆದಿಗುರು ಶಂಕರರ ಪುತ್ಥಳಿ ಅನಾವರಣಗೊಳಿಸಿದ ಪಿಎಂ!
ಇತ್ತೀಚೆಗೆ ಪ್ರಧಾನಿ ಮೋದಿ ಕೇರಳ ಭೇಟಿಯಲ್ಲಿ ಪೆರಿಯಾರ್ ನದಿ ದಂಡೆಯಲ್ಲಿರುವ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಕಾಲಡಿಗೆ ಭೇಟಿ ನೀಡಿದ್ದರು. ಕೇರಳದ ಅದ್ವೈತ ಪ್ರತಿಪಾದಕ ಶಂಕರಾಚಾರ್ಯರು ಹಾಕಿಕೊಟ್ಟಪರಂಪರೆಯನ್ನು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸುಧಾರಕರಾದ ಶ್ರೀ ನಾರಾಯಣ ಗುರು, ಚಟ್ಟಂಪಿ ಸ್ವಾಮಿಕಲ್ ಹಾಗೂ ಅಯ್ಯಂಕಲಿಯವರು ಮುಂದುವರಿಸಿಕೊಂಡು ಹೋದರು ಎಂದು ಟ್ವೀಟ್ ಮಾಡಿದ್ದರು.