ನವದೆಹಲಿ(ನ. 15)  ದೀಪಾವಳಿ ಹಬ್ಬದ ಸಡಗರ ಎಲ್ಲ ಕಡೆ ಮನೆ ಮಾಡಿದೆ. ಈ ಬಾರಿ ಕೊರೋನಾ ಕಾರಣಕ್ಕೆ ಉಸಿರಾಟದ ಮೇಲೆ ಮತ್ತಷ್ಟು ತೊಂದರೆ ಮಾಡುವ ಪಟಾಕಿ ಬೇಡ  ಎಂದು ಸರ್ಕಾರವೇ ನಿಷೇಧ ಹೇರಿತ್ತು.  ಆದರೆ ಜನ ಮಾತ್ರ ಮಾತು ಕೇಳಿಲ್ಲ.  ಸಂಜೆಯಾಗುತ್ತಲೇ ಪಟಾಕಿ ಸದ್ದು ಕೇಳುತ್ತಲೇ ಇದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೊದಲೆ ಗಾಳಿ ವಿಷವಾಗಿದೆ. ಅದರ ನಡುವೆ ಈಗ ಪಟಾಕಿಯ ಅಬ್ಬರ. ನಾಗರಿಕರು ಸೋಶಿಯಲ್ ಮೀಡಿಯಾದಲ್ಲಿ ಪಟಾಕಿ ಸಿಡಿತದ ಬಗ್ಗೆ ತಮ್ಮ ಅಭಿಪ್ರಾಯ ಮುಕ್ತವಾಗಿ ಬರೆದಿದ್ದಾರೆ.

ಪಟಾಕಿ ಸೇಲ್; ರಿಯಾಲಿಟಿ ಚೆಕ್

ಗಾಳಿಯ ಗುಣಮಟ್ಟವನ್ನು ವಿವಿಧ ಹೆಸರಿನಲ್ಲಿ ಅಳೆಯಲಾಗುತ್ತದೆ. ಒಳ್ಳೆಯ, ತೃಪ್ತಿದಾಯಕ, ಮಾಡಿರೇಟ್, ಪೂವರ್, ವೆರಿ ಪೂವರ್ ಮತ್ತು ತೀವ್ರ. ದೆಹಲಿ ಈಗಾಗಲೇ ತೀವ್ರ ಮಟ್ಟಕ್ಕೆ ತಲುಪಿದ್ದು ಈ ನಡುವೆ ಪಟಾಕಿ ಅಬ್ಬರ ಬೇರೆ ಆತಂಕ ತಂದೊಡ್ಡಿದೆ. 

ತಮ್ಮ ಸುತ್ತಮುತ್ತಲೂ ಪಟಾಕಿ ಸಿಡಿಸುವುದನ್ನು ವಿಡಿಯೋ ಮಾಡಿರುವ ನಾಗರಿಕರು ಶೇರ್ ಮಾಡಿಕೊಂಡಿದ್ದು ಎಲ್ಲಿದೆ ಕಾನೂನು? ಎಲ್ಲಿದೆ ನಿಯಮಾವಳಿ ಎಂದು ಪ್ರಶ್ನೆ ಮಾಡಿದ್ದಾರೆ.