Asianet Suvarna News Asianet Suvarna News

1947ರಲ್ಲಿ ದೊರಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ! ಕಂಗನಾ ವಿವಾದ

  • 1947ರಲ್ಲಿ ದೊರಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ! ಕಂಗನಾ ವಿವಾದ
  • - ಪದ್ಮಶ್ರೀ ಪುರಸ್ಕೃತ ನಟಿ ಕಂಗನಾ ರಾಣಾವತ್‌ ವಿವಾದ
  • - ಸ್ವಾತಂತ್ರ್ಯ ಯೋಧರಿಗೆ ಅವಮಾನ: ವ್ಯಾಪಕ ಆಕ್ರೋಶ
     
Actress Kangana says India attained freedom in 2014 and 1947 was  bhiksha triggers outrage  snr
Author
bengaluru, First Published Nov 12, 2021, 7:08 AM IST

 ನವದೆಹಲಿ (ನ.12):  ಭಾರತಕ್ಕೆ (india)  ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಪದ್ಮಶ್ರೀ ಪುರಸ್ಕೃತ ಬಾಲಿವುಡ್‌ ನಟಿ (bollywood actress) ಕಂಗನಾ ರಾಣಾವತ್‌ (Kangana ranaut) ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ.

ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್‌ ಗಾಂಧಿ (Varun Gandhi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ (Congress) ಸೇರಿದಂತೆ ಹಲವು ಪಕ್ಷಗಳು, ಸಿನಿಮಾ ರಂಗದ ಪ್ರಮುಖರು, ಕ್ರೀಡಾ ಕ್ಷೇತ್ರದ ತಾರೆಯರು ಹಾಗೂ ಶ್ರೀಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ವಿರುದ್ಧ ದೇಶ ದ್ರೋಹದ ಕೇಸು ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಇನ್ನು ಹಲವು ಕಡೆ ಕಂಗನಾ ವಿರುದ್ಧ ಪ್ರಕರಣ (Case) ಕೂಡಾ ದಾಖಲಿಸಲಾಗಿದೆ.

ಸುದ್ದಿ ವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಮಾತನಾಡಿದ ಕಂಗನಾ, ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಈ ಮಾತುಗಳನ್ನು ಒಳಗೊಂಡ 24 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಕಂಗನಾ ಈ ಮಾತು ಆಡುವಾಗ ಸಭಾಂಗಣದಲ್ಲಿದ್ದ ಹಲವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

ತಮ್ಮ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿರುವ ಕಂಗನಾ, 1857ರ ದಂಗೆ ಮೊದಲ ಸ್ವಾತಂತ್ರ್ಯ (Freedom) ಹೋರಾಟ. ಆದರೆ ಅದನ್ನು ಹತ್ತಿಕ್ಕಲಾಯಿತು. ಅದಾದ ನಂತರ ಬ್ರಿಟಿಷರ (British) ದೌರ್ಜನ್ಯ ಹಾಗೂ ಕ್ರೂರತೆ ಹೆಚ್ಚಾಯಿತು. ಅದಾದ ಒಂದು ಶತಮಾನದ ಬಳಿಕ ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಸ್ವಾತಂತ್ರ್ಯವನ್ನು ನಾವು ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ಬ್ರಿಟಿಷರು ಕಾಂಗ್ರೆಸ್‌ ಎಂಬ ಹೆಸರನ್ನು ಬಿಟ್ಟು ಹೋದರು. ಅವರು ಬ್ರಿಟಿಷರ ಮುಂದುವರಿದ ಭಾಗ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಾರ್ವತ್ರಿಕ ಆಕ್ರೋಶ:

ಕಂಗನಾ ಹೇಳಿಕೆಯ ವಿಡಿಯೋವನ್ನು ಟ್ವೀಟರ್‌ನಲ್ಲಿ (Twitter) ಹಂಚಿಕೊಂಡಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ, ‘ಇದೊಂದು ದೇಶದ್ರೋಹದ ಕೆಲಸ. ನಾವಿಂದು ಮುಕ್ತ ದೇಶವಾಗಿ ತಲೆ ಎತ್ತಿ ನಿಲ್ಲಲು ರಕ್ತ ಚೆಲ್ಲಿದವರಿಗೆ ಮಾಡಿದ ವಂಚನೆ’ ಎಂದು ಹೇಳಿದ್ದಾರೆ. ಕಂಗನಾ ಅವರ ಹೇಳಿಕೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌, ಶಿವಸೇನೆ  (Shivasena) ನಾಯಕರು ಟೀಕಿಸಿದ್ದಾರೆ. ಈ ನಡುವೆ ಕಂಗನಾ ಹೇಳಿಕೆ ಹಾಗೂ ಅವರ ಭಾಷಣಕ್ಕೆ ಚಪ್ಪಾಳೆ ತಟ್ಟಿದ ವ್ಯಕ್ತಿಗಳ ವಿರುದ್ಧ ಸೆಲೆಬ್ರಿಟಿಗಳು ಕೆಂಡಕಾರಿದ್ದಾರೆ.

ಕಂಗನಾ ಹೇಳಿದ್ದೇನು?

ಗಾಂಧಿ (mahathma gandhiji) ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ಮೋದಿ ಪ್ರಧಾನಿಯಾದ (Prime minister narendra modi) ಬಳಿಕ.

  • 1947ರಲ್ಲಿ ದೊರಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ! ಕಂಗನಾ ವಿವಾದ
  • ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ - ಕಂಗನಾ
  •  ಪದ್ಮಶ್ರೀ ಪುರಸ್ಕೃತ ನಟಿ ಕಂಗನಾ ರಾಣಾವತ್‌ ವಿವಾದ
  •  ಸ್ವಾತಂತ್ರ್ಯ ಯೋಧರಿಗೆ ಅವಮಾನ : ವ್ಯಾಪಕ ಆಕ್ರೋಶ
  •  ಹಲವು ಕಡೆ ಕಂಗನಾ ವಿರುದ್ಧ ಪ್ರಕರಣ ಕೂಡಾ ದಾಖಲು
Follow Us:
Download App:
  • android
  • ios