ಮದುವೆಗೆಂದು ಒಂದೇ ಬೈಕ್‌ನಲ್ಲಿ ಹೊರಟಿದ್ದ ತಾಯಿ, ಮಗ ಹಾಗೂ ಗರ್ಭಿಣಿ ಸೊಸೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅತಿವೇಗದಿಂದ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್: ಮೂವರ ದುರ್ಮರಣ
ಜೈಪುರ: ಮದುವೆಗೆಂದು ಬೈಕ್‌ನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಮಸಣ ಸೇರಿದೆ. ರಾಜಸ್ಥಾನದ ಜೈಪುರದಲ್ಲಿ ಈ ದುರಂತ ನಡೆದಿದೆ. ತಾಯಿ ಹಾಗೂ ಹೊಸದಾಗಿ ಮದುವೆಯಾದ ಮಗ ಸೊಸೆ ಒಂದೇ ಬೈಕ್‌ನಲ್ಲಿ ಮದುವೆಗೆ ಹೊರಟಿದ್ದರು. ಆದರೆ ವೇಗವಾಗಿ ಹೋಗುತ್ತಿದ್ದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ತಾಯಿ 45 ವರ್ಷದ ಬಲ್ಲು ದೇವಿ, ಆಕೆಯ ಮಗ 24 ವರ್ಷದ ಬಂಟಿ, ಗರ್ಭಿಣಿ ಸೊಸೆ 20 ವರ್ಷದ ಭಾವನಾ ಎಂದು ಗುರುತಿಸಾಗಿದೆ. ಜೈಪುರದ ಜಮ್ವಾರಾಮ್‌ಗಢ್ ಹಾಗೂ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಅಮ್ಮ ಮಗ ಸೊಸೆ ಇದ್ದ ಈ ಕುಟುಂಬ ಒಂದೇ ಬೈಕ್‌ನಲ್ಲಿ ಮದುವೆಯೊಂದಕ್ಕೆ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಮಧ್ಯಾಹ್ನ 1 ಗಂಟೆಯ ವೇಳೆಗೆ ಅಲ್ಲಿನ ರೋಡಾ ನದಿ ಸಮೀಪ ಈ ಅನಾಹುತ ನಡೆದಿದ್ದು, ಅತೀಯಾದ ವೇಗದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಂಟಿ ಪತ್ನಿ ಭಾವನಾ 4 ತಿಂಗಳ ಗರ್ಭಿಣಿಯಾಗಿದ್ದರು, ಮೂವರು ತಲೆಗೆ ಆ ತೀವ್ರ ಗಾಯದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಜಾಮ್ವರಾಮ್ಗಢ ಪೊಲೀಸ್ ಠಾಣೆಯ ಎಸ್‌ಎಚ್‌ಒ ಭಗವಾನ್ ಸಹಾಯ್ ತಿಳಿಸಿದ್ದಾರೆ.
ಇದನ್ನೂ ಓದಿ: ತಾಯಿಯಾದ ತೇಜ್ ಪ್ರತಾಪ್ ಯಾದವ್ ಪ್ರೇಯಸಿ ಅನುಷ್ಕಾ ಯಾದವ್: ನನಗೂ ಮಗುವಿಗೂ ಸಂಬಂಧ ಇಲ್ಲ ಎಂದ ಲಾಲೂ ಪುತ್ರ
ಜಾಮ್‌ವರಮ್‌ಗಢ ಪೊಲೀಸ್ ಠಾಣೆಯ ಎಸ್‌ಎಚ್‌ಒ ಭಗವಾನ್ ಸಹಾಯ್ ಮಾತನಾಡಿ, ಬಂಟಿ ಗೋಪಾಲ್‌ಗಢದ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಭಾವನಾ ಅವರನ್ನು ವಿವಾಹವಾಗಿದ್ದರು. ಭಾನುವಾರ, ದಂಪತಿಗಳು ಬಂಟಿಯ ತಾಯಿ ಬಲ್ಲು ದೇವಿ ಜೊತೆಗೆ ನಿಂಬಿ ಗ್ರಾಮದಲ್ಲಿ ಪರಿಚಯಸ್ಥರೊಬ್ಬರ ಮದುವೆಗೆ ಹೋಗುತ್ತಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ, ಜಾಮ್‌ವರಮ್‌ಗಢ ರಾಜ್ಯ ಹೆದ್ದಾರಿಯಲ್ಲಿ ರೋಡಾ ನದಿಯ ಬಳಿ ಅವರ ಮೋಟಾರ್‌ಸೈಕಲ್ ಅತಿ ವೇಗದ ಚಾಲನೆಯಿಂದಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಮೂವರೂ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿವೆ.
ಈ ಬಗ್ಗೆ ಅಲ್ಲಿದ್ದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದಾಗ, ಜಾಮ್‌ವರಮ್‌ಗಢ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಲ್ಲಿ ಮೂವರೂ ಸಾವನ್ನಪ್ಪಿದರು. ಮೃತದೇಹಗಳನ್ನು ಎಸ್‌ಎಂಎಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ಬುರ್ಖಾ ಧರಿಸಿ ಲೇಡೀಸ್ ಕೋಚ್‌ನಲ್ಲಿ ಯುವಕನ ಪಯಣ: ಮಹಿಳೆಯರು ವಿರೋಧಿಸುತ್ತಿದ್ದಂತೆ ಚಲಿಸುವ ರೈಲಿನಿಂದಲೇ ಕೆಳಗೆ ಹಾರಿದ


