Asianet Suvarna News Asianet Suvarna News

6 ವರ್ಷದಿಂದ ಕಾಣೆಯಾದ ವಿಶೇಷ ಸಾಮರ್ಥ್ಯದ ಯುವಕನನ್ನು ಕುಟುಂಬದೊಂದಿಗೆ ಸೇರಿಸಿದ Aadhar

2016 ರಿಂದ ಬಿಹಾರದಿಂದ ನಾಪತ್ತೆಯಾಗಿದ್ದ ಆಧಾರ್ ಮೂಲಕ ಗುರುತಿಸಲಾದ ವಿಶೇಷ ಸಾಮರ್ಥ್ಯದ ಯುವಕ 2022 ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಪತ್ತೆಯಾಗಿದ್ದಾನೆ. 

aadhar unites family with 21 year old specially abled man missing for years ash
Author
First Published Sep 1, 2022, 7:20 PM IST

ಕುಟುಂಬದ ಕಳೆದುಹೋದ ಸದಸ್ಯರನ್ನು ಒಂದುಗೂಡಿಸುವಲ್ಲಿ ಆಧಾರ್ (Aadhar) ಮತ್ತೊಮ್ಮೆ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಈ ಬಾರಿ 21 ವರ್ಷದ ವಿಶೇಷ ಸಾಮರ್ಥ್ಯದ (Specially Abled) ಯುವಕ 6 ವರ್ಷಗಳಿಂದ ಕಾಣೆಯಾದ ನಂತರ ತನ್ನ ಕುಟುಂಬದೊಂದಿಗೆ ಒಂದಾಗಿದ್ದಾನೆ. 2016 ರಿಂದ ಬಿಹಾರದಿಂದ ನಾಪತ್ತೆಯಾಗಿದ್ದ ಯುವಕನನ್ನು ಆಧಾರ್‌ ಮೂಲಕ ಗುರುತಿಸಲಾಗಿದ್ದು, 2022 ರಲ್ಲಿ ಈತ ಮಹಾರಾಷ್ಟ್ರದ ನಾಗ್ಪುರದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. 

ಬಿಹಾರದ ಖಗಾರಿಯಾ ಜಿಲ್ಲೆಯಿಂದ ನವೆಂಬರ್ 2016 ರಿಂದ ಕಾಣೆಯಾಗಿದ್ದಾನೆ ಎಂದು ಪರಿಗಣಿಸಲಾದ ವಿಶೇಷ ಸಾಮರ್ಥ್ಯದ (ಕಿವುಡ ಮತ್ತು ಮೂಗ) ಯುವಕ ಆಗಸ್ಟ್ 2022 ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಪತ್ತೆಯಾಗಿದ್ದಾನೆ. ಆಧಾರ್ ಮೂಲಕ ಈತನನ್ನು ಪತ್ತೆಹಚ್ಚಲಾಗಿದೆ.  ಕ್ಷೇಮಾಭಿವೃದ್ಧಿ ಸೇವೆಯ (Welfare Service) ವಿತರಣೆಗೆ ಡಿಜಿಟಲ್ ಬೆನ್ನೆಲುಬಾಗಿರುವ ಆಧಾರ್ ಹೇಗೆ ಸುಲಭವಾಗಿ ಬದುಕಲು ಅನುವು ಮಾಡಿಕೊಡುತ್ತದೆ ಎಂಬುದಕ್ಕೆ ಹಲವು ಪುರಾವೆಗಳಿವೆ. ಇದರ ಜತೆಗೆ ಆದಾರ್‌ನಿಂದ ಕುಟುಂಬಗಳು ಕಾಣೆಯಾದ ಸದಸ್ಯರೊಂದಿಗೆ ಮತ್ತೆ ಒಂದಾಗಲು ಸಹ ಸಹಾಯ ಮಾಡುತ್ತದೆ.

