ದೆಹಲಿ ಆಪ್ ಸರ್ಕಾರದ ಮುಖವಾಡ ಬಯಲು, ಮಹಿಳಾ ಸಮ್ಮಾನ್-ಸಂಜೀವಿನಿ ಯೋಜನೆ ನಕಲಿ?

ದೆಹಲಿ ಚುನಾವಣೆಗೂ ಮುನ್ನ ಕೇಜ್ರಿವಾಲ್​ ಉಚಿತ ಕೊಡುಗೆಗಳನ್ನ ಘೋಷಿಸಿದ್ದಾರೆ. ಆದ್ರೆ, ಸಂಜೀವಿನಿ ಮತ್ತು ಮಹಿಳಾ ಸಮ್ಮಾನ್ ಯೋಜನೆ ಸರ್ಕಾರದ ಅಧಿಕೃತ ಯೋಜನೆಗಳಲ್ಲ ಅನ್ನೋದು ಬಹಿರಂಗವಾಗಿದೆ.

AAP lie exposed Mahila Samman Sanjeevani scheme does not exist in Delhi govt scheme ckm

ನವದೆಹಲಿ(ಡಿ.25): ದೆಹಲಿ ಚುನಾವಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಉಚಿತ ಕೊಡುಗೆಗಳನ್ನ ಘೋಷಿಸಿದ್ದಾರೆ. ಆದ್ರೆ, ಸಂಜೀವಿನಿ ಮತ್ತು ಮಹಿಳಾ ಸಮ್ಮಾನ್ ಯೋಜನೆ ಅಧಿಕೃತವಲ್ಲ ಅಂತ ಎರಡು ಇಲಾಖೆಗಳು ನೋಟಿಸ್​ ಜಾರಿ ಮಾಡಿವೆ. ಈ ಯೋಜನೆಗಳಿಗೆ ನಡೆಯುತ್ತಿರುವ ನೋಂದಣಿಗಳು ಎಲ್ಲಾ ನಕಲಿ ಎಂದು ಹೇಳಲಾಗಿದೆ. ದೆಹಲಿ ಚುನಾವಣೆಗೂ ಮುನ್ನ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಕಾರಣ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಈ ಎರಡೂ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ನೋಂದಣಿ ಅಭಿಯಾನ ನಡೆಸುತ್ತಿದ್ದಾರೆ.

ದೆಹಲಿ ಆರೋಗ್ಯ ಇಲಾಖೆ ನೋಟಿಸ್​ನಲ್ಲಿ ಹೇಳಿದ್ದೇನು?

ದೆಹಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 'ಸಂಜೀವಿನಿ ಯೋಜನೆ' ಬಗ್ಗೆ ಹೇಳಿಕೆ ನೀಡಿದ್ದು, ದೆಹಲಿ ಜನರಲ್ಲಿ ಸಂಜೀವಿನಿ ಯೋಜನೆ ಹೆಸರಿನಲ್ಲಿ ಒಂದು ಯೋಜನೆ ಪ್ರಚಾರ ಮಾಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ದೆಹಲಿಯ ಎಲ್ಲಾ ಆಸ್ಪತ್ರೆಗಳಲ್ಲಿ (ಸರ್ಕಾರಿ-ಖಾಸಗಿ) ಆದಾಯದ ಮಿತಿಯನ್ನ ಪರಿಗಣಿಸದೆ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಲಾಗ್ತಿದೆ. ಅನಧಿಕೃತ ವ್ಯಕ್ತಿಗಳು ನೋಂದಣಿ ಅಭಿಯಾನ ನಡೆಸುತ್ತಿದ್ದು, ಹಿರಿಯ ನಾಗರಿಕರಿಂದ ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕೇಳುತ್ತಿದ್ದಾರೆ. ನಕಲಿ ಆರೋಗ್ಯ ಯೋಜನೆ ಕಾರ್ಡ್​ಗಳನ್ನೂ ವಿತರಿಸಲಾಗ್ತಿದೆ. ದೆಹಲಿ ಸರ್ಕಾರ ಅಂತಹ ಯಾವುದೇ ಯೋಜನೆಯನ್ನ ಜಾರಿಗೆ ತಂದಿಲ್ಲ. ಸಂಜೀವಿನಿ ಯೋಜನೆಯಡಿ ಉಚಿತ ಚಿಕಿತ್ಸೆ ಅಂತ ಯಾರಾದ್ರೂ ಹೇಳಿದ್ರೆ ನಂಬಬೇಡಿ ಅಂತ ಹೇಳಿದೆ.

ದಿಲ್ಲಿಯಲ್ಲೂ ಗೃಹಲಕ್ಷ್ಮೀ: ಆಪ್‌ ಗೆದ್ದರೆ ಮಹಿಳೆಯರಿಗೆ ಮಾಸಿಕ 2100 ರೂಪಾಯಿ ಘೋಷಣೆ!

