ದೆಹಲಿ ಹೈಕೋರ್ಟ್ ಜಾಗದಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿ, ಸುಪ್ರೀಂನಿಂದ ಆಪ್‌ಗೆ ಛೀಮಾರಿ!
ಮೂಲಸೌಕರ್ಯ ಉದ್ದೇಶಕ್ಕಾಗಿ ದೆಹಲಿ ಹೈಕೋರ್ಟ್‌ಗೆ ಮೂಲತಃ ಮಂಜೂರು ಮಾಡಲಾಗಿದ್ದ ಭೂಮಿಯನ್ನು ಆಮ್ ಆದ್ಮಿ ಪಾರ್ಟಿ ಅತಿಕ್ರಮಿಸಿದ ವಿಚಾರದಲ್ಲಿ ಆಪ್ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ಆಘಾತ ವ್ಯಕ್ತಪಡಿಸಿದೆ.
ನವದೆಹಲಿ (ಫೆ.13): ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ವಿಚಾರಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಕುರಿತಾಗಿ ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಅದರ ಕಾರ್ಯಕ್ಕೆ ಆಘಾತ ವ್ಯಕ್ತಪಡಿಸಿದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕವೇ ದೇಶದ ಗಮನಸೆಳೆದು ರಾಜಕೀಯ ಪಕ್ಷವಾಗಿ ಮಾರ್ಪಟ್ಟಿರುವ ಆಮ್ ಆದ್ಮಿ ಪಾರ್ಟಿ ಮಾಡಿದ ಭೂಅಕ್ರಮಕ್ಕೆ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ.ೆ ಮೂಲತಃ ವಿಸ್ತರಣೆಯ ಉದ್ದೇಶ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ದೆಹಲಿ ಹೈಕೋರ್ಟ್‌ಗೆ ಮಂಜೂರಾಗಿದ್ದ ಜಾಗವನ್ನೇ ಆಮ್ ಆದ್ಮಿ ಪಾರ್ಟಿ ನುಂಗಿಹಾಕುವ ಕೆಲಸ ಮಾಡಿದೆ. ಈ ಜಾಗದಲ್ಲಿ ತನ್ನ ಪಕ್ಷದ ಕಚೇರಿಯನ್ನು ನಿರ್ಮಾಣ ಮಾಡಿದ್ದ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಈ ಅರ್ಜಿಯ ವಿಚಾರಣೆ ನಡೆಸಿತು. "ರಾಜಕೀಯ ಪಕ್ಷವು ಆ ಭೂಮಿಯಲ್ಲಿ ಹೇಗೆ ಭದ್ರವಾಗಿ ಕೂರಲು ಸಾಧ್ಯ? ಹಾಗಿದ್ದಲ್ಲಿ ಹೈಕೋರ್ಟ್ ಯಾವ ಜಾಗವನ್ನು ಬಳಸಬೇಕು? ಅತಿಕ್ರಮ ಮಾಡುತ್ತೀರಿ ಎಂದಾದಲ್ಲಿ ಇದನ್ನು ಹೈಕೋರ್ಟ್‌ಗೆ ಮಂಜೂರು ಮಾಡಿದ್ದೇಕೆ?' ಎಂದು ಪ್ರಶ್ನೆ ಮಾಡಿದೆ.
ದೇಶಾದ್ಯಂತ ನ್ಯಾಯಾಲಯಗಳ ನ್ಯಾಯಾಂಗ ಮೂಲಸೌಕರ್ಯ ಸಮಸ್ಯೆಯ ಕುರಿತು ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ವಕೀಲ ಕೆ ಪರಮೇಶ್ವರ್ ಪೀಠಕ್ಕೆ ತಿಳಿಸಿದರು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋದ ದೆಹಲಿ ಹೈಕೋರ್ಟ್ ಅಧಿಕಾರಿಗಳನ್ನು, ಆಮ್ ಆದ್ಮಿ ಪಕ್ಷದ ಅಧಿಕಾರಿಗಳು ತಡೆದಿದ್ದರು. ಇಲ್ಲಿ ಈಗಾಗಲೇ ಪಕ್ಷದ ಕಚೇರಿ ಇದೆ ಎಂದು ಅವರು ತಿಳಿಸಿದ್ದರು ಎಂದು ಹೇಳಿದ್ದಾರೆ.
