ಸೀಟ್‌ ಬೆಲ್ಟ್‌ ಹಾಕದೇ ಡಾನ್ಸ್‌... ಮೂವರು ಡಾನ್ಸಿಂಗ್‌ ಪೊಲೀಸರಿಗೆ ಅಮಾನತಿನ ಶಿಕ್ಷೆ

 

  • ಸೀಟ್‌ ಬೆಲ್ಟ್ ಹಾಕದೇ ನೃತ್ಯ ಮಾಡಿದ ಪೊಲೀಸರು
  • ಪೊಲೀಸರಿಂದಲೇ ಸಂಚಾರಿ ನಿಯಮ ಉಲ್ಲಂಘನೆ
  • ಈಗ ಮೂವರು ಪೊಲೀಸರಿಗೆ ಅಮಾನತಿನ ಶಿಕ್ಷೆ
     
Three cops suspended in Gujarat after video of their dancing for music goes viral akb

ಗುಜರಾತ್(ಜ. 20): ಪೊಲೀಸ್‌ ಸಮವಸ್ತ್ರ ಧರಿಸಿ ಡಾನ್ಸ್‌ ಮಾಡಿದ್ದ ಪೊಲೀಸರು ಈಗ ಅಮಾನತಿನ ಶಿಕ್ಷೆ ಎದುರಿಸುತ್ತಿದ್ದಾರೆ. ಕಛ್-ಗಾಂಧಿಧಾಮ್ (Kutch-Gandhidham) ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ವಾಹನದಲ್ಲಿ ಪ್ರಯಾಣಿಸುವಾಗ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬಳಿಕ ಬುಧವಾರ ಈ ಮೂವರನ್ನು ಅಮಾನತುಗೊಳಿಸಲಾಗಿದೆ.

ಪೊಲೀಸರ ಪ್ರಕಾರ, ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ವಿಡಿಯೋದಲ್ಲಿ, ನಾಲ್ವರು ಪೊಲೀಸ್ ಸಿಬ್ಬಂದಿ ಸಮವಸ್ತ್ರದಲ್ಲಿದ್ದು, ಅವರು ಪ್ರಯಾಣಿಸುತ್ತಿದ್ದ ವಾಹನದ ಸ್ಟಿರಿಯೊದಲ್ಲಿ ಕೇಳಿ ಬಂದ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರು. ಆದರೆ ಲೋಕಕ್ಕೆ ಬುದ್ಧಿ ಹೇಳುವ ಪೊಲೀಸರು ಯಾವುದೇ ಸುರಕ್ಷತಾ ಬೆಲ್ಟ್ ಅಥವಾ ಮುಖವಾಡಗಳನ್ನು ಧರಿಸಿರಲಿಲ್ಲ. 

Drug Deal ಸಿಎಂ ಮನೆ ಬಳಿ ಗಾಂಜಾ ಮಾರಾಟ ಕೇಸ್, ಆರ್‌ಟಿ ನಗರ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್

ಈ ಬಗ್ಗೆ ಕಛ್-ಗಾಂಧಿಧಾಮ್‌ನ ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಪಾಟೀಲ್ (Mayur Paatil) ಅವರ ಕಚೇರಿ ಪ್ರಕಟಿಸಿದ ಹೇಳಿಕೆಯಲ್ಲಿ, ಗಾಂಧಿಧಾಮ್ ಎ ವಿಭಾಗದ ಪೊಲೀಸ್ ಠಾಣೆಗೆಸೇರಿದ ಮೂವರು ಸಿಬ್ಬಂದಿಗಳಾದ  ಜಗದೀಶ್ ಸೋಲಂಕಿ (agdish Solanki), ಹರೇಶ್ ಚೌಧರಿ (Haresh Chaudhary) ಮತ್ತು ರಾಜಾ ಹಿರಾಗರ್ (Raja Hiragar) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. 

ಮಾಧ್ಯಮಗಳು ಮತ್ತು ಹಲವಾರು ಸಾಮಾಜಿಕ ಜಾಲತಾಣಗಳು ಈ ವೈರಲ್ ವೀಡಿಯೊವನ್ನು ಗಮನಕ್ಕೆ ತಂದಿವೆ. ಇದರಲ್ಲಿ ಪೊಲೀಸ್ ಸಿಬ್ಬಂದಿ ಪೊಲೀಸ್ ಸಮವಸ್ತ್ರವನ್ನು ಧರಿಸಿ, ನಾಲ್ಕು ಚಕ್ರದ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಜೊತೆಗೆ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಚಾಲನೆ ಮಾಡುವಾಗ ಪೊಲೀಸರೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಇಂತಹ ಕೃತ್ಯಗಳು ಮೆಚ್ಚತಕ್ಕಂತದ್ದಲ್ಲ. ಇದರಿಂದ ಶಿಸ್ತಿನ ಇಲಾಖೆ ಹಾಗೂ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Crime News ದೂರು ಕೊಡಲು ಹೋದ ಮಹಿಳೆಯನ್ನ ಮಂಚಕ್ಕೆ ಕರೆದ್ರಾ ಪೊಲೀಸ್ ಇನ್ಸ್‌ಪೆಕ್ಟರ್..?