ಅರವಿಂದ್ ಕೇಜ್ರಿವಾಲ್ ಘೋಷಿಸಿದ ಯೋಜನೆ: ಡಿಸೆಂಬರ್ 12ರಂದು ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ಘೋಷಣೆ ಮಾಡಿದ್ದರು. ಮಹಿಳೆಯರು, ಹಿರಿಯ ನಾಗರೀಕರು ಈ ಸೌಲಭ್ಯ ಪಡೆಯಲಿದ್ದಾರೆ ಎಂದು ಕೇಜ್ರಿವಾಲ್ ಘೋಷಿಸಿದ್ದರು. ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ದೆಹಲಿಯ ಮಹಿಳೆಯರು ಪ್ರತಿ ತಿಂಗಳು 2,100 ರೂಪಾಯಿ ಪಡೆಯಲಿದ್ದಾರೆ. ಇದು ಎಲ್ಲಾ ಮಹಿಳೆಯರಿಗೆ ನೀಡಲಾಗುತ್ತದೆ ಎಂದಿದ್ದರು. ಇನ್ನು ಸಂಜೀವಿನಿ ಯೋಜನೆಯಡಿಯಲ್ಲಿ ಹಿರಿಯ ನಾಗರೀಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿದ ಎಂದಿದ್ದರು. 

ಇದೇ ಘೋಷಣೆಯಲ್ಲಿ ಅರವೀಂದ್ ಕೇಜ್ರಿವಾಲ್ ಮಹತ್ವದ ಸೂಚನೆಯನ್ನು ನೀಡಿದ್ದರು. ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪ್ರತಿ ಮನೆ ಮನಗೆ ತೆರಳಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಹಾಗೂ ಸಂಜೀವಿನಿ ಯೋಜನೆಗೆ ನೋಂದಣಿ ಮಾಡಿಸಬೇಕು. ಎಲ್ಲರಿಗೂ ಈ ಯೋಜನೆ ತಲುಪಬೇಕು ಎಂದು ಸೂಚಿಸಿದ್ದರು. ಇದರಂತೆ ಆಪ್ ಕಾರ್ಯಕರ್ತರು ಈಗಾಗಲೇ ನೋಂದಣಿ ಅಭಿಯಾನ ಆರಂಭಿಸಿದೆ. ಪ್ರತಿ ಮನೆ ಮನೆಗೆ ತೆರಳಿ ಮಹಿಳೆಯರು, ಹಿರಿಯ ನಾಗರೀಕರ ಮಾಹಿತಿ ಕಲೆ ಹಾಕುತ್ತಿದೆ. ಆಧಾರ್ ನಂಬರ್, ಮೊಬೈಲ್ ನಂಬರ್, ರೇಷರ್ ಕಾರ್ಡ್ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿ ನೋಂದಣಿ ಮಾಡುತ್ತಿದೆ. 

 

 

ನೋಂದಣಿ ಅಭಿಯಾನ:  ನೋಂದಣಿ ಅಭಿಯಾನ ಭಾರಿ ವೇಗದಲ್ಲಿ ನಡೆಯುತ್ತಿರುವಾಗಲೇ ದೆಹಲಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಮಹಿಳಾ ಸಮ್ಮಾನ್ ಹಾಗೂ ಸಂಜೀವಿನಿ ಯೋಜನೆ ದೆಹಲಿ ಸರ್ಕಾರದ ಅನುಮೋದನೆ ಪಡೆದ ಯೋಜನೆಗಳಲ್ಲ. ಈ ರೀತಿಯ ಯಾವುದೇ ಯೋಜನೆ ಇದುವರೆಗೂ ದೆಹಲಿ ಸರ್ಕಾರದ ಯೋಜನಾ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಜನರು ಮೋಸ ಹೋಗಬೇಡಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ವಿಧಾನಸಭಾ ಚುನಾವಣೆ ಬೆನ್ನಲ್ಲೇ ಈ ಸೂಚನೆ ದೆಹಲಿ ಆಮ್ ಆದ್ಮಿ ಪಾರ್ಟಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. 

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಎಎಪಿ ವಿರೋಧ!

ಇತ್ತ ಬಿಜೆಪಿ ಇದೀಗ ಆಪ್ ಬಂಡವಾಳ ಬಯಲಾಗಿದೆ ಎಂದಿದೆ. ಚುನಾವಣೆ ಸಮೀಪಿಸುತ್ತಿರುವಾಗ ಸುಳ್ಳು ಭರವಸೆ ನೀಡಿ ಜನರನ್ನು ಮೋಸ ಮಾಡಲಾಗುತ್ತಿದೆ ಎಂದಿದೆ. 

 

 

Latest Videos
Follow Us:
Download App:
  • android
  • ios