Bribe Through Peanut Seller : ಕಡ್ಲೇಕಾಯಿ ವ್ಯಾಪಾರಿ ಮೂಲಕ ಲಂಚ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆಪ್ ಕೌನ್ಸಿಲರ್!

ಲಂಚ ಪಡೆಯುತ್ತಿದ್ದ ಕಾರಣಕ್ಕಾಗಿ ಆಪ್ ಕೌನ್ಸಿಲರ್ ಗೀತಾ ರಾವತ್ ಬಂಧನ
ಕಡ್ಲೆಕಾಯಿ ವ್ಯಾಪಾರಿ ಮೂಲಕ ಲಂಚ ಪಡೆಯುತ್ತಿದ್ದ ಕೌನ್ಸಿಲರ್
ವಿನೋದ್ ನಗರ್ ವಾರ್ಡ್ ನ ಕೌನ್ಸಿಲರ್ ಆಗಿರುವ ಗೀತಾ ರಾವತ್

AAP councilor Geeta Rawat was taking bribe through peanut seller CBI arrested red handed san

ನವದೆಹಲಿ (ಫೆ. 18): ಲಂಚ ಸ್ವೀಕರಿಸುತ್ತಿದ್ದಾಗ ಆಮ್ ಆದ್ಮಿ ಪಕ್ಷದ (Aam Aadmi Party ) (ಎಎಪಿ) ಪೂರ್ವ ದೆಹಲಿ ಕಾರ್ಪೊರೇಷನ್ ಕೌನ್ಸಿಲರ್  ( East Delhi Corporation Councilor)ಗೀತಾ ರಾವತ್ (Geeta Rawat) ಅವರನ್ನು ಕೇಂದ್ರೀಯ ತನಿಖಾ ದಳ (Central Bureau of Investigation) (ಸಿಬಿಐ) ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಆರೋಪಿ ಕೌನ್ಸಿಲರ್ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ( Deputy Chief Minister Manish Sisodia) ಅವರ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದಲ್ಲಿರುವ (Patparganj assembly constituency ) ವಿನೋದ್ ನಗರ ವಾರ್ಡ್‌ನ (Vinod Nagar ward ) ಕೌನ್ಸಿಲರ್ ಆಗಿದ್ದಾರೆ.

ವಿಶೇಷವೆಂದರೆ ಲಂಚದ ಹಣವನ್ನು ಕಡ್ಲೆಕಾಯಿ ಮಾರಾಟಗಾರರೊಬ್ಬರ ಮೂಲಕ ಗೀತಾ ರಾವತ್ ಅವರಿಗೆ ರವಾನಿಸಲಾಗಿದೆ. ಸಿಬಿಐ ಪ್ರಕಾರ, ಗೀತಾ ರಾವತ್ ಒಬ್ಬ ವ್ಯಕ್ತಿಯಿಂದ 20,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಕ್ಕಾಗಿ ಬಂಧಿಸಲಾಗಿದೆ. ಅವರ ಮನೆಯ ಮೇಲ್ಛಾವಣಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಅಕ್ರಮವಾಗಿ ಈ ಹಣವನ್ನು ಸುರಿದು ಲಂಚ ತೆಗೆದುಕೊಳ್ಳಲಾಗಿದೆ.

ಎಎಪಿ ಕೌನ್ಸಿಲರ್ ಬಂಧನಕ್ಕೆ ಬಿಜೆಪಿ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಶಹಜಾದ್ ಜೈಹಿಂದ್ ಟ್ವೀಟ್ ಮಾಡಿ, "ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿಧಾನಸಭೆಯ ಪೂರ್ವ ದೆಹಲಿಯ ವಿನೋದ್ ನಗರ ವಾರ್ಡ್‌ನಿಂದ ಲಂಚ ಪಡೆಯುತ್ತಿದ್ದ ಎಎಪಿ ಕೌನ್ಸಿಲರ್ ಅನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಕೇಜ್ರಿವಾಲ್ ಬಲಿಪಶು ಕಾರ್ಡ್ ಆಡುವುದನ್ನು ನಿಲ್ಲಿಸಿ ಈ ಸಿಹಿ ಭ್ರಷ್ಟಾಚಾರಕ್ಕೆ ಉತ್ತರಿಸುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. 