ಮತದಾನ ಜಾಗೃತಿ ಕಾರ್ಯಕ್ರಮ: ವೋಟರ್‌ ಐಡಿಗೆ ಆಧಾರ್‌ ನಂಬರ್‌ ಜೋಡಿಸಿ

ಘಟನೆಯ ವಿವರ
28 ನವೆಂಬರ್ 2016 ರಂದು ನಾಗ್ಪುರ ರೈಲು ನಿಲ್ದಾಣದಲ್ಲಿ ಕಾಣೆಯಾದ 15 ವರ್ಷ ವಯಸ್ಸಿನ ಮಗು ಪತ್ತೆಯಾಗಿದ್ದಾನೆ. ಮಗು ವಿಶೇಷ ಸಾಮರ್ಥ್ಯ ಹೊಂದಿದ್ದು, ವಾಕ್ ಮತ್ತು ಶ್ರವಣ ದೋಷ (ಕಿವುಡ ಮತ್ತು ಮೂಕ) ಹೊಂದಿರುವ ಕಾರಣ, ಸರಿಯಾದ ಪ್ರಕ್ರಿಯೆಯ ನಂತರ ರೈಲ್ವೆ ಅಧಿಕಾರಿಗಳು ಅವನನ್ನು ನಾಗ್ಪುರದ ಸರ್ಕಾರಿ ಹಿರಿಯ ಬಾಲಕರ ಅನಾಥಾಶ್ರಮಕ್ಕೆ ಹಸ್ತಾಂತರಿಸಿದರು. ಅವರಿಗೆ ಪ್ರೇಮ್ ರಮೇಶ್ ಇಂಗಳೆ ಎಂದು ಹೆಸರಿಡಲಾಯಿತು. ನಂತರ, ಅನಾಥಾಶ್ರಮದ ಅಧೀಕ್ಷಕ ವಿನೋದ್ ದಬೇರಾವ್ ಮತ್ತು ಸಲಹೆಗಾರರು ಜುಲೈ 2022 ರಲ್ಲಿ ‘ಪ್ರೇಮ್ ರಮೇಶ್ ಇಂಗಳೆ’ ಅವರ ಆಧಾರ್ ನೋಂದಣಿಗಾಗಿ ನಾಗಪುರದ ಆಧಾರ್ ಸೇವಾ ಕೇಂದ್ರಕ್ಕೆ (Aadhar Seva Kendra) (ಎಎಸ್‌ಕೆ) ಭೇಟಿ ನೀಡಿದರು. ಆದರೆ ಬಯೋಮೆಟ್ರಿಕ್ಸ್ ಮತ್ತೊಂದು ಆಧಾರ್ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗುತ್ತಿರುವುದರಿಂದ ಈ ದಾಖಲಾತಿಗೆ ವಿರುದ್ಧವಾಗಿ ಆಧಾರ್ ಅನ್ನು ಮತ್ತೆ ಹೊಸದಾಗಿ ರಚಿಸಲಾಗಲಿಲ್ಲ.

ಅದರ ನಂತರ ASK ನಾಗ್ಪುರ UIDAI ಪ್ರಾದೇಶಿಕ ಕಚೇರಿ ಮುಂಬೈಯನ್ನು ಸಂಪರ್ಕಿಸಿತು. ಈ ವೇಳೆ ಪರಿಶೀಲನೆಯಲ್ಲಿ, ಸಂಬಂಧಪಟ್ಟ ಯುವಕ 2016 ರಿಂದ ಅಸ್ತಿತ್ವದಲ್ಲಿರುವ ಆಧಾರ್ ಅನ್ನು ಹೊಂದಿದ್ದು, ಸಚಿನ್ ಕುಮಾರ್ ಎಂಬ ಹೆಸರಿನೊಂದಿಗೆ ಬಿಹಾರದ ಖಗಾರಿಯಾ ಜಿಲ್ಲೆಯ ಪ್ರದೇಶದ ವಿಳಾಸವನ್ನು ಹೊಂದಿರುವುದು ಕಂಡುಬಂದಿತು. ಹೆಚ್ಚಿನ ಪರಿಶೀಲನೆಯ ನಂತರ, ಮತ್ತು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿ, ಅಧಿಕಾರಿಗಳು ಯುವಕನ ಗುರುತನ್ನು ಅನಾಥಾಶ್ರಮದ ಅಧೀಕ್ಷಕರಿಗೆ ಬಹಿರಂಗಪಡಿಸಿದರು. ಬಿಹಾರದ ಖಗಾರಿಯಾ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕುಟುಂಬಕ್ಕೆ ಮಾಹಿತಿ ನೀಡಲಾಯಿತು.

PAN - Aadhaar Link: ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಡಬ್ಬಲ್‌ ದಂಡ, ಜೂ. 30 ಕಡೆಯ ದಿನಾಂಕ

ತರುವಾಯ, ಯುವಕನ ತಾಯಿ ಮತ್ತು ನಾಲ್ವರು ಸಂಬಂಧಿಕರು ಆಗಸ್ಟ್ ಮೂರನೇ ವಾರದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಅವರ ಗ್ರಾಮ 'ಸರ್ಪಂಚ'ರಿಂದ ಅಗತ್ಯವಾದ ದಾಖಲೆಗಳೊಂದಿಗೆ ನಾಗಪುರಕ್ಕೆ ಬಂದರು. ಈ ಪ್ರಕರಣವು ಆಧಾರ್ ವೇದಿಕೆಯ ಪರಾಕ್ರಮವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಚಿನ್ ಕುಮಾರ್ ಈಗ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದು,  ಮುಖ್ಯವಾಗಿ ಇದಕ್ಕೆ ಆಧಾರ್ ಕಾರಣವಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ನಿಯಮದ ಪ್ರಕಾರ ಮತ್ತು ಗೌರವಾನ್ವಿತ ನ್ಯಾಯಾಲಯದ ನಿರ್ದೇಶನದ ಪ್ರಕಾರ ಮಗುವನ್ನು ಹಸ್ತಾಂತರಿಸುವ ಕಾರ್ಯವಿಧಾನವನ್ನು ಕಾನೂನುಬದ್ಧವಾಗಿ ಅನಾಥಾಶ್ರಮದ ಅಧೀಕ್ಷಕರು ಮತ್ತು ಸಲಹೆಗಾರರು ಜಂಟಿಯಾಗಿ ಪೂರ್ಣಗೊಳಿಸಿದ್ದಾರೆ ಎಂದೂ ತಿಳಿದುಬಂದಿದೆ. ಒಟ್ಟಾರೆ, ಆಧಾರ್‌ ನೆರವಿನಿಂದ ವಿಶೇಷ ಚೇತನ ಯುವಕ ತನ್ನ ಕುಟುಂಬದೊಂದಿಗೆ 6 ವರ್ಷಗಳ ನಂತರ ಸೇರಿಕೊಂಡಿದ್ದಾನೆ. 

Follow Us:
Download App:
  • android
  • ios