ಕೆಟ್ಟ ಪದಗಳ ಬಳಸಿ ಪ್ರಧಾನಿ ಮೋದಿ ನಿಂದಿಸಿದ ಗುಜರಾತ್ ಆಪ್ ಅಧ್ಯಕ್ಷ, ಭಾರಿ ಆಕ್ರೋಶ!
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ. ಮೋದಿ ಗುಜರಾತ್ ಭೇಟಿ ಹಾಗೂ ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ಗುಜರಾತ್ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಎಲ್ಲೆ ಮೀರಿದ್ದಾರೆ. ಅತ್ಯಂತ ಕೆಟ್ಟ ಪದಗಳ ಬಳಸಿ ಮೋದಿಯನ್ನು ಮಾತ್ರಲ್ಲಿ ಭಾರತೀಯ ನಾರಿ ಶಕ್ತಿಗೆ ಅವಮಾನ ಮಾಡಿದ್ದಾರೆ.
ಅಹಮ್ಮದಾಬಾದ್(ಅ.09): ಗುಜರಾತ್ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಇದು ಹೊಸ ಇತಿಹಾಸ ರಚಿಸಲು ಸಜ್ಜಾಗಿರುವ ಆಮ್ ಆದ್ಮಿ ಪಾರ್ಟಿ ನಿದ್ದಗೆಡಿಸಿದೆ. ಇದರ ಬೆನ್ನಲ್ಲೇ ಗುಜರಾತ್ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಆಡಿದ ಮಾತುಗಳಿಗೆ ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ಮೋದಿ ವಿರುದ್ಧ ಅತ್ಯಂತ ಕೆಟ್ಟ ಪದಗಳನ್ನು ಗೋಪಾಲ್ ಇಟಾಲಿಯಾ ಬಳಸಿದ್ದಾರೆ. ಪ್ರಧಾನಿ ಮೋದಿ ದೇಶದ ಜನತೆಯನ್ನು ಸಿ( ಹಿಂದಿಯ ಭಾಷೆಯಲ್ಲಿರುವ ಕೆಟ್ಟ ಪದವನ್ನು ಒಂದು ಅಕ್ಷರ) ಮಾಡುತ್ತಿದ್ದಾರೆ. ನೀಚ ಪ್ರಧಾನಿ ಸೇರಿದಂತೆ ಹಲವು ನಿಂದನೀಯ ಪದಗಳನ್ನು ಬಳಸಿದ್ದಾರೆ. ಗೋಪಾಲ್ ಮಾಡಿರುವ ಟೀಕೆಯ ವಿಡಿಯೋಗೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಗೋಪಾಲ್ ಇಟಾಲಿಯಾ ಮಾಡಿರುವ ವಿವಾದಾತ್ಮಕ ವಿಡಿಯೋವನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ನಿಂದಿಸುವ ಭರದಲ್ಲಿ ಭಾರತೀಯ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಇದು ಅತ್ಯಂತ ನಿಂದನೀಯವಾಗಿದೆ. ಭಾರತೀಯ ನಾರಿ ಶಕ್ತಿಗೆ ಮಾಡಿದ ಅಪಮಾನವಾಗಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಜನರು ಕ್ಷಮಿಸುವುದಿಲ್ಲ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
PM Modi Gujarat Visit ಮೊಧೆರಾ ಭಾರತದ ಮೊದಲ ಸೌರಶಕ್ತಿ ಗ್ರಾಮ, ಪ್ರಧಾನಿ ಮೋದಿ ಘೋಷಣೆ
ಆಮ್ ಆದ್ಮಿ ಪಾರ್ಟಿಯ ದಿವಾಳಿ ಮನಸ್ಥಿತಿ ಇದರಿಂದ ಬಹಿರಂಗವಾಗಿದೆ. ಗುಜರಾತ್ ಮಹಿಳೆಯರು ಈ ಭಾಷೆಯನ್ನು ಸಹಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದಾರೆ. ಇಂತಹ ಅಸಭ್ಯ ನಾಯಕರ ಅಡಿಯಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಸಾಧ್ಯವೆ, ಕೇಜ್ರಿವಾಲ್ ತಮ್ಮ ಗುಜರಾತ್ ಪಕ್ಷದ ಅಧ್ಯಕ್ಷನ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ. ಗೋಪಾಲ್ ಇಟಾಲಿಯಾ ಹೇಳಿರುವ ಕೆಟ್ಟ ಪದಗಳು, ಸ್ತ್ರೀ ದ್ವೇಷದ ಮಾತುಗಳಿಗೆ ಕಠಿಣ ಶಿಕ್ಷೆಯಾಗಬೇಕ. ಮಹಿಳಾ ಆಯೋಗ ಕ್ರಮ ಕೈಗೊಳ್ಳಬೇಕು. ಆಧುನಿಕ ಭಾರತದಲ್ಲಿ ಮಹಿಳೆಯರನ್ನು, ಪ್ರಧಾನಿಯನ್ನು ಈ ಮಟ್ಟದ ಪದಗಳ ಬಳಿಸಿ ನಿಂದಿಸುತ್ತಿದ್ದಾರೆ. ಈ ಅವಮಾನಕ್ಕೆ ಆಯೋಗ ತಕ್ಕ ಶಿಕ್ಷೆ ನೀಡಬೇಕು ಎಂದು ಮಾಳವಿಯಾ ಆಗ್ರಹಿಸಿದ್ದಾರೆ.
ಅಕ್ಟೋಬರ್ 11 ರಂದು Ujjain ಮಹಾಕಾಲ ಲೋಕ ಉದ್ಘಾಟನೆ: ಪ್ರಧಾನಿ Modiಯಿಂದ ಲೋಕಾರ್ಪಣೆ
ಈ ರೀತಿಯ ಪದಗಳ ಬಳಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ಗುಜರಾತ್‌ನಲ್ಲಿ ಗೆಲುವು ಸಾಧಿಸಲು ಯಾವ ನೀಚ ಕೆಲಸಕ್ಕೂ ಇಳಿಯಲು ಹೇಸುವುದಿಲ್ಲ. ಅರವಿಂದ್ ಕೇಜ್ರಿವಾಲ್ ಇದಕ್ಕೆ ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಇತರ ಆಪ್ ನಾಯಕರು ಈ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ದೇಶದ ಪ್ರಧಾನಿಯನ್ನು ಟೀಕಿಸುವ ಹಕ್ಕಿದೆ. ಆದರೆ ಬಳಸುವ ಪದಗಳ ಬಗ್ಗೆ ಎಚ್ಚರ ಇರಬೇಕು. ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೂ ಅಪಮಾನ ಮಾಡಿರುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.