ವೀಡಿಯೊದಲ್ಲಿ ಕಂಡು ಬರುವ ನಾಲ್ವರು ಪೊಲೀಸರಲ್ಲಿ, ಗಾಂಧಿಧಾಮ್ ಎ ವಿಭಾಗದ ಪೊಲೀಸ್ ಠಾಣೆಗೆ ಸೇರಿದ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಬನಸ್ಕಾಂತ (Banaskantha) ಠಾಣೆಗೆ ಸೇರಿದ ಒಬ್ಬ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲು ಬನಸ್ಕಾಂತದ  ಪೊಲೀಸ್ ವರಿಷ್ಠಾಧಿಕಾರಿ  ಅವರಿಗೆ ಪತ್ರ ಬರೆಯಲಾಗಿದೆ ಎಂದು ಕಛ್-ಗಾಂಧಿಧಾಮ್‌ನ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಏನಾದರೂ ಹೀಗೆ ತಪ್ಪು ಮಾಡಿದಲ್ಲಿ ಸೀದಾ ಎಳೆದುಕೊಂಡು ಹೋಗಿ ಕೇಸು ದಾಖಲಿಸುವ ಜೊತೆ ಬೇರೆಯವರಿಗೆ ಶಿಸ್ತಿನ ಪಾಠ ಕಲಿಸುವ ಪೊಲೀಸರೇ ಇಲ್ಲಿ ಶಿಕ್ಷೆಗೊಳಗಾಗಿದ್ದು, ಶಿಸ್ತಿನ ಇಲಾಖೆ ಎನಿಸಿರುವ ಪೊಲೀಸ್‌ ಠಾಣೆಯತ್ತ ಎಲ್ಲರೂ ಬೆರಳು ತೋರಿಸುವಂತಾಗಿದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai) ನಿವಾಸ ಬಳಿಯೇ ಪೊಲೀಸರು ಡ್ರಗ್ಸ್ ದಂಧೆಗಿಳಿದಿರುವ (Drug Mafia) ಆತಂಕಕಾರಿ ಸಂಗತಿ ಬಯಲಾಗಿದೆ. ರಾಜ್ಯದಲ್ಲಿ ಗಾಂಜಾ ಸಾಗಾಟ ಧಂದೆಗೆ ಪೊಲೀಸರೇ ಕಿಂಗ್‌ ಪಿನ್ ಎಂಬ ಎಕ್ಸ್‌ಕ್ಲ್ಯೂಸಿವ್‌  ಮಾಹಿತಿ ಈಗ ಹೊರಬಿದ್ದಿದೆ. ಕೋರಮಂಗಲ (Koramangala) ಠಾಣೆ ಸಿಬ್ಬಂದಿ  ಶಿವಕುಮಾರ್‌ ಹಾಗೂ ಸಂತೋಷ್‌, ಮೋಸ್ಟ್‌ ವಾಂಟೆಡ್‌ ಪೆಡ್ಲರ್‌ ಜತೆ ಗಾಂಜಾ ಧಂದೆಗಿಳಿದ ಪೊಲೀಸರಾಗಿದ್ದು, ಆರ್‌ ಟಿ ನಗರದ 80 ಅಡಿ ರಸ್ತೆ ಬಳಿ ಡೀಲ್‌ಗೆ ಇಳಿದಿದ್ದ ಈ ಪೊಲೀಸರು ಹಾಗೂ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. 

ಸಿಎಂ ಮನೆಯಿಂದ 100 ಮೀಟರ್‌ ದೂರವಿರುವ ಈ ರಸ್ತೆಯಲ್ಲಿ ಘಟನೆ ನಡೆದಿದ್ದು ಗಾಂಜಾ ಬೆಲೆ ಎಷ್ಟು ನಿಗದಿ ಮಾಡಬೇಕು ಎಂಬ ಬಗ್ಗೆ ಪೊಲೀಸರು ಚರ್ಚಿಸುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಮಾತಿನ ಚಕಮಕಿಯಾದಾಗ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್‌ ಟಿ ನಗರ ಪೊಲೀಸರು ಬಂದು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಪೆಡ್ಲರ್‌ ಬಳಿ ಗಾಂಜಾ ಪಡೆದು ಪೊಲೀಸರೇ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಈಗ ಪ್ರಕರಣ ದಾಖಲಾಗಿದ್ದು ಪೋಲಿಸರನ್ನು ಬಂಧಿಸಲಾಗಿದೆ.

Latest Videos
Follow Us:
Download App:
  • android
  • ios