ಹಿಂದೂ ದೇವತೆಗಳ ವಿರುದ್ಧ ಹೇಳಿಕೆ ನೀಡಿದ ವ್ಯಕ್ತಿಯನ್ನು ಉದ್ರಿಕ್ತರ ಗುಂಪು ಪೊಲೀಸ್ ವಾಹನದೊಳಕ್ಕೆ ನುಗ್ಗಿ ಥಳಿಸಿದ ಘಟನೆ ನಡೆದಿದೆ. ಪೊಲೀಸರು ಹರಸಾಹಸ ಪಟ್ಟು ಉದ್ರಿಕ್ತರ ಗುಂಪಿನಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಹೈದಹಾಬಾದ್(ಫೆ.28): ಹಿಂದೂ ದೇವರಿಗೆ ಅವಮಾನಿಸಿ ಹೇಳಿಕೆ ನೀಡಿ ವರ್ಷಗಳೇ ಉರುಳಿತ್ತು. ಆದರೆ ಈ ನೋವು ಮಾತ್ರ ಹಿಂದೂ ಧರ್ಮದ ಕೆಲ ಗುಂಪುಗಳಲ್ಲಿ ಹಾಗೇ ಮಡುಗಟ್ಟಿತ್ತು. ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸರ್ ವಾಹನದೊಳಗಿದ್ದ ಅದೇ ವ್ಯಕ್ತಿಗೆ ಥಳಿಸಿದ ಘಟನೆ ನಡೆದಿದೆ. ಉದ್ರಿಕ್ತರ ಗುಂಪು ಪೊಲೀಸ್ ವಾಹನದೊಳಕ್ಕೆ ನುಗ್ಗಿ, ಆರೋಪಿ ಎಳೆದೊಯ್ದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ತಕ್ಷಣೆ ಕಾರ್ಯಪ್ರವೃತ್ತರಾದ ಪೊಲೀಸ್, ಉದ್ರಿಕ್ತರ ಕೈಯಿಂದ ಆರೋಪಿಯನ್ನು ರಕ್ಷಿಸಲು ಹರಸಾಹಸ ಮಾಡಿದ ಘಟನೆ ತೆಲಂಗಾಣ ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ.
42 ವರ್ಷದ ಬೈರಿ ನರೇಶ್ ವರ್ಷದ ಹಿಂದೆ ಹಿಂದೂ ದೇವರ ವಿರುದ್ಧ ಹೇಳಿಕೆ ನೀಡಿದ್ದರು. ನರೇಶ್ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿತ್ತು. ಈ ದೂರಿನ ಆಧಾರದಲ್ಲಿ ಬೈರಿ ನರೇಶ್ ಬಂಧನಕ್ಕೊಳಗಾಗಿದ್ದರು. ಬಳಿಕ ಬಿಡುಗಡೆಯಾಗಿದ್ದರು. ಇದೀಗ ಹೈದರಾಬಾದ್ ಸಮೀಪದ ಕಾನೂನು ಕಾಲೇಜಿನ ಕಾರ್ಯಕ್ರಮದಲ್ಲಿ ಬೈರಿ ನರೇಶ್ ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಬೈರಿ ನರೇಶ್, ತನಗೆ ಬೆದರಿಕೆ ಇದೆ. ಈ ಕಾಲೇಜಿನಿಂದ ಹೊರಹೋದರೆ ಹಲ್ಲೆಯಾಗುವ ಸಾಧ್ಯತೆ ಇದೆ ಎಂದಿದ್ದರು. ಹೀಗಾಗಿ ಪೊಲೀಸರಿಗೆ ಕರೆ ಮಾಡಿ ರಕ್ಷಣಗೆ ಆಗಮಿಸುವಂತೆ ಕೋರಲಾಗಿತ್ತು.
ರಾಮ ದೇವರಲ್ಲ ಕಥೆಯಲ್ಲಿನ ಪಾತ್ರವಷ್ಟೇ: ಬಿಹಾರ ಮಾಜಿ ಸಿಎಂ ಹೇಳಿಕೆ
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪೊಲೀಸರು ತಮ್ಮ ವಾಹನದ ಮೂಲಕ ಕಾನೂನು ಕಾಲೇಜಿಗೆ ಆಗಮಿಸಿದರು. ಬಳಿಕ ಬೈರಿ ನರೇಶ್ ಪೊಲೀಸ್ ವಾಹನ ಹತ್ತಿ ಕುಳಿತಿಕೊಂಡಿದ್ದೆ ತಡ, ಕೆಲ ಯುವಕರ ಗುಂಪು ಪೊಲೀಸ್ ವಾಹನದೊಳಗೆ ಕುಳಿತಿದ್ದ ಬೈರಿ ನರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ವಾಹನದ ಸುತ್ತ ಪೊಲೀಸರಿದ್ದರೂ ಅವರ ಕಣ್ಣತಪ್ಪಿಸಿ ಏಕಾಏಕಿ ದಾಳಿ ಮಾಡಲಾಗಿದೆ. ನರೇಶ್ ಬಟ್ಟೆ ಹಿಡಿದು ಎಳೆದಿದ್ದಾರೆ. ಬಳಿಕ ಮುಖ ಸೇರಿದಂತೆ ಒಂದರ ಹಿಂದೊಂದರಂತೆ ಪಂಚ್ ನೀಡಿದ್ದಾರೆ. ಒಬ್ಬರ ಹಿಂದೊಬ್ಬರು ಎರಡೂ ಬಂದಿಯಿಂದ ದಾಳಿ ಮಾಡಿದ್ದಾರೆ. ತೀವ್ರ ಹಲ್ಲೆ ನಡೆಸಿದ್ದಾರೆ.
ಪೊಲೀಸರು ಸನಿಹದಲ್ಲಿದ್ದರೂ ಹಲ್ಲೆ ನಡೆಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಉದ್ರಿಕ್ತ ಗುಂಪಿನಿಂದ ಬೈರಿ ನರೇಶನ್‌ನ್ನು ರಕ್ಷಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅಯ್ಯಪ್ಪ ಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಡಿಸೆಂಬರ್ ತಿಂಗಳಲ್ಲೇ ನರೇಶ್‌ನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆಯೂ ನರೇಶ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಆದರೆ ಕೈಗೂಡಲಿಲ್ಲ. ಇದೀಗ ನರೇಶ್ ಮೇಲೆ ಹಲ್ಲೆ ನಡೆಸಲಾಗಿದೆ.
ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ
ಇದೀಗ ಬೈರಿ ನರೇಶ್ ಪತ್ನಿ ದೂರು ನೀಡಿದ್ದಾರೆ. ಬೈರಿ ನರೇಶ್‌ಗೆ ಬೆದರಿಕೆ ಇದೆ. ಸೂಕ್ತ ರಕ್ಷಣೆ ನೀಡಬೇಕು. ಇಷ್ಟೇ ಅಲ್ಲ ನರೇಶ್ ವಿರುದ್ಧ ದಾಳಿ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ಹಿಂದೂ ಸಂಘಟನೆಗಳು ಹಿಂದೂ ಧರ್ಮ, ದೇವರನ್ನು ಅಪಮಾನಿಸುವ ಕೆಲಸಕ್ಕೆ ಯಾರು ಕೈಹಾಕಬೇಡಿ ಎಂಬ ಎಚ್ಚರಿಕೆ ನೀಡಿದೆ. ನಿಮಗೆ ಇಷ್ಟವಿರುವ ಧರ್ಮ ಅನುಸರಿಸಿ. ಆದರೆ ಹಿಂದೂ ಧರ್ಮವನ್ನು, ದೇವರ ವಿರುದ್ಧ ಹೇಳಿಕೆ ನೀಡಬೇಡಿ. ಸಹನೆಯಿಂದ ತಾಳ್ಮೆಯಿಂದ ಸಾವಿರಾರು ವರ್ಷಗಳ ಹಿಂದೂ ಬಾಂಧವರು ನಡೆದುಕೊಂಡಿದ್ದಾರೆ. ಇದೀಗ ಸಹನೆ ಕಟ್ಟೆ ಒಡೆದಿದೆ ಎಂದಿದ್ದಾರೆ.
