UPSC Mystery: ಒಂದೇ ಸ್ಥಾನ, ಒಂದೇ ರೋಲ್ ನಂಬರ್, ಇಬ್ಬರು ಯುಪಿಎಸ್‌ಸಿ ಅಭ್ಯರ್ಥಿಗಳು!
ಯುಪಿಎಸ್‌ಸಿ ಮೂಲಗಳು ಪ್ರಕಾರ ಈ ಕುರಿತಾತಿ ಅಗತ್ಯ ತಿದ್ದುಪಡಿಯನ್ನು ಮಾಡಲಾಗಿದ್ದು, ಆಯಶಾ ಫಾತಿಮಾ ಅವರೇ ಸರಿಯಾದ ಅಭ್ಯರ್ಥಿ ಎನ್ನುವುದು ಗೊತ್ತಾಗಿದೆ.
ಭೋಪಾಲ್ (ಮೇ.25): ಅದು ಅಂತಿಂತ ಪರೀಕ್ಷೆಯಲ್ಲ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು, ಲಕ್ಷಾಂತರ ಮಂದಿ ಪರೀಕ್ಷೆ ಬರೆದರೂ ಕೊನೆಗ ಆಯ್ಕೆಯಾಗೋದು ಕೆಲವೇ ನೂರು ಮಂದಿ ಮಾತ್ರ. ಆದರೆ, ಮಧ್ಯಪ್ರದೇಶದಲ್ಲಿ ಇಬ್ಬರು ಯುವತಿಯರ ನಡುವೆ ಅತ್ಯಂತ ಕುತೂಹಲಕಾರಿಯಾದ 'ಡ್ರಾ' ದಾಖಲಾಗಿದೆ. ಇಬ್ಬರೂ ಒಂದೇ ರೀತಿಯ ಮೊದಲ ಹೆಸರನ್ನು ಹೊಂದಿದ್ದು ಮಾತ್ರವಲ್ಲದೆ, ಒಂದೇ ರೋಲ್ ನಂಬರ್ ಕೂಡ ಹೊಂದಿದ್ದಾರೆ. ಕೊನೆಗೆ ಪರೀಕ್ಷೆಯಲ್ಲಿ ಪಡೆದುಕೊಂಡ ಶ್ರೇಯಾಂಕ ಕೂಡ ಒಂದೇ ಆಗಿದೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ 23 ವರ್ಷದ ಆಯಶಾ ಫಾತಿಮಾ ಹಾಗೂ ಅಲಿರಾಜ್‌ಪುರ ಜಿಲ್ಲೆಯ 26 ವರ್ಷದ ಅಯಶಾ ಮಕ್ರನಿ, ಇಬ್ಬರೂ ಇತ್ತೀಚೆಗೆ ಪ್ರಕಟವಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 184ನೇ ಸ್ಥಾನ ಪಡೆದಿರುವುದಾಗಿ ಹೇಳಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಿವಿಧ ಸರ್ಕಾರಿ ಇಲಾಖೆಗಳಿಗೆ ಅಧಿಕಾರಿಗಳನ್ನು ಈ ಮಹತ್ವದ ಪರೀಕ್ಷೆಯನ್ನು ನಡೆಸುತ್ತದೆ. ಇದರಲ್ಲಿ ಈ ವರ್ಷ ಒಟ್ಟು 933 ಮಂದಿ ಉತ್ತೀರ್ಣರಾಗಿದ್ದಾರೆ. ಇಬ್ಬರೂ ಯುವತಿಯರು ಅಂದಾಜು 200 ಕಿಲೋಮೀಟರ್ ದೂರದಲ್ಲಿ ವಾಸ ಮಾಡುತ್ತಿದ್ದಾರೆ. ಇಬ್ಬರೂ ಕೂಡ ಒಂದೇ ರೋಲ್ ನಂಬರ್ ಹೊಂದಿರುವ ಆಡ್ಮಿಷನ್ ಕಾರ್ಡ್ ಕೂಡ ನೀಡುವ ಮೂಲಕ ತಮ್ಮ ಹಕ್ಕನ್ನು ಸಾಬೀತು ಮಾಡಿದ್ದಾರೆ. ಇದಲ್ಲದೆ, ಈ ವಿಚಾರವಾಗಿ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ಕೂಡ ದಾಖಲು ಮಾಡಿದ್ದು, ಯುಪಿಎಸ್‌ಸಿಗೂ ಮಾಹಿತಿ ನೀಡಿದ ಸ್ಪಷ್ಟನೆ ನೀಡುವಂತೆ ಕೇಳಿಕೊಂಡಿದ್ದಾರೆ.
