Asianet Suvarna News Asianet Suvarna News

ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ : ₹1710 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕುಸಿತ

ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ ಸಂಭವಿಸಿದೆ. 1,710 ಕೋಟಿ. ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಗುವಾನಿ ಮತ್ತು ಸುಲ್ತಾನ್ ಗಂಜ್ ಸೇತುವೆಯ ಒಂದು ಭಾಗ ಶನಿವಾರ ಕುಸಿದಿದೆ. 

A bridge being constructed at a cost of 1710 crores in Bihar collapsed gvd
Author
First Published Aug 18, 2024, 8:41 AM IST | Last Updated Aug 18, 2024, 8:41 AM IST

ಪಟನಾ (ಆ.18): ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ ಸಂಭವಿಸಿದೆ. 1,710 ಕೋಟಿ. ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಗುವಾನಿ ಮತ್ತು ಸುಲ್ತಾನ್ ಗಂಜ್ ಸೇತುವೆಯ ಒಂದು ಭಾಗ ಶನಿವಾರ ಕುಸಿದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸೇತುವೆ ಕುಸಿದಿದ್ದು, ಇದು ಮೂರನೇ ಸಲ. ಸೇತುವೆಯ 9 ಮತ್ತು 10ನೇ ಕಂಬದ ನಡುವಿನ ಭಾಗ ಶನಿವಾರ ಕುಸಿದು ಗಂಗಾನದಿ ಪಾಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು- ನೋವಿನ ವರದಿಯಾಗಿಲ್ಲ.

ಅಗುವಾನಿ - ಸುಲ್ತಾನ್ ಗಂಜ್ ಸೇತುವೆಯು ಬಿಹಾರದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. 3.1 ಕಿ.ಮೀ ಉದ್ದದ ಈ ಸೇತುವೆ ನಿರ್ಮಾಣ ಕಾರ್ಯ 2014ರಲ್ಲಿ ಆರಂಭವಾಗಿತ್ತು. ಆದರೆ ಇಲ್ಲಿಯವರೆಗೆ ಶೇ.45 ರಷ್ಟು ಕೆಲಸಗಳು ಮಾತ್ರ ಪೂರ್ಣಗೊಂಡಿವೆ. ಈ ವರ್ಷದ ಆರಂಭದಿಂದ ಇದುವರೆಗೂ ಬಿಹಾರದಲ್ಲಿ ಕನಿಷ್ಠ 12 ಸೇತುವೆಗಳು ಕುಸಿದಿವೆ.

ಹಳೆಯ ಸೇತುವೆ ಧರೆಗೆ: ಬಿಹಾರದಲ್ಲಿ ಸೇತುವೆ ಕುಸಿತದ ಸರಣಿ ಮುಂದುವರಿದಿದ್ದು, ವೈಶಾಲಿ ಜಿಲ್ಲೆಯ ರಾಘೋಪುರದಲ್ಲಿ ಶನಿವಾರ ಸಣ್ಣ ಸೇತುವೆಯೊಂದು ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‘20 ವರ್ಷ ಹಳೆಯದಾಗಿದ್ದ ಈ ಸೇತುವೆ ನೀರಿನ ರಭಸದಿಂದ ಹಾನಿಗೊಳಗಾಗಿತ್ತು. ಆದ್ದರಿಂದ ಅದರ ಬಳಕೆಯನ್ನು 2021ರಲ್ಲೇ ನಿಲ್ಲಿಸಲಾಗಿತ್ತು’ ಎಂದು ಜಿಲ್ಲಾಧಿಕಾರ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ: ಗೀತಾ ಗೋಪಿನಾಥ್‌

ಇತ್ತೀಚಿನ ದಿನಗಳಲ್ಲಿ ಬಿಹಾರದ ಹಲವು ಜಿಲ್ಲೆಗಳಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಕುಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್, ಕಿಶನ್‌ಗಂಜ್ ಜಿಲ್ಲೆಗಳು ಮತ್ತು ಇತರ ಸ್ಥಳಗಳಲ್ಲಿ ಸಣ್ಣ ಸೇತುವೆಗಳು ಕುಸಿದ ಘಟನೆಗಳು ವರದಿಯಾಗಿವೆ. ಹೀಗಾಗಿ ರಾಜ್ಯದ ಎಲ್ಲಾ ಸೇತುವೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ರಿಪೇರಿ ಮಾಡಲು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೂಚಿಸಿದ್ದರು.

Latest Videos
Follow Us:
Download App:
  • android
  • ios