ಮೂಲಗಳ ಪ್ರಕಾರ, ಕಡ್ಲೆಕಾಯಿ ವ್ಯಾಪಾರಿಯ ಅಪ್ಪ ಸನಾವುಲ್ಲಾ ಖಾನ್, ತಮ್ಮ ಮಗನನ್ನು ಯಾರೋ ಬಂಧನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ತಿಳಿದು ಕೌನ್ಸಿಲರ್ ಮನೆಯತ್ತ ನಿಂತಿದ್ದ ಮಗನ ಕೈಗಾಡಿಯತ್ತ ಓಡಿದ್ದರು. ಇದೇ ವೇಳೆ ಅಲ್ಲಿನ ಅಧಿಕಾರಿಗಳಿಗೆ ನನ್ನ ಮಗನನ್ನು ಏಕೆ ಬಂಧಿಸುತ್ತಿದ್ದೀರಿ ಎಂದು ಅವರು ಕೇಳಿದಾಗ, ಅಧಿಕಾರಿ ನಾವು ಸಿಬಿಐನಿಂದ ಬಂದಿದ್ದೇನೆ. ನಿಮ್ಮ ಮಗನ ಬಂಧನ ಯಾಕಾಗಿ ನಡೆದಿದೆ ಎನ್ನುವುದು ನಿಮಗೆ ತಿಳಿಯುತ್ತದೆ ಎಂದು ಹೇಳಿದ್ದರು.

ಗೋಣಿಯಲ್ಲಿ ಚಿಲ್ಲರೆ ನಾಣ್ಯ ತಂದು ಸ್ಕೂಟರ್‌ ಖರೀದಿಸಿದ ಯುವಕ
ಪಾಲಿಸೆ ಸದಸ್ಯೆ ಗೀತಾ ರಾವತ್, ಕೇವಲ ಈ ಕಡ್ಲೆಕಾಯಿ ವ್ಯಾಪರಿ ಮೂಲಕವಾಗಿ ಮಾತ್ರವೇ ಲಂಚ ಪಡೆಯುತ್ತಿದ್ದರು ಎನ್ನುವುದು ಬಹಿರಂಗವಾಗಿದೆ. ಇದಕ್ಕಾಗಿ ವಿಶೇಷ ಪ್ಲ್ಯಾನ್ ಅನ್ನು ಸಿದ್ಧಪಡಿಸಿದ್ದ ಸಿಬಿಐ, ಕಡ್ಲೆಕಾಯಿ ವ್ಯಾಪಾರಿಗೆ ನೀಡಿದ್ದ ನೋಟಿಗೆ ವಿಶೇಷ ಬಣ್ಣವನ್ನು ಬಳಿದು ನೀಡಿತ್ತು. ಇದೇ ಹಣವನ್ನು ಕಡ್ಲೆಕಾಯಿ ವ್ಯಾಪಾರಿ, ಗೀತಾ ರಾವತ್ ಅವರಿಗೆ ನೀಡಲು ಹೋದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗೀತಾ ರಾವತ್ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸಿಬಿಐ ನೀಡಿದ್ದ ಬಣ್ಣದ ನೋಟುಗಳೇ ಸಿಕ್ಕಿವೆ. ಕಡ್ಲೆಕಾಯಿ ವ್ಯಾಪಾರಿ ಹಾಗೂ ಗೀತಾ ರಾವತ್ ಇಬ್ಬರನ್ನೂ ಸಿಬಿಐ ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ.

 

 

Latest Videos
Follow Us:
Download App:
  • android
  • ios