ದೆಹಲಿ ಸರ್ಕಾರದ ಕಾನೂನು ಕಾರ್ಯದರ್ಶಿ ಭರತ್ ಪರಾಶರ್ ಅವರು ಈ ಭೂಮಿ 2016 ರಿಂದ ಎಎಪಿ ಬಳಿ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಅವರು ಈಗಾಗಲೇ ಭೂಮಿ ಮತ್ತು ಅಭಿವೃದ್ಧಿ ಅಧಿಕಾರಿಗೆ ರಾಜಕೀಯ ಪಕ್ಷಕ್ಕೆ ಇನ್ನೊಂದು ಭೂಮಿಯನ್ನು ಹಂಚುವ ಪ್ರಕ್ರಿಯೆಯ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.
Arvind Kejriwal: ‘ಇಂಡಿಯಾ’ ಕೂಟಕ್ಕೆ ಆಘಾತ: ಏಕಾಂಗಿ ಸ್ಪರ್ಧೆ ಘೋಷಣೆ ಮಾಡಿದ ಅರವಿಂದ್ ಕೇಜ್ರಿವಾಲ್ !
ಮೊದಲಿಗೆ ಈ ಬಂಗಲೆಯಲ್ಲಿ ಸಚಿವರೊಬ್ಬರು ವಾಸವಿದ್ದರು. ನಂತರ ರಾಜಕೀಯ ಪಕ್ಷ ಇದನ್ನು ಆಕ್ರಮಿಸಿಕೊಂಡಿತು ಎಂದು ಕಾನೂನು ಕಾರ್ಯದರ್ಶಿ ಪೀಠಕ್ಕೆ ತಿಳಿಸಿದ್ದಾರೆ.
ನಂತರ ನ್ಯಾಯಾಲಯವು ದಿಲ್ಲಿ ಸರ್ಕಾರ ಮತ್ತು ಕೇಂದ್ರದ ಪರ ಹಾಜರಾದ ವಕೀಲರನ್ನು, ಈಗ ಭೂಮಿಯನ್ನು ಹೇಗೆ ಹೈಕೋರ್ಟ್ ಸ್ವಾಧೀನಪಡಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಸುವಂತೆ ಕೇಳಿದೆ. ಈ ವೇಳೆ ಪೀಠವು, ಭೂಮಿಯನ್ನು ದೆಹಲಿ ಹೈಕೋರ್ಟ್‌ಗೆ ಹಿಂತಿರುಗಿಸಬೇಕು ಎಂದು ಹೇಳಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ದೆಹಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರೊಂದಿಗೆ ಸಭೆಯನ್ನು ಕರೆಯುವಂತೆ ನ್ಯಾಯಾಲಯವು ನಿರ್ದೇಶನ ನೀಡಿದ್ದಲ್ಲದೆ, ಈ ಕೆಲಸ ಕ್ಷಣವೇ ಆಗಬೇಕು ಎಂದು ಹೇಳಿದೆ. ನ್ಯಾಯಾಲಯ ಇದರ ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ನಿಗದಿಪಡಿಸಿದೆ. ಈ ಹಿಂದೆಯೂ, ದೆಹಲಿ ಹೈಕೋರ್ಟ್‌ನಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹಣ ನೀಡುವಲ್ಲಿ ಅತಿಯಾದ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಎಡವಟ್ಟು ಮಾಡಿ ಎರೆಡರಡು ಬಾರಿ ರಾಜ್ಯಸಭಾ ಪ್ರಮಾಣ ವಚನ ಸ್ವೀಕರಿಸಿದ ಎಎಪಿ ಸಂಸದೆ