Asianet Suvarna News

ಆಸ್ಕರ್ ಅಕಾಡೆಮಿ ಸದಸ್ಯರಾಗಿ ವಿದ್ಯಾ ಬಾಲನ್, ಏಕ್ತಾ ಕಪೂರ್‌ಗೆ ಆಹ್ವಾನ

  • ಆಸ್ಕರ್ ಅಕಾಡೆಮಿ ಸದಸ್ಯರಾಗಿ ಬಾಲಿವುಡ್ ನಟಿ ವಿದ್ಯಾಬಾಲನ್
  • ಆಸ್ಕರ್‌ಗೆ ಓಟ್ ಮಾಡಲು ಅವಕಾಶ
Vidya Balan Ekta Kapoor invited to be Oscars Academy members dpl
Author
Bangalore, First Published Jul 2, 2021, 5:59 PM IST
  • Facebook
  • Twitter
  • Whatsapp

395 ಚಲನಚಿತ್ರೋದ್ಯಮ ವ್ಯಕ್ತಿಗಳಲ್ಲಿ ವಿದ್ಯಾ ಬಾಲನ್, ಏಕ್ತಾ ಕಪೂರ್, ಮತ್ತು ಶೋಭಾ ಕಪೂರ್ ಕೂಡ ಆಸ್ಕರ್ ಪ್ರಶಸ್ತಿಗಳ ಹಿಂದಿರುವ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್‌ಭಾಗವಾಗಲು ಆಹ್ವಾನವನ್ನು ಪಡೆದಿದ್ದಾರೆ.

ತುಮ್ಹಾರಿ ಸುಲು ಮತ್ತು ಕಹಾನಿ ಸಿನಿಮಾದ ಅಭಿನಯಕ್ಕಾಗಿ ವಿದ್ಯಾ ಬಾಲನ್ ಗುರುತಿಸಲ್ಪಟ್ಟರು. ಏಕ್ತಾ ಕಪೂರ್ ಡ್ರೀಮ್ ಗರ್ಲ್ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈಗಾಗಿ ಗುರುತಿಸಲ್ಪಟ್ಟಿದ್ದರೆ, ಶೋಭಾ ಉಡ್ತಾ ಪಂಜಾಬ್ ಮತ್ತು ದಿ ಡರ್ಟಿ ಪಿಕ್ಚರ್ ಚಿತ್ರಕ್ಕಾಗಿ ಗುರುತಿಸಿಕೊಂಡಿದ್ದಾರೆ.

ವಿದ್ಯಾ ಬಾಲನ್‌ - ಪ್ರಿಯಾಂಕಾ ಚೋಪ್ರಾ: ಸೆಲೆಬ್ರೆಟಿಗಳ ಕಾಂಟ್ರೋವರ್ಷಿಯಲ್‌ ಫೋಟೋಗಳು

ಅಕಾಡೆಮಿಗೆ ಸೇರಲು ಆಹ್ವಾನಿಸಲಾದ ಇತರ ನಟರಲ್ಲಿ ರಾಬರ್ಟ್ ಪ್ಯಾಟಿನ್ಸನ್, ಲಾವೆರ್ನೆ ಕಾಕ್ಸ್, ವನೆಸ್ಸಾ ಕಿರ್ಬಿ, ಸ್ಟೀವನ್ ಯೂನ್ ಮತ್ತು ಇತರರು. ಆಹ್ವಾನಿಸಲಾದ ನಿರ್ದೇಶಕರಲ್ಲಿ ಕ್ಯಾಥಿ ಯಾನ್, ಜೊನಾಥನ್ ಗ್ಲೇಜರ್ ಮತ್ತು ಹೆಚ್ಚಿನವರು ಸೇರಿದ್ದಾರೆ.

ಅಕಾಡೆಮಿ ವ್ಯಾಪಕ ಬದಲಾವಣೆಯನ್ನು ಕಾಣುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ನಿರ್ದೇಶಕ ಅಮಿತ್ ಮಸೂರ್ಕರ್ ಅವರ ಶೆರ್ನಿ ಯಲ್ಲಿ ವಿದ್ಯಾ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಕಾಡೆಮಿಗೆ ಸೇರಲು ಮತ್ತು ಆಸ್ಕರ್‌ನಲ್ಲಿ ಮತ ಚಲಾಯಿಸಲು ಆಹ್ವಾನಿಸಲ್ಪಟ್ಟಿರುವ ಇತರ ಭಾರತೀಯ ತಾರೆಯರು ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್, ಅಮಿತಾಬ್ ಬಚ್ಚನ್, ಅಮೀರ್ ಖಾನ್, ಐಶ್ವರ್ಯಾ ರೈ ಬಚ್ಚನ್, ಸಲ್ಮಾನ್ ಖಾನ್ ಮತ್ತು ಚಲನಚಿತ್ರ ನಿರ್ಮಾಪಕರಾದ ಗೌತಮ್ ಘೋಸ್ ಮತ್ತು ಬುದ್ಧದೇಬ್ ದಾಸ್‌ಗುಪ್ತಾ.

Follow Us:
Download App:
  • android
  • ios