ಪ್ರಕಾಶ್ ರಾಜ್ ರಾಯಭಾರಿಯಾಗಿದ್ದ ಪ್ರಖ್ಯಾತ ಜ್ಯುವೆಲ್ಲರಿಯಿಂದ ಜನರಿಗೆ 100 ಕೋಟಿ ಟೋಪಿ!
ನಟ ಪ್ರಕಾಶ್ ರಾಜ್ ರಾಯಭಾರಿಯಾಗಿದ್ದ ತಮಿಳುನಾಡಿನ ಪ್ರಸಿದ್ಧ ಪ್ರಣವ್ ಜ್ಯುವೆಲ್ಲರಿ ಕಂಪನಿ ದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದು, ಸ್ಥಳೀಯ ಜನರಿಗೆ ಬರೋಬ್ಬರಿ 100 ಕೋಟಿ ರೂಪಾಯಿ ಟೋಪಿ ಹಾಕಿದೆ.

ಬೆಂಗಳೂರು (ಅ.19): ನಟ ಪ್ರಕಾಶ್ ರಾಜ್ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ತಮಿಳುನಾಡಿನ ಪ್ರಸಿದ್ಧ ಜ್ಯುವೆಲ್ಲರಿ ಕಂಪನಿ ಜನರಿಗೆ ಬರೋಬ್ಬರಿ 100 ಕೋಟಿ ರೂಪಾಯಿ ಟೋಪಿ ಹಾಕಿ ತನ್ನೆಲ್ಲಾ ಮಳಿಗೆಗಳನ್ನು ಮುಚ್ಚಿದೆ. ಬಂಗಾರದ ಆಸೆಗಾಗಿ ಪ್ರಣವ್ ಜ್ಯುವೆಲ್ಲರಿಯ ಕೆಲವೊಂದು ಸ್ಕೀಮ್‌ಗಳಲ್ಲಿ ಜನರು ಹಣ ಹೂಡಿದ್ದರು. ಇದರ ಪ್ರಮುಖ ಜಾಹೀರಾತುಗಳಲ್ಲಿ ನಟ ಪ್ರಕಾಶ್ ರಾಜ್ ಕೂಡ ಕಾಣಿಸಿಕೊಂಡಿದ್ದರು. ಆದರೆ, ಜನರು ತಾವು ನೀಡಿದ್ದ ಹಣಕ್ಕೆ ಬಂಗಾರ ಕೇಳಿದಾಗ ಜ್ಯುವೆಲ್ಲರಿ ಕಂಪನಿಯ ಮಾಲೀಕರು ಉಡಾಫೆಯ ಉತ್ತರ ನೀಡಲು ಆರಂಭಿಸಿದ್ದರು. ಇದರ ಬೆನ್ನಲ್ಲಿಯೇ ಈ ಹಗರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲಿಯೇ ಹೂಡಿಕೆದಾರರು ಪೊಲೀಸರಿಗೆ ವೈಯಕ್ತಿಕ ದೂರು ನೀಡಿದ್ದು, ತನಿಖೆ ಆರಂಭಿಸಲಾಗಿದೆ. ಚಿನ್ನದ ಮೇಲಿನ ಹೂಡಿಕೆಗಾಗಿ ಈ ಜ್ಯುವೆಲ್ಲರಿ ಶಾಪ್ 100 ಕೋಟಿ ರೂಪಾಯಿಗಳನ್ನು ಜನರಿಂದ ಸಂಗ್ರಹ ಮಾಡಿತ್ತು. ಈಗ ಜ್ಯುವೆಲ್ಲರಿ ಚೈನ್ ರಾಜ್ಯಾದ್ಯಂತ ತನ್ನ ಅಂಗಡಿಗಳನ್ನು ಮುಚ್ಚಿ ಪರಾರಿಯಾಗಿದೆ. ಈ ಕುರಿತಂತೆ ಮಂಗಳವಾರ ತಮಿಳುನಾಡಿನಲ್ಲಿ ಜನರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಸಾಕಷ್ಟು ಮಂದಿ ದೂರು ನೀಡಿದ್ದು ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ.
ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲರ್ಸ್, ಚೆನ್ನೈ, ಈರೋಡ್, ನಾಗರ್‌ಕೋಯಿಲ್, ಮಧುರೈ, ಕುಂಭಕೋಣಂ ಮತ್ತು ಪುದುಚೇರಿಯಲ್ಲಿ ಶಾಖೆಗಳನ್ನು ಹೊಂದಿದೆ, ಹೆಚ್ಚಿನ ಆದಾಯದ ಭರವಸೆಯ ಮೇಲೆ ಸಾರ್ವಜನಿಕರಿಂದ ಹೂಡಿಕೆಗಳನ್ನು ಸಂಗ್ರಹಿಸುತ್ತಿದೆ ಮತ್ತು 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಹೂಡಿಕೆ ಮಾಡುವವರಿಗೆ ಹೆಚ್ಚಿನ ಇನ್ಸೆಂಟಿವ್ ಅನ್ನು ನೀಡುತ್ತದೆ. ಜ್ಯುವೆಲ್ಲರಿ ಶಾಪ್ ನೀಡಿದ್ದ ಭರವಸೆಯ ಮೇಲೆ ಹೆಚ್ಚಿನ ಜನರು 1 ಲಕ್ಷದಿಂದ 1 ಕೋಟಿಯವರೆಗೆ ಹಣವನ್ನು ಠೇವಣಿ ಇರಿಸಿದ್ದರು.
ಆದರೆ, ಹೂಡಿಕೆಗೆ ಭರವಸೆಯಾಗಿ ನೀಡಿದ್ದ ಬಡ್ಡಿಯನ್ನು ಪಾವತಿಸಲು ಜ್ಯುವೆಲ್ಲರಿ ಮಳಿಗೆ ವಿಫಲವಾದಾಗ ಸುಮಾರು ಎರಡು ತಿಂಗಳ ಹಿಂದೆ ಈ ಇದರ ಬಗ್ಗೆ ಅನುಮಾನ ಬರಲು ಪ್ರಾರಂಭವಾಗಿತ್ತು. ಕೆಲವು ಹೂಡಿಕೆದಾರರು ಈ ಬಗ್ಗೆ ಸಂಪರ್ಕಿಸಿದಾಗ, ಜ್ಯುವೆಲ್ಲರಿ ಮಳಿಗೆಯು ಒಂದು ವಾರದ ಒಳಗೆ ಬಾಕಿ ಮೊತ್ತವನ್ನು ಪಾವತಿ ಮಾಡುವುದಾಗಿ ಭರವಸೆ ನೀಡಿತ್ತು. ತಮ್ಮ ಹಣವನ್ನು ಹೂಡಿಕೆ ಮಾಡಿದವರು ಮಂಗಳವಾರ ತಿರುಚ್ಚಿ ಮತ್ತು ಇತರ ನಗರಗಳಲ್ಲಿ ಅಂಗಡಿ ಮುಚ್ಚಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ ಮತ್ತು ಮಾಲೀಕರನ್ನು ಫೋನ್‌ನಲ್ಲಿ ಸಂಪರ್ಕಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. ಅಂಗಡಿ ಮುಚ್ಚಿರುವ ಮಾಹಿತಿ ವೈರಲ್ ಆಗಿದ್ದು, ಹಣ ಹೂಡಿಕೆ ಮಾಡಿದವರು ಆತಂಕಕ್ಕೆ ಒಳಗಾಗಿದ್ದಾರೆ.
ಸರ್ಕಾರಿ ಭೂಮಿ ನುಂಗಿದ ಆರೋಪ, ಪ್ರಕಾಶ್ ರಾಜ್‌ಗೆ ನೋಟಿಸ್!
ಪ್ರತಿಭಟನೆ ನಡೆಸಿದ ನಂತರ ಫೋರ್ಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾತುಕತೆ ನಡೆಸಿದರು. ಅಧಿಕಾರಿಗಳು ಪ್ರತಿಯೊಬ್ಬ ಹೂಡಿಕೆದಾರರಿಂದ ದೂರುಗಳನ್ನು ಸ್ವೀಕರಿಸಿದರು, ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಚಂದ್ರಯಾನಕ್ಕೆ ಅಪಹಾಸ್ಯ: ಪ್ರಕಾಶ ರೈ ಬಂಧನಕ್ಕೆ ಶ್ರೀರಾಮ ಸೇನೆಯ ಆಗ್ರಹ