ಶ್ರೀರಾಮಾಯಣ ಅಣಕಿಸಿದ ರಾಮಲೀಲಾ ನಾಟಕ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸೀತಾ ದೇವಿ ಬಾಯಲ್ಲಿ ಸಿಗರೇಟು, ಲಕ್ಷ್ಮಣನ ಬಾಯಲ್ಲಿ ಅವಾಚ್ಯ ಶಬ್ದಗಳು ಸೇರಿದಂತೆ ಹಿಂದೂ ದೇವರ ಅವಹೇಳನ ಮಾಡುವ ರಾಮಲೀಲಾ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ದುರಷ್ಟವಶಾತ್ ಪುಣೆಯ ಅತೀ ದೊಡ್ಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ನಾಟಕ ಪ್ರದರ್ಶಿಸಿದ್ದಾರೆ.
ಪುಣೆ(ಫೆ.03) ಶ್ರೀರಾಮಾಯಣ, ರಾಮ ಸೀತೆ ಸೇರಿದಂತೆ ಹಿಂದೂ ದೇವರನ್ನು, ಸನಾತನ ಧರ್ಮವನ್ನು ಅಣಕಿಸುವ ಚಾಳಿಯಿಂದ ಹಲವರು ಹೊರಬಂದಿಲ್ಲ. ಇದೀಗ ಪುಣೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ರಾಮಲೀಲಾ ನಾಟಕ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ರಾಮಲೀಲಾ ಕಥಾನಕದಲ್ಲಿ ಸೀತಾ ದೇವಿ ಸಿಗರೇಟು ಸೇದುತ್ತಿರುವ, ಲಕ್ಷ್ಮಣ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿರುವ ಹಾಗೂ ಹಿಂದೂ ದೇವರನ್ನು ನಿಂದಿಸುವ ರೀತಿಯಲ್ಲಿ ಪ್ರದರ್ಶಿಸಲಾಗಿದೆ. ಈ ನಾಟಕದ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗರಂ ಆಗಿದೆ. ಈ ಕುರಿತು ದೂರು ದಾಖಲಿಸಲಾಗಿದೆ.
ಪುಣೆ ವಿಶ್ವವಿದ್ಯಾಲಯದ ಲಲಿತಾ ಕಲಾ ಕೇಂದ್ರದಲ್ಲಿ ಈ ರಾಮಲೀಲಾ ಕಥನ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ರಾಮಾಯಣದ ತುಣುಕನ್ನು ನಾಟಕ ರೂಪದಲ್ಲಿ ಪ್ರದರ್ಶಿಸಿದ್ದಾರೆ. ಆದರೆ ರಾಮಾಯಣವನ್ನು ಆಧುನಿಕತೆಗೆ ಬೇಕಾದಂತೆ ಪರಿವರ್ತಿಸಲಾಗಿದೆ. ಸೀತಾ ದೇವಿ ಸಿಗರೇಟು ಸೇದುತ್ತಾ ಮಾತನಾಡುತ್ತಿರುವ ದೃಶ್ಯವಿದೆ. ಇತ್ತ ಲಕ್ಷ್ಮಣನ ಬಾಯಲ್ಲಿ ಅವಾಚ್ಯ ಶಬ್ದಬಿಟ್ಟು ಬೇರೇನು ಇಲ್ಲ.
ಮಂಗಳೂರು: ಹಿಂದೂ ದೇವರ ನಿಂದನೆ, ಮುಸ್ಲಿಂ ವ್ಯಕ್ತಿ ಬಂಧನ
ಇದೇ ರಾಮಲೀಲಾ ಕಥನದಲ್ಲಿ ಶ್ರೀರಾಮ ಸೇರಿದಂತೆ ಹಿಂದೂ ದೇವರನ್ನು ಅವಮಾನಿಸಲಾಗಿದೆ. ನಾಟಕ ಪ್ರದರ್ಶಗೊಳ್ಳುತ್ತಿದ್ದಂತೆ ಹಿಂದೂಗಳ ಭಾವನೆಗೆ ಘಾಸಿ ಮಾಡುವ ಪ್ರಯತ್ನ ಮಾಡಲಾಗಿದೆ. ಸೀತಾ ದೇವಿ ಬಾಯಲ್ಲಿ ಸಿಗರೇಟು, ಅವಾಚ್ಯ ಪದಗಳನ್ನು ಕೇಳಿದ ಅಖಿಲಭಾರತ ವಿದ್ಯಾರ್ಥಿ ಪರಿಷತ್ ಘಟಕದ ವಿದ್ಯಾರ್ಥಿಗಳ ಹಾಗೂ ಆರ್‌ಎಸ್‌ಎಸ್ ನೇರವಾಗಿ ವೇದಿಕೆ ಬಳಿ ಆಗಮಿಸಿ ನಾಟಕ ನಿಲ್ಲಿಸುವಂತೆ ಸೂಚಿಸಿದೆ.
ನಾಟಕ ನಿಲ್ಲಿಸಲು ಸೂಚನೆ ನೀಡುತ್ತಿದ್ದಂತೆ ಭಾರಿ ಚಕಮಕಿ ನಡೆದಿದೆ. ಈ ನಾಟಕ ಪ್ರದರ್ಶನ ಮಾಡಿಯೇ ತೀರುತ್ತೇವೆ ಎಂದು ನಾಟಕ ಆಯೋಕರು, ಕೆಲ ವಿದ್ಯಾರ್ಥಿಗಳ ಸಂಘಟನೆಗಳು ಪಟ್ಟು ಹಿಡಿದಿದೆ. ಇದಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದಾರೆ. ಆದರೆ ಎಬಿವಿಪಿ ಹಾಗೂ ಆರ್‌ಎಸ್ಎಸ್ ಪಟ್ಟು ಬಿಡದೆ ನಾಟಕ ನಿಲ್ಲಸು ಸೂಚಿಸಿದೆ. ನೂಕಾಟ, ತಳ್ಳಾಟ ಹೆಚ್ಚಾಗಿದೆ.
ಹಿಂದೂ ದೇವರ ವಿರುದ್ಧ ಹೇಳಿಕೆ, ಆರೋಪಿಗೆ ಪೊಲೀಸ್ ವಾಹನದಲ್ಲಿ ಥಳಿಸಿದ ಉದ್ರಿಕ್ತರ ಗುಂಪು!
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನಾಟಕ ನಿಲ್ಲಿಸಲಾಗಿದೆ. ಇತ್ತ ನಾಟಕದ ವಿರುದ್ಧ ದೂರು ದಾಖಲಿಸಲಾಗಿದೆ. ನಾಯಕ ಆಯೋಜಿಸಿದ ಗುಂಪು, ಎಬಿವಿಪಿ, ಆರ್‌ಎಸ್‌ಎಸ್ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ಎರಡು ಗುಂಪಿನ ವಿದ್ಯಾರ್ಥಿಗಳನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಾಟಕ ಆಯೋಜನೆ ಮಾಡಿದ ಘಟಕ, ನಿರ್ದೇಶಕ, ಪಾತ್ರಧಾರಿಗಳು ಸೇರಿದಂತೆ ಈ ನಾಟಕಕ್ಕೆ ಚಪ್ಪಾಳೆ ಸಿಡಿಸಿ ಬೆಂಬಲ ಸೂಚಿಸಿದ ಎಲ್ಲರ ಮೇಲೂ ಕ್ರಮ ಜರುಗಿಸಲು ಆಗ್ರಹ ಜೋರಾಗುತ್ತಿದೆ. ಕ್ರಮ ಕೈಗೊಳ್ಳಲಿದ್ದರೆ, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.
