ಭಾರತ ಮತ್ತು ಉರುಗ್ವೆ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೇತೃತ್ವದ 10 ಮಂದಿ ಸಂಸದರ ನಿಯೋಗ 4 ದಿನಗಳ ಕಾಲ ಉರುಗ್ವೆ ಭೇಟಿ ಕೈಗೊಂಡಿತ್ತು.

ನವದೆಹಲಿ: ಭಾರತ ಮತ್ತು ಉರುಗ್ವೆ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೇತೃತ್ವದ 10 ಮಂದಿ ಸಂಸದರ ನಿಯೋಗ 4 ದಿನಗಳ ಕಾಲ ಉರುಗ್ವೆ ಭೇಟಿ ಕೈಗೊಂಡಿತ್ತು. ಜೂ.14ರಿಂದ 17ರವರೆಗೆ ಈ ನಿಯೋಗ ಹಲವು ಒಪ್ಪಂದಗಳು ಹಾಗೂ ದ್ವಿಪಕ್ಷೀಯ ಕಾರ್ಯಕ್ರಮಗಳ ಕುರಿತಾಗಿ ಈ ನಿಯೋಗ ಚರ್ಚೆ ನಡೆಸಿದೆ.

ಈ ನಿಯೋಗದಲ್ಲಿ ವಿವಿಧ ಪಕ್ಷಗಳ ಉಭಯ ಸದನಗಳ ಸಂಸದರು ಸೇರಿದ್ದಾರೆ. ಜೂ.14ರಂದು ಉರುಗ್ವೆಗೆ ಭೇಟಿ ನೀಡಿದ ನಿಯೋಗವನ್ನು ಅಲ್ಲಿನ ರಾಯಭಾರಿ ದಿನೇಶ್‌ ಭಾಟಿಯಾ (Dinesh Bhatia), ಉರುಗ್ವೆ ಬಗ್ಗೆ ಹಾಗೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತಾಗಿ ವಿವರಿಸಿದರು. ಉರುಗ್ವೆಯ ಸಂದದರ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಯಿತು. ಇದೇ ವೇಳೆ ಪ್ರಹ್ಲಾದ್‌ ಜೋಶಿ ಅವರು ಉರುಗ್ವೆಯ ಸಂಸತ್ತಿನಲ್ಲಿ ಭಾರತ-ಉರುಗ್ವೆ ಸಂಸದೀಯ ಗೆಳೆತನ ಗುಂಪಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಜೋಶಿ ನೇತೃತ್ವದ ಈ ನಿಯೋಗ ಬ್ರೆಜಿಲ್‌ಗೆ ಭೇಟಿ ನೀಡಿತ್ತು.