Asianet Suvarna News Asianet Suvarna News

ಪಾರ್ಕರ್‌ ಸ್ಟೈಲ್‌ನಲ್ಲಿ ಗೋಡೆ ಏರಿ ನಿಂತ ಮೇಕೆ... ವಿಡಿಯೋ ವೈರಲ್‌

  • ಎತ್ತರದ ಗೋಡೆಯನ್ನು ಏರಿದ ಮೇಕೆ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
  • ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಪೋಸ್ಟ್ ಮಾಡಿದ ವಿಡಿಯೋ
A goat is seen slaying climbing walls in a viral video akb
Author
Bangalore, First Published Jan 25, 2022, 4:52 PM IST

ಆಡೊಂದು ಪಾರ್ಕರ್‌ ಸ್ಟೈಲ್‌ನಲ್ಲಿ ಗೋಡೆ ಏರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಎತ್ತರದ ಗೋಡೆಯನ್ನು ಆಡೊಂದು ಲಂಬವಾಗಿ ಚಲಿಸಿ ಏರಿ ಗೋಡೆ ಮೇಲೆ ಹೋಗಿ ನಿಂತ ವಿಡಿಯೋ ಇದಾಗಿದೆ. ಮಿಂಚಿನ ವೇಗದಲ್ಲಿ ಗೋಡೆ ಏರುವ ಆಡು ಎಲ್ಲಿಯೂ ತನ್ನ ಸಮತೋಲನವನ್ನು ಕಳೆದುಕೊಳ್ಳದೇ ಒಂದೇ ನೆಗೆತದಲ್ಲಿ ಗೋಡೆಯ ತುದಿ ಮುಟ್ಟುವಲ್ಲಿ ಯಶಸ್ವಿಯಾಗುತ್ತದೆ. ಗೋಡೆ ಮೇಲೆ ಏರಿದ ಅದು ವಿಜಯಶಾಲಿಯಂತೆ ಪೋಸ್‌ ಕೊಡುವ ದೃಶ್ಯ ವಿಡಿಯೋದಲ್ಲಿದೆ.  

ನಾಲ್ಕು ಸೆಕೆಂಡ್‌ಗಳ ಈ ವಿಡಿಯೋವನ್ನು  ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ( IPS)ದೀಪಾಂಶು  ಕಬ್ರಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಜನವರಿ 24ರಂದು ಪೋಸ್ಟ್‌ ಮಾಡಿದ್ದು ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೀವನದಲ್ಲಿ ಮುಂದುವರಿಯಬೇಕು ಎಂದು ನಿರ್ಧರಿಸಿದ ವ್ಯಕ್ತಿಯನ್ನು  ಅಡೆತಡೆಗಳು ಹೇಗೆ ತಡೆಯಲು ಸಾಧ್ಯ ಎಂದು ಬರೆದು ಈ ವಿಡಿಯೋವನ್ನು ಅವರು ಪೋಸ್ಟ್‌ ಮಾಡಿದ್ದಾರೆ. ಈ ಮೇಕೆಯ ಚಾಣಾಕ್ಷತನವನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು,  ಮೇಕೆಯೂ ಭೌತಶಾಸ್ತ್ರದ ನಿಯಮವನ್ನು ಅರಿತಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

ನಿರಂತರವಾಗಿ ಬೀಸುತ್ತಿರುವ ಕೊರೋನಾ ಅಲೆಯಿಂದ ಎಲ್ಲರೂ ಕಂಗೆಟ್ಟಿದ್ದಾರೆ. ಈ ಸಾಂಕ್ರಾಮಿಕ ರೋಗದ (pandemic) ವಿರುದ್ಧ ಹೋರಾಡಲು, ಜನರು ಕೊರೊನಾ ಶಿಷ್ಟಾಚಾರವನ್ನು ಅನುಸರಿಸಬೇಕು ಮತ್ತು ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗಮನ ಹರಿಸಬೇಕು ಎಂದು ವೈದ್ಯರು ಹೇಳುತ್ತಾರೆ.  ವೈದ್ಯರ ಪ್ರಕಾರ, ಮೇಕೆಯ ಹಾಲು (Goat Milk) ಅಂತಹ ಪ್ರಯೋಜನಕಾರಿ ಉತ್ಪನ್ನಗಳಲ್ಲಿ ಒಂದಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಡೆಂಗ್ಯೂ-ಕೊರೊನಾದಂತಹ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. 

ಸುಮ್ಮನಿರಲಾರದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇನಾ... ಒಂಟೆ ಬಾಲ ಹಿಡಿಯಲು ಹೋಗಿ ಸರಿಯಾಗಿ ತಿಂದ

ಕಾನ್ಪುರದ ಚಂದ್ರಶೇಖರ್ ಆಜಾದ್ ಕೃಷಿ ವಿಶ್ವವಿದ್ಯಾಲಯದ ಡಾ. ಚಂದ್ರಕೇಶ್ ರೈ ಅವರು ಕೊರೊನಾ ವೈರಸ್ ನಿಂದ  ರಕ್ಷಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೇಕೆಯ ಹಾಲನ್ನು ಕುಡಿಯುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಪ್ರತಿದಿನ ಊಟದ ನಂತರ 240 ಗ್ರಾಂ ಮೇಕೆಹಾಲು ಕುಡಿಯಲು ಪ್ರಾರಂಭಿಸಿದರೆ ಜನರ ರೋಗ ನಿರೋಧಕ ಶಕ್ತಿಯಲ್ಲಿ (immunity power) ಗಮನಾರ್ಹ ಹೆಚ್ಚಳವಾಗಬಹುದು. 

Yogini Stolen Statue : ಮೇಕೆ ಮುಖದ ಯೋಗಿನಿಯ ವಿಗ್ರಹ ಭಾರತಕ್ಕೆ ವಾಪಸ್!

ಮೇಕೆ ಹಾಲಿನ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ (strong bone), ಜೀರ್ಣಕ್ರಿಯೆ ಸುಗಮವಾಗುವುದು, ಮೇಕೆಯ ಹಾಲಿನಲ್ಲಿ ಉರಿಯೂತ ನಿವಾರಕ ಗುಣವಿದೆ ಅಲ್ಲದೇ ಇದು ಹೃದಯದ ರಕ್ಷಣೆಯನ್ನು ಮಾಡುತ್ತದೆ ಹಾಗೂ ಕೂದಲನ್ನು ಬಲವಾಗಿಸುತ್ತದೆ. 

ಮೇಕೆಯ ಹಾಲನ್ನು ಸೇವಿಸುವುದು ಹೇಗೆ (how to drink goat milk)
ಮೇಕೆಯ ಹಾಲನ್ನು ಅನೇಕ ರೀತಿಯಲ್ಲಿ ಬಳಸಬಹುದು. ಅದರಿಂದ ತಯಾರಿಸಿದ ಚೀಸ್ ಮತ್ತು ಮೊಸರನ್ನು ಆಹಾರಕ್ಕೆ ಬಳಸಬಹುದು. ಮೇಕೆಯ ಹಾಲಿನ ಐಸ್ ಕ್ರೀಮ್ ಕೂಡ ಮಾಡಬಹುದು. ಮೇಕೆಯ ಹಾಲಿನಿಂದ ಚಹಾ ಮಾಡಬಹುದು ಅಥವಾ ಬಿಸಿ ಮಾಡಿ ಸೇವಿಸಬಹುದು. ಇದನ್ನು ಸಿಹಿ ತಿಂಡಿಗಳನ್ನು ತಯಾರಿಸಲು ಬಳಸಬಹುದು. ಆದರೆ ಇದರ ಸೇವನೆ ಶಿಶುಗಳಿಗೆ ಹಾನಿಕಾರಕವಾಗಬಹುದು. ಅದರಲ್ಲೂ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಹಾನಿಕಾರಕ. ಮೇಕೆಯ ಹಾಲಿನಲ್ಲಿ ಕೊಬ್ಬು ಇದೆ. ಇದು ಬೊಜ್ಜು ಬರಲು ಕಾರಣವಾಗಬಹುದು. 

Follow Us:
Download App:
  • android
  • ios