Asianet Suvarna News Asianet Suvarna News

ಸಿಂಧು ಸೂರ್ಯಕುಮಾರ್‌ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌, ಕೋರ್ಟ್‌ಗೆ ಶರಣಾದ ಮಾಜಿ ಜಡ್ಜ್‌!

‘ಕವರ್ ಸ್ಟೋರಿ’ಯಲ್ಲಿ ಹೇಳಿರುವುದು ತಪ್ಪು ಎಂದು ಸುದೀಪ್ ಏಷ್ಯಾನೆಟ್ ನ್ಯೂಸ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಫೇಸ್‌ಬುಕ್‌ನಲ್ಲಿ ಸುದೀಪ್, ಸಿಂಧು ಸೂರ್ಯಕುಮಾರ್ ಅವರನ್ನು ಅವಮಾನಿಸುವ ದೀರ್ಘ ಪೋಸ್ಟ್‌ ಮಾಡಿದ್ದರು.

abusive FB post against Sindhu Sooryakumar Ex judge S Sudeep surrenders before court san
Author
First Published Aug 3, 2023, 4:38 PM IST

ತಿರುವನಂತಪುರಂ: ಏಷ್ಯಾನೆಟ್ ನ್ಯೂಸ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ವಿರುದ್ಧ ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಮಾಜಿ ಸಬ್‌ ಜಡ್ಜ್‌ ಎಸ್‌ ಸುದೀಪ್‌ ಅವರು ಗುರುವಾರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಏಷ್ಯಾನೆಟ್ ನ್ಯೂಸ್ ಮ್ಯಾನೇಜಿಂಗ್ ಎಡಿಟರ್ ಮನೋಜ್ ಕೆ ದಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಶುಕ್ರವಾರದ ಒಳಗಾಗಿ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಅದಕ್ಕೂ  ಮುನ್ನವೇ ಎಸ್‌.ಸುದೀಪ್‌ ಕೋರ್ಟ್‌ನ ಮುಂದೆ ಶರಣಾಗಿದ್ದಾರೆ. ಜುಲೈ 21 ರಂದು, ತಿರುವನಂತಪುರಂ ಕಂಟೋನ್ಮೆಂಟ್ ಪೊಲೀಸರು ಐಪಿಸಿ ಸೆಕ್ಷನ್ 354 ಎ (1) ಮತ್ತು ಐಟಿ ಕಾಯ್ದೆಯ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಶಬರಿಮಲೆ ವಿಷಯದ ಕುರಿತು ತಮ್ಮ ಪೋಸ್ಟ್‌ಗಳಿಗೆ ಹೈಕೋರ್ಟ್‌ನ ವಿಚಾರಣೆಯ ನಂತರ ಛೀಮಾರಿ ಹಾಕಿದ ನಂತರ ಜೂನ್ 2021 ರಲ್ಲಿ ಸಬ್ ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುದೀಪ್,  ಸರ್ಕಾರದ ಹಲವು ತಪ್ಪು ನಿರ್ಧಾರಗಳನ್ನು ವರದಿ ಮಾಡಿ ಕೇರಳ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ 'ಕವರ್‌ ಸ್ಟೋರಿ' ಕಾರ್ಯಕ್ರಮದ ವಿರುದ್ಧ ಎಡರಂಗ ಬೆಂಬಲಿತ ಮಾಜಿ ಜಡ್ಜ್ ತಮ್ಮ ಘನತೆಯ ಬಗ್ಗೆಯೂ ಯೋಚಿಸದೇ ಕೆಟ್ಟದಾದ ಬರಹ ಬರೆದಿದ್ದರು.

'ಕವರ್ ಸ್ಟೋರಿ' ಯಾವಾಗಲೂ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿನ ತೀಕ್ಷ್ಣವಾದ ಟೀಕೆ ಮತ್ತು ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ. ಅವರ ಪೋಸ್ಟ್ ಏಷ್ಯಾನೆಟ್ ನ್ಯೂಸ್ ನಾಯಕತ್ವವನ್ನು ಅಪಹಾಸ್ಯ ಮಾಡಿದ್ದಲ್ಲದೆ, ಸಾರ್ವಜನಿಕ ದೃಷ್ಟಿಯಲ್ಲಿ ಚಾನಲ್ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು.

ಎಡರಂಗ ಬೆಂಬಲಿತ ಮಾಜಿ ಜಡ್ಜ್‌ನಿಂದ ಏಷ್ಯಾನೆಟ್ ಎಡಿಟರ್ ವಿರುದ್ಧ ಅಶ್ಲೀಲ ಬರಹ: ನೆಟ್ಟಿಗರಿಂದ ತೀವ್ರ ಖಂಡನೆ

ಸುದೀಪ್ ಅವರು ಉಪ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ, ಶಬರಿಮಲೆ ವಿಷಯದ ಬಗ್ಗೆ ಮತ್ತು ಕೇಂದ್ರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹೊರಹಾಕಿದರು. ಅವರ ವಿರುದ್ಧ ಹಲವು ಅರ್ಜಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ತನಿಖಾ ಸಮಿತಿ ಶಿಸ್ತು ಕ್ರಮಕ್ಕೆ ನಿರ್ದೇಶನ ನೀಡಿದ್ದರಿಂದ, ಸುದೀಪ್ ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಎಡರಂಗ ಹಾಗೂ ಕೇರಳ ಸರ್ಕಾರದ ವಿರುದ್ಧ ಯಾರೇ ಟೀಕೆ ಮಾಡಿದರು ಅವರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರು.

ಏಷ್ಯಾನೆಟ್‌ ನ್ಯೂಸ್‌ ಪತ್ರಕರ್ತರ ಮೇಲಿನ ಕೇಸ್‌ ವಾಪಾಸ್‌ ತೆಗೆದುಕೊಳ್ಳಿ, ಕೇರಳ ಸರ್ಕಾರಕ್ಕೆ ಬುದ್ಧಿಜೀವಿಗಳ ಪತ್ರ

Follow Us:
Download App:
  • android
  • ios