ಮುಂಬೈ(ಜ.18): ಕಾರು ಅಪಘಾತದಲ್ಲಿ ಬಾಲಿವುಡ್ ನಟಿ ಶಬಾನಾ ಆಜ್ಮಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರದ ರಾಯ್’ಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್’ಪ್ರೆಸ್ ವೇನಲ್ಲಿ ಶಬಾನಾ ಆಜ್ಮಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. 

ಮುಂಬೈಯಿಂದ 60 ಕಿ.ಮೀ ದೂರದಲ್ಲಿರುವ ಕಾಲಾಪುರ್ ಬಳಿ ಇಂದು ಮಧ್ಯಾಹ್ನ 3-30ರ ವೇಳೆಯಲ್ಲಿ ಶಬಾನಾ ಆಜ್ಮಿ ಪ್ರಯಾಣಿಸುತ್ತಿದ್ದ ಕಾರು ಟ್ರಕ್’ಗೆ ಡಿಕ್ಕಿ ಹೊಡೆದಿದೆ. 

ಟ್ರೋಲಿಗರಿಗೆ ಟ್ವಿಟರ್‌ನಲ್ಲಿ ನಟಿ ಶಬನಾ ತಿರುಗೇಟು

ಈ ಕುರಿತು ಮಾಹಿತಿ ನೀಡಿರುವ ರಾಯ್’ಗಡ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಾಸ್ಕರ್, ಶಬಾನಾ ಆಜ್ಮಿ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಮುಂಬೈನ ಕೋಕಿಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಶಬಾನ ಆಜ್ಮಿ ಕಾರು ಅಪಘಾತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಹಿರಿಯ ನಟಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಬಾಲಿವುಡ್‌ನ ಹಿರಿಯ ನಟಿಯಾಗಿರುವ ಶಬಾನಾ ಆಜ್ಮಿ, ಪ್ರಮುಖವಾಗಿ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಅಂಕುರ್, ನಿಶಾಂತ್, ಜುನೂನ್, ಮಾಸೂಮ್, ಮಂಡಿ ಮುಂತಾದ ಚಿತ್ರಗಳಲ್ಲಿ ಇವರ ಅಭಿನಯ ಸದಾ ಸ್ಮರಣೀಯ.