AAP ಶಾಸಕಿಯ ಸುಳ್ಳು ಕೇರಳ ಸಚಿವನಿಂದ ಬಯಲು, ದೆಹಲಿ ಮಾಡೆಲ್ ನೋಡಲು ರಾಜ್ಯದಿಂದ ಯಾರೂ ಬಂದಿಲ್ಲ
* AAP ಶಾಸಕಿಯ ಸುಳ್ಳು ಬಹಿರಂಗಪಡಿಸಿದ ಕೇರಳ ಸಚಿವ
* ದೆಹಲಿ ಮಾಡೆಲ್ ನೋಡಲು ರಾಜ್ಯದಿಂದ ಯಾರನ್ನೂ ಕಳುಹಿಸಿಲ್ಲ
* ನೀವು ಸತ್ಕಾರ ಮಾಡಿದ್ದು ಯಾರಿಗೆ?
ನವದೆಹಲಿ(ಏ.25): ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಎಎಪಿ ಶಾಸಕ ಅತಿಶಿ ಅವರ ಸುಳ್ಳನ್ನು ಬಟಾಬಯಲು ಮಾಡಿದ್ದಾರೆ. ವಿ.ಶಿವನಕುಟ್ಟಿ ಈ ಬಗ್ಗೆ ಟ್ವೀಟ್ ಮಾಡಿ, ದೆಹಲಿ ಮಾದರಿ ಅಧ್ಯಯನಕ್ಕೆ ಕೇರಳದ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆಂಬ ಮಾಹಿತಿ ಸುಳ್ಳು ಎಂದಿದ್ದಾರೆ. ಕೇರಳದಿಂದ ಯಾರನ್ನೂ ಕಳುಹಿಸಿಲ್ಲ ಎಂದು ಸ್ಷ್ಟಪಡಿಸಿದ್ದಾರೆ.
ಹೌದು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಎಲ್ಲಾ ರಾಜ್ಯಗಳಲ್ಲಿ ಪ್ರವಾಸ ಮಾಡಿ 'ದೆಹಲಿ ಮಾದರಿ' ಮೂಲಕ ರಾಜ್ಯ ಸರ್ಕಾರಗಳನ್ನು ಟಾರ್ಗೆಟ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಎಪಿ ಶಾಸಕ ಅತಿಶಿ ಮರ್ಲೆನಾ ಮಾಡಿರುವ ಟ್ವೀಟ್ ಕೇರಳದಲ್ಲಿ ಸಂಚಲನ ಮೂಡಿಸುತ್ತಿದೆ. ಈ ವಿಷಯವು ದೆಹಲಿ ಮಾದರಿಗೆ ಸಂಬಂಧಿಸಿದೆ. ಕೇರಳದ ಅಧಿಕಾರಿಗಳು ದೆಹಲಿ ಮಾದರಿಯನ್ನು ದೆಹಲಿಯ ಶಾಲೆಗಳಲ್ಲಿ ಕಲಿತಿದ್ದಾರೆ ಎಂದು ಅತಿಶಿ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಶಿಕ್ಷಣ ಸಚಿವರು, ನಾವು ಯಾರನ್ನೂ ಕಳುಹಿಸಿಯೇ ಇಲ್ಲವೆಂದರೆ, ನೀವು ಯಾವ ಅಧಿಕಾರಿಗಳನ್ನು ಸ್ವಾಗತಿಸಿದ್ದೀರಿ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಅತಿಶಿ ಹೇಳಿದ್ದೇನು?
ವಾಸ್ತವವಾಗಿ, ಈ ಹಿಂದೆ ಅತಿಶಿ ಟ್ವೀಟ್ ಮಾಡುವಾಗ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ಕೆಲವರು ದೆಹಲಿಯ ಶಾಲೆಗಳಿಗೆ ಬೇಟಿ ನೀಡಿದ ದೃಶ್ಯಗಳಿದ್ದವು. ಈ ಬಗ್ಗೆ ಬರೆದಿದ್ದ ಅವರು ದೆಹಲಿಯ ಕಲ್ಕಾಜಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಕೇರಳದ ಅಧಿಕಾರಿಗಳಿಗೆ ಆತಿಥ್ಯ ನೀಡಿರುವುದು ಅದ್ಭುತವಾಗಿದೆ. ಅವರು ನಮ್ಮ ಶಿಕ್ಷಣ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಇದನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರಲು ಉತ್ಸುಕರಾಗಿದ್ದರು. ಇದು ಅರವಿಂದ್ ಕೇಜ್ರಿವಾಲ್ ಅವರ ರಾಷ್ಟ್ರ ನಿರ್ಮಾಣದ ಕಲ್ಪನ' ಎಂದಿದ್ದರು.