Asianet Suvarna News Asianet Suvarna News

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ: ದೇಶಕ್ಕೆ ಮಾದರಿ

* ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ
* ದೇಶಕ್ಕೆ ಮಾದರಿಯಾದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ
* ಪೆರಿಷೆಬಲ್ ಪದಾರ್ಥಗಳ ಸರಕು ಸಾಗಣಿಯಲ್ಲಿ ನಂಬರ್ 1

Bengaluru Kempegowda International Airport first cargo transport In India rbj
Author
Bengaluru, First Published Oct 8, 2021, 6:40 PM IST
  • Facebook
  • Twitter
  • Whatsapp

ಬೆಂಗಳೂರು, (ಅ.08): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ (Kempegowda International Airport) ಅತಿ ಹೆಚ್ಚು ಪೆರಿಷೆಬಲ್ ಪದಾರ್ಥಗಳ ಸರಕು ಸಾಗಣಿ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ ( APEDA) ಅವರ ಮಾಹಿತಿ ಪ್ರಕಾರ 2020-21ರ ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್‌ನಷ್ಟು ಕಡಿಮೆ ಬಾಳಿಕೆ ಅವಧಿಯ ಹಣ್ಣು(Fruits), ತರಕಾರಿಯಂಥ (ಪೆರಿಷಬಲ್) ಉತ್ಪನ್ನಗಳನ್ನು ರಫ್ತು(Export) ಮಾಡಲಾಗಿದ್ದು, ಇದು ದೇಶದ ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ.31ರಷ್ಟು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ಹೋಗಿದೆ. 

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ.. ಬಹುದಿನಗಳ ಕನಸು ನನಸು

ಕೋಳಿ, ಹೂಗಳ (flower) ರಫ್ತಿನಲ್ಲೂ ಕೆಂಪೇಗೌಡ ವಿಮಾನ ನಿಲ್ದಾಣವೇ ಮುಂಚೂಣಿಯಲ್ಲಿದ್ದು, 28,182 ಮೆಟ್ರಿಕ್‌ಟನ್‌ನಷ್ಟು ಕೋಳಿ ಹಾಗೂ 1,296 ಮೆ.ಟ ಹೂವುಗಳನ್ನು ರಫ್ತು ಮಾಡಲಾಗಿದೆ.

24 ವಿಮಾನಯಾನ (Aviation) ಸಂಸ್ಥೆಗಳು 46 ವಿದೇಶಗಳಲ್ಲಿ ಪೆರಿಷಬಲ್ (perishable) ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಪೆರಿಷಬಲ್ ಉತ್ಪನ್ನಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ (Technology) ಕೆಡದಂತೆ ಸಂಸ್ಕರಿಸಿ ವೇಗವಾಗಿ ರಫ್ತು ಮಾಡಲಾಗುತ್ತಿದೆ. ಇದರಿಂದ ರಫ್ತು ಬೇಡಿಕೆಯೂ ಸಹ ದಿನೇದಿನೆ ಹೆಚ್ಚುತ್ತಲೇ ಇದೆ ಎಂದು ಬಿಐಎಎಲ್ ಸ್ಟಾರ್ಟಜಿ ಆಂಡ್ ಡೆವಲಪ್‌ಮೆಂಟ್ ಮುಖ್ಯಾಧಿಕಾರಿ ಸಾತ್ಯಕಿ ರಘುನಾಥ್ ಹೇಳಿದ್ದಾರೆ. 

ಪ್ರಧಾನಿ ಅವರ ಆಶಯದಂತೆ ರೈತರ ಉತ್ಪನ್ನಗಳಿಗೆ ಆದಾಯ (Income) ಕೊಡಿಸುವ ನಿಟ್ಟಿನಲ್ಲಿ ಉತ್ಪನ್ನಗಳ ರಫ್ತು ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣ (Airport), ರಫ್ತು ಹಾಗೂ ಪಾಲುದಾರರ ಸಹಯೋಗದಲ್ಲಿ ಕೋಲ್ಡ್ ಸ್ಟೋರೇಜ್‌ನ (cloud storage) ಇನ್ನಷ್ಟು ಮೇಲ್ದರ್ಜೆಗೇರಿಸಲು ಸಹ ಯೊಜಿಸಿದ್ದೇವೆ ಎಂದು ಎಪಿಇಡಿಎ ಅಧ್ಯಕ್ಷ  ಡಾ.ಎಂ. ಅಂಗಮುತ್ತು ತಿಳಿಸಿದ್ದಾರೆ.

ದಕ್ಷಿಣ ಭಾರತದಲ್ಲೇ ಎರಡು ರನ್‌ವೇಗಳಿರುವ (Run Way( ಮೊದಲ ವಿಮಾನ ನಿಲ್ದಾಣ ಎನ್ನುವ ಖ್ಯಾತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಲ್ದಾಣ ಪಾತ್ರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios