ನಂಬೋದು ಯಾರನ್ನಾ? ವೈದ್ಯ, ಕಾಂಪೌಂಡರ್‌ಗಳಿಂದಲೇ ನರ್ಸ್ ಮೇಲೆ ಅತ್ಯಾಚಾರವೆಸಗಿ ಕೊಲೆ
ನರ್ಸಿಂಗ್ ಹೋಮ್‌ವೊಂದರ ವೈದ್ಯ, ಕಾಂಪೌಂಡರ್ ಮತ್ತು ಇತರ ಸಿಬ್ಬಂದಿಗಳು ಅಲ್ಲೇ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಬಿಹಾರದ ಪೂರ್ವ ಚಂಪಾರಣ್ಯ (East champaranya) ಜಿಲ್ಲೆಯಲ್ಲಿ ನಡೆದಿದೆ.

- ವಿಧವೆಯನ್ನು ಕೆಲಸಕ್ಕೆ ಸೇರಿಸಿಕೊಂಡು ದುಷ್ಕೃತ್ಯ
- ಗಂಡನ ಮರಣಾ ನಂತರ ತಾಯಿ, ತನ್ನ 4 ವರ್ಷದ ಪುತ್ರನ ಜತೆ ವಾಸವಿದ್ದ ಮಹಿಳೆ
- ಬಿಹಾರದ ಮೋತಿಹಾರ್‌ನಲ್ಲಿರುವ ನರ್ಸಿಂಗ್ ಹೋಂವೊಂದರಲ್ಲಿ ನರ್ಸ್ ಆಗಿದ್ದಳು
- ವೈದ್ಯರು, ಸಿಬ್ಬಂದಿ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು
- ಮುಂದೆ ಈ ರೀತಿ ಮಾಡಲ್ಲ ಎಂದು ಕ್ಷಮೆ ಕೇಳಿ ಕೆಲಸಕ್ಕೆ ಸೇರಿಸಿಕೊಂಡಿದ್ದ ವೈದ್ಯ, ಸಿಬ್ಬಂದಿ
- ವೈದ್ಯ, ಕಾಂಪೌಂಡರ್, ಇತರೆ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ. ಬಳಿಕ ಹತ್ಯೆ
ಪಟನಾ: ನರ್ಸಿಂಗ್ ಹೋಮ್‌ವೊಂದರ ವೈದ್ಯ, ಕಾಂಪೌಂಡರ್ ಮತ್ತು ಇತರ ಸಿಬ್ಬಂದಿಗಳು ಅಲ್ಲೇ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಬಿಹಾರದ ಪೂರ್ವ ಚಂಪಾರಣ್ಯ (East champaranya) ಜಿಲ್ಲೆಯಲ್ಲಿ ನಡೆದಿದೆ. ಜನಸಾಮಾನ್ಯರೆಲ್ಲ ಹೆಚ್ಚು ವಿಶ್ವಾಸದಿಂದ ಕಾಣುವ ವೈದ್ಯರಿಂದಲೇ ಇಂಥದ್ದೊಂದು ದುಷ್ಕೃತ್ಯ ನಡೆದಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
ಜಿಲ್ಲೆಯ ಮೋತಿಹಾರಿಯಲ್ಲಿರುವ (Motihaari) ಜಾನಕಿ ಸೇವಾ ಸದನ್ ನರ್ಸಿಂಗ್ ಹೋಮ್‌ನಲ್ಲಿ (Nursing Home) ಈ ಘಟನೆ ನಡೆದಿದ್ದು ಆ್ಯಂಬುಲೆನ್ಸ್‌ನಲ್ಲಿ ನರ್ಸ್ ಶವ ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆ.8ರಂದು ಅಸ್ಪತ್ರೆಗೆ ಕೆಲಸಕ್ಕೆ ಹೋಗಿದ್ದ ನರ್ಸ್ ಮನೆಗೆ ಹಿಂದಿರುಗದಿದ್ದಾಗ ತೀವ್ರ ಹುಡುಕಾಟ ನಡೆಸಲಾಗಿದ್ದು ಬಳಿಕ ಆ್ಯಂಬುಲೆನ್ಸ್‌ನಲ್ಲಿ (Ambulence) ನರ್ಸ್ ಶವ ಪತ್ತೆಯಾಗಿದೆ. ಈಗಾಗಲೇ ಆರೋಪಿ ಕಾಂಪೌಂಡರ್‌ನನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ವೈದ್ಯ ಮತ್ತು ಮೂವರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದು ನರ್ಸಿಂಗ್ ಹೋಮ್ ಅನ್ನು ಸೀಲ್ ಮಾಡಿದ್ದಾರೆ. ಡಾ. ಜಯಪ್ರಕಾಶ್ ದಾಸ್ (Jayaprakash Das) ಸೇರಿದಂತೆ ಐವರ ಮೇಲೆ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ.
ದೇವರನಾಡಲ್ಲಿ ಪೈಶಾಚಿಕ ಕೃತ್ಯ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ
ಕೆಲಸಕ್ಕೆ ಕರೆದು ಪೈಶಾಚಿಕತೆ:
ವೈದ್ಯರು ಮತ್ತು ಇತರರ ಕಿರುಕುಳಕ್ಕೆ ಬೇಸತ್ತು ಈ ಹಿಂದೆ ಮೃತ ನರ್ಸ್ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ಆದರೆ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿ ಆಕೆ ಬಳಿ ಕ್ಷಮೆಯಾಚಿಸಿದ್ದರು. ಈ ಕಪಟ ಮಾತುಗಳನ್ನು ನಂಬಿದ್ದ ಆಕೆ ಮತ್ತೆ ಕೆಲಸಕ್ಕೆ ಸೇರಿದ ಬಳಿಕ ವೈದ್ಯರು ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ. ವಿಧವೆಯಾಗಿದ್ದ ಮೃತ ನರ್ಸ್‌ಗೆ ನಾಲ್ಕು ವರ್ಷದ ಮಗುವಿದ್ದು, ಗಂಡನ ಮರಣ ನಂತರ ಆಕೆ ತನ್ನ ತಾಯಿಯೊಂದಿಗೆ ವಾಸವಿದ್ದಳು.
Rape and Murder: ಕುರಿಗಾಯಿ ಮಹಿಳೆಯ ಮೇಲೆ ಕಾಮುಕರ ಅಟ್ಟಹಾಸ
ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಡಾ. ಜಯಪ್ರಕಾಶ್ ನಾಟಕವಾಡಿದ್ದಾನೆ. ನಿಮ್ಮ ಮಗಳ ಆರೋಗ್ಯ ಹದಗೆಟ್ಟಿದೆ. ಮುಜಫ್ಫರ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನನಗೆ ಹೇಳಿದ್ದ. ಆದರೆ ನಾನು ಮುಜಫ್ಫರ್‌ಪುರ ಆಸ್ಪತ್ರೆಗೆ ಹೋದಾಗ ಅಲ್ಲಿ ಮಗಳು ಇರಲಿಲ್ಲ. ಕೊನೆಗೆ ಸಾಕಷ್ಟು ಶೋಧದ ಬಳಿಕ ಆ್ಯಂಬುಲೆನ್ಸ್‌ನಲ್ಲಿ ಶವ ಪತ್ತೆ ಆಗಿದೆ ಎಂದು ಮೃತಳ ತಾಯಿ ಹೇಳಿದ್ದಾಳೆ.