Asianet Suvarna News Asianet Suvarna News

ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವೆ, ಚಾಲೆಂಜ್ ಹಾಕಿದ ಆಪ್ ನಾಯಕ ಯು ಟರ್ನ್!

ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುವುದಿಲ್ಲ, ಇದು ಖಚಿತ. ಒಂದು ವೇಳೆ ಪ್ರಧಾನಿಯಾದರೆ ನಾನು ತಲೆ ಬೋಳಿಸುವೆ ಎಂದು ಆಪ್ ನಾಯಕ ಸವಾಲು ಹಾಕಿದ್ದ. ಆದರೆ ಮೋದಿ ಪ್ರಧಾನಿಯಾಗುತ್ತಿದ್ದಂತೆ ನಾಯಕ ಉಲ್ಟಾ ಹೊಡೆದಿದ್ದಾರೆ.
 

AAP Leader somnath bharti takes u turn on shave head promise if Modi become PM 3rd term ckm
Author
First Published Jun 10, 2024, 6:40 PM IST

ನವದೆಹಲಿ(ಜೂ.10) ಒಂದು ಮತ ಹೆಚ್ಚಿಗೆ ಪಡೆದರೆ ರಾಜೀನಾಮೆ, ಮೋದಿ ಮತ್ತೆ ಪ್ರಧಾನಿಯಾದರೆ ತಲೆ ಬೋಳಿಸುವೆ ಸೇರಿದಂತೆ  ನಾಯಕರು ಹಲವು ಸವಾಲು ಹಾಕಿದ್ದರು. ಆದರೆ ಸವಾಲು ಹಾಕಿದವರು ಇದೀಗ ಉಲ್ಟಾ ಹೊಡೆದಿದ್ದಾರೆ. ಆಪ್ ನಾಯಕ ಸೋಮನಾಥ್ ಭಾರ್ತಿ ಸವಾಲು ಭಾರಿ ವೈರಲ್ ಆಗಿತ್ತು. ಇದೀಗ ಅಷ್ಟೇ ಟ್ರೋಲ್ ಆಗುತ್ತಿದೆ. ಈ ಚುನಾವಣೆ ಇಂಡಿಯಾ ಒಕ್ಕೂಟದ ಪರವಾಗಿದೆ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದಿದ್ದರು. ಇದರ ಜೊತೆಗೆ ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವೆ ಎಂದು ಸವಾಲು ಹಾಕಿದ್ದರು. ಇದೀಗ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಮೋದಿ ಸರ್ಕಾರ ರಚನೆಯಾಗುತ್ತಿದ್ದಂತೆ ಸೋಮನಾಥ್ ಭಾರ್ತಿ ಯೂ ಟರ್ನ್ ಹೊಡೆದಿದ್ದಾರೆ.

ತಮ್ಮ ಹೇಳಿಕೆ ಟ್ರೋಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸೋಮನಾಥ್ ಭಾರ್ತಿ, ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದು ಸರ್ಕಾರ ರಚಿಸಿ ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಹೇಳಿದ್ದೇನೆ.  ಮೋದಿ ನೇತೃತ್ವದ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಿಲ್ಲ. ಮೋದಿ ಹಾಗೂ ಬಿಜೆಪಿಗೆ ಜನ ಪ್ರಧಾನಿಯಾಗುವಷ್ಟು ಮತ ನೀಡಿಲ್ಲ. ಮೂರನೇ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಆರಿಸಿ ಬಂದರೆ ತಲೆ ಬೋಳಿಸುತ್ತಿದ್ದೆ. ಆದರೆ ಹಾಗಾಗಿಲ್ಲ. ಸದ್ಯ ಎನ್‌ಡಿಎ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.

ಮೋದಿ ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ರೂ ಹಣ ಜಮೆ!

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಧೈಸಲಾಗಿದೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಜೆಡಿಯು, ಟಿಡಿಪಿ ಹಾಗೂ ಇತರ ಮೈತ್ರಿ ಪಕ್ಷಗಳ ನೆರವಿನಿಂದ ಮೋದಿ ಪ್ರಧಾನಿಯಾಗಿದ್ದಾರೆ. ಬಿಜೆಪಿ ಹಾಗೂ ಮೋದಿ ಚುನಾವಣೆಗೂ ಮೊದಲು ಬಿಜೆಪಿ ಏಕಾಂಗಿಯಾಗಿ 370ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದಿದ್ದರು. ಇಷ್ಟೇ ಅಲ್ಲ ಎನ್‌ಡಿಎ ಚಾರ್ ಸೋ ಪಾರ್ ಎಂದಿದ್ದರು. ಆದರೆ ಬಿಜೆಪಿ 240 ಸ್ಥಾನ ಗೆದ್ದರೆ, ಎನ್‌ಡಿಎ 292 ಸ್ಥಾನಕ್ಕೆ ಸೀಮಿತವಾಗಿದೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.

ಇದು ಮೋದಿಯ ಗೆಲುವಲ್ಲ. 2014 ಹಾಗೂ 2019ರಲ್ಲಿ ಮೋದಿಯ ಗೆಲುವಾಗಿತ್ತು. ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿ ಲೋಕಸಭಾ ಚುನಾವಣೆ ಎದುರಿಸಿತ್ತು. 2014ರಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಗೆದ್ದಿತ್ತು. 2019ರಲ್ಲಿ ಮತ್ತೆ ಮೋದಿಗೆ ಅಧಿಕಾರ ಎಂದು ಲೋಕಸಭಾ ಚುನಾವಣೆ ಎದುರಿಸಿದ್ದರು. ಈ ವೇಳೆಯೂ ಗೆಲುವು ಸಾಧಿಸಿತ್ತು. ಆಧರೆ ಈ ಬಾರಿಯ ಗೆಲುವು ಮೋದಿಯದ್ದಲ್ಲ. ಇದು ಮೈತ್ರಿ ಕೂಟಗಳ ಗೆಲುವು. ಬಿಜೆಪಿ, ಮೋದಿಯ ಜನಪ್ರಿಯತೆ ಕುಗ್ಗಿದೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.

ಹೆಚ್‌ಡಿಕೆ ಮೋದಿ ರಾಜನಾಥ್‌ ಸಿಂಗ್ ಸೇರಿದಂತೆ ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು
 

Latest Videos
Follow Us:
Download App:
  • android
  • ios