ಭೋಪಾಲ್(ಮಾ. 13)  ಕಾಂಗ್ರೆಸ್ ತೊರೆದು ಜೋತಿರಾಧಿತ್ಯ ಸಿಂಧ್ಯಾ ಬಿಜೆಪಿ ಸೇರಿದ್ದಾರೆ. ರಾಜಕುಮಾರನ ಇದೊಂದು ನಡೆ ಇಡೀ ಮಧ್ಯಪ್ರದೇಶ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಆದರೆ ಬಿಜೆಪಿ ಸೇರಿದ ಒಂದೇ ದಿನದಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆಯೂ ನಡೆದು ಹೋಗಿದೆ.

ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗ ಸಿಂಧ್ಯಾ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮತ್ತು ಪೋರ್ಜರಿ ದೂರಿನ ತನಿಖೆಗೆ ಮುಂದಾಗಿದೆ.  ಕೇಂದ್ರದ ಮಾಜಿ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ದೂರು ದಾಖಲಾಗಿದ್ದು ಇಲಾಖೆ ಅತಿ ಶೀಘ್ರವಾಗಿ ಕೈಗೆತ್ತಿಕೊಂಡಿದೆ.

ಸಿಂಧ್ಯಾ 400 ಕೋಣೆ ಭವ್ಯ ಅರಮನೆ ನೋಡ್ಕಂಡು ಬನ್ನಿ

ಸಿಂಧ್ಯಾ ಬಿಜೆಪಿ ಸೇರಿದ ನಂತರ ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರದ ಬುಡ ಅಲುಗಾಡುತ್ತಿರುವ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ಸಿಂಧ್ಯಾ ಜತೆಗೆ ಇಬ್ಬರು ಎಂಎಲ್ ಎ ಗಳು ಸಹ ಕಾಂಗ್ರೆಸ್ ಕಾಂಗ್ರೆಸ್ ಗೆ  ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಸಿಂಧ್ಯಾ ಮತ್ತು ಅವರ ಕುಟುಂಬದ ಮೇಲೆ ಗುರುವಾರ ದೂರೊಂದು ದಾಖಲಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸುತ್ತೇವೆ ಎಂದು ಮಧ್ಯಪ್ರದೇಶ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2104ರಲ್ಲಿ ಸಲ್ಲಿಕೆಯಾಗಿದ್ದ ಇಂಥದ್ದೇ ಒಂದು ದೂರಿನ ವಿಚಾರಣೆ ನಡೆದು ಆ ಪ್ರಕರಣ 218ರಲ್ಲಿ ಮುಕ್ತಾಯ ಕಂಡಿತ್ತು. ಒಬ್ಬ ಯುವನಾಯಕ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನೆಗೆದರೆ ಈ ಎಂತೆಂಥಾ ಬದಲಾವಣೆ ಸಾಧ್ಯವಾಗಲಿದೆ ಎಂಬುದನ್ನು ಊಹಿಸಲು ಅಸಾಧ್ಯ.