ನಾನು ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಹಾಕಿ ಓದಿದ್ದೇನೆ. ಬೇರೆ ಯಾರೋ ಒಬ್ಬರು ಬಂದು ನನ್ನ ಹಕ್ಕನ್ನು ಕಸಿದುಕೊಳ್ಳಲು ಬಿಡೋದಿಲ್ಲ ಎಂದು ಆಯಶಾ ಮಕ್ರನಿ ಹೇಳಿದ್ದಾರೆ. ನನಗೆ ಯುಪಿಎಸ್‌ಸಿ ಹಾಗೂ ಸರ್ಕಾರಿಂದ ನ್ಯಾಯ ಬೇಕು ಅಷ್ಟೇ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಆಯಶಾ ಫಾತಿಮಾ ಕೂಡ ಇದೇ ಮಾತನ್ನು ಹೇಳಿದ್ದಾರೆ. ತನ್ನ ಹೆಸರು ಮಾತ್ರವಲ್ಲದೆ, ತನ್ನದೇ ರೋಲ್‌ನಂಬರ್ ಹೊಂದಿರುವ ಇನ್ನೊಬ್ಬರು ಇದ್ದಾರೆ ಎಂದು ತಿಳಿದು ನನಗೆ ಆಘಾತವಾಗಿದೆ ಎಂದಿದ್ದಾರೆ. "ಅಂತಹ ವಂಚನೆಯಾಗದಂತೆ ನಾನು ಇದನ್ನು ನೋಡುತ್ತಿದ್ದೇನೆ. ಯಾವುದೇ ಜ್ಞಾಪಕ ಪತ್ರ ಅಥವಾ ಯಾವುದನ್ನಾದರೂ ನೀಡಬೇಕೆ, ನಾನು ಮುಂದೆ ನೋಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.
ಆದರೆ, ಪ್ರವೇಶ ಕಾರ್ಡ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚಿನ ವ್ಯತ್ಯಾಸಗಳು ಕಂಡುಬರುತ್ತವೆ. ಆಯಶಾ ಮಕ್ರಾನಿ ಅವರ ಕಾರ್ಡ್ ವ್ಯಕ್ತಿತ್ವ ಪರೀಕ್ಷೆಯ ದಿನಾಂಕವನ್ನು ಉಲ್ಲೇಖ ಮಾಡಿದೆ. ಇದು ಪರೀಕ್ಷೆಯ ನಿರ್ಣಾಯಕ ಅಂಶ ಕೂಡ ಆಗಿದೆ. ಅದನ್ನು 2023ರ ಏಪ್ರಿಲ್ 25ರ ಗುರುವಾರ ಎಂದು ತೋರಿಸಿದೆ. ಇನ್ನು ಆಯಶಾ ಫಾತಿಮಾ ಅವರ ಕಾರ್ಡ್ ಕೂಡ ಅದೇ ದಿನಾಂಕವನ್ನು ಮಂಗಳವಾರ ಎಂದು ತೋರಿಸಿದೆ. ಕ್ಯಾಲೆಂಡರ್ ಪ್ರಕಾರ 20023ರ ಏಪ್ರಿಲ್ 25 ಮಂಗಳವಾರವಾಗಿದೆ.
ಅದಲ್ಲದೆ, ಆಯಶಾ ಫಾತಿಮಾ ಅವರ ಕಾರ್ಡ್ ಕ್ಯೂಆರ್ ಕೋಡ್‌ನೊಂದಿಗೆ ಯುಪಿಎಸ್‌ಸಿಯ ವಾಟರ್‌ಮಾರ್ಕ್ ಅನ್ನು ಹೊಂದಿದೆ, ಆದರೆ ಆಯಶಾ ಮಕ್ರಾನಿಯ ಕಾರ್ಡ್ ಯಾವುದೇ ಕ್ಯೂಆರ್ ಕೋಡ್ ಇಲ್ಲದೆ ಸರಳ ಕಾಗದದ ಮುದ್ರಣವನ್ನು ಹೋಲುತ್ತದೆ. ಯುಪಿಎಸ್‌ಪಿ ಮೂಲಗಳ ಪ್ರಕಾರ ಈಗಾಗಲೇ ಇದನ್ನು ಸರಿಪಡಿಸಲಾಗಿದ್ದು, ಆಯಶಾ ಫಾತಿಮಾ ಅವರೇ ನಿಜವಾದ ಅಭ್ಯರ್ಥಿ ಎನ್ನಲಾಗಿದೆ. ಆದರೆ, ಇಂಥ ದೋಷ ಹೇಗೆ ಸಂಭವಿಸಿತು ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್ ಎಸ್ ಸೋಮನಾಥ್!
ನಾಗರಿಕ ಸೇವಾ ಪರೀಕ್ಷೆಯು ಭಾರತದಲ್ಲಿನ ಅತ್ಯಂತ ಸ್ಪರ್ಧಾತ್ಮಕ ಮತ್ತು ಸವಾಲಿನ ಪರೀಕ್ಷೆಗಳಲ್ಲಿ ಒಂದಾಗಿದೆ, ಪ್ರತಿ ವರ್ಷ ಸುಮಾರು 800 ಹುದ್ದೆಗಳಿಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅರ್ಜಿದಾರರು ಸ್ಪರ್ಧಿಸುತ್ತಾರೆ. ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿದೆ: ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ. ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
Who is Ishita Kishore: 'ಕಂಡಿದ್ದು ಒಂದೇ ಕನಸು.. ಅದು ನಿಜವಾಗಿದೆ..' ಯುಪಿಎಸ್‌ಸಿ ಟಾಪರ್ ಇಶಿತಾ ಕಿಶೋರ್ ಮಾತು!