ಹೈದರಾಬಾದ್‌ನಲ್ಲಿ ವಿದೇಶಿ ಪ್ರವಾಸಿಗನಿಗೆ ಒಂದು ಬಾಳೆಹಣ್ಣಿಗೆ ನೂರು ರೂಪಾಯಿ ಬೆಲೆ ಕೇಳಿದ ವ್ಯಾಪಾರಿಯಿಂದ ಆಘಾತ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರ್ಷಪೂರ್ತಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಬೆಲೆಯೂ ಕಡಿಮೆ ಆದ್ದರಿಂದ ಶ್ರೀಮಂತರು ಬಡವರೆನ್ನದೇ ಎಲ್ಲರೂ ಖರೀದಿಸಿ ತಿನ್ನಬಹುದಾದ ಹಣ್ಣು. ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿನ ಆರೋಗ್ಯಕರ ಗುಣಗಳು ಬೇಕಾದಷ್ಟಿವೆ. ಹೀಗಾಗಿ ಬಾಳೆಹಣ್ಣೆಂದರೆ ಭಾರತೀಯರಿಗೆ ಅಷ್ಟೇ ಅಲ್ಲ, ವಿದೇಶಿಯರಿಗೆ ಇಷ್ಟವಾಗುವ ಹಣ್ಣು.

ಭಾರತ ಪ್ರವಾಸಕ್ಕೆ ಬರುವ ವಿದೇಶಿಗರು ರಸ್ತೆಗಳಲ್ಲಿ, ಬೀದಿಬದಿಯಲ್ಲಿ ಸಿಗುವ ಬಾಳೆಹಣ್ಣನ್ನು ಖರೀದಿಸಿ ತಿನ್ನುವುದು ಹೆಚ್ಚು ಹೀಗಾಗಿ ಬಾಳೆಹಣ್ಣಿನ ಬೆಲೆಯನ್ನ ವಿದೇಶಿಗರು ನಿಖರವಾಗಿ ಹೇಳಬಲ್ಲರು. ದೇಶದ ಯಾವುದೇ ಮೂಲೆಗೆ ಹೋದರೂ ಬಾಳೆಹಣ್ಣಿನ ಖರೀದಿಯಲ್ಲಿ ಮೋಸ ಹೋಗಲಾರರು. ಬಾಳೆಹಣ್ಣಿನ ರೇಟು ಸ್ಥಳೀಯರಿಗಿಂತ ವಿದೇಶಿಗರಿಗೂ ಚೆನ್ನಾಗಿ ತಿಳಿದಿದೆ.

ಅಂಗಡಿಗಳಲ್ಲಿ ಬಾಳೆಹಣ್ಣು ಬಿಡಿಬಿಡಿಯಾಗಿ ಮಾರಾಟ ಮಾಡಿದ್ರೂ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಡಜನ್ ಮೂಲಕ ಮಾರಾಟ ಮಾಡ್ತಾರೆ. ಒಂದು ಡಜನ್‌ಗೆ ಹೆಚ್ಚೆಂದರೆ 60-70 ರೂಪಾಯಿಗೆ ಸಿಗುತ್ತದೆ ಚೌಕಾಶಿ ಮಾಡಿದ್ರೆ 55-60 ರೂಪಾಯಿಗೂ ಕೊಡ್ತಾರೆ.

ಆದರೆ ಹೈದರಾಬಾದ್ ನಲ್ಲಿ ಒಂದು ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ವಿದೇಶಿಗನೊಬ್ಬ ಹೈದರಾಬಾದ್ ಗೆ ಭೇಟಿ ನೀಡಿದ್ದಾನೆ. ಈ ವೇಳೆ ಸ್ಥಳೀಯ ಬಾಳೆ ಹಣ್ಣಿನ ವ್ಯಾಪಾರಿ ಬಳಿ ಖರೀದಿಸಲು ಹೋದಾಗ ಅದರ ಬೆಲೆ ವಿದೇಶಿ ಪ್ರವಾಸಿಗ ಶಾಕ್ ಆಗಿದ್ದಾನೆ.

ಬೆಳಗ್ಗೆ ಅಥವಾ ರಾತ್ರಿ ಬಾಳೆ ಹಣ್ಣು ಯಾವ ಸಮಯ ತಿಂದರೆ ಒಳ್ಳೆಯದು?

ಹಣ್ಣಿನ ಬೆಲೆ ಎಷ್ಟು?

ಕೆಲವು ವ್ಯಾಪಾರಿಗಳು ವಿದೇಶಿಯರೆಂದರೆ ಎರಡುಪಟ್ಟು ಹಣಕ್ಕೆ ಮಾರಾಟ ಮಾಡ್ತಾರೆ. ಅದೇ ರೀತಿಯಲ್ಲಿ ಹೈದರಾಬಾದ್ ಬಾಳೆ ಹಣ್ಣಿನ ವ್ಯಾಪಾರಿ ಬಳಿ ಬಂದ ವಿದೇಶಿಗನಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡಲು ಯೋಚಿಸಿದ್ದಾನೆ. ಒಂದು ಬಾಳೆಹಣ್ಣಿನ ಬೆಲೆ ನೂರು ರೂಪಾಯಿ ಎಂದಿರುವ ವ್ಯಾಪಾರಿ, ಬೆಲೆ ಕೇಳಿ ವಿದೇಶಿ ಪ್ರವಾಸಿ ಶಾಕ್ ಆಗಿದ್ದಾನೆ. 'ಒಂದು ಬಾಳೆಹಣ್ಣಿನ ಬೆಲೆ ಎಷ್ಟು?' ಎಂದು ಪದೇಪದೆ ಕೇಳಿದರೂ ಮತ್ತೆ ಮತ್ತೆ ವ್ಯಾಪಾರಿ 100 ರೂ. ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

hello@hughabroad.com ಎಂಬ ಹೆಸರಿನಲ್ಲಿ ಟ್ರಾವೆಲ್ ವಿಡಿಯೋ ಮಾಡುವ ಸ್ಕಾಟ್ಲೆಂಡ್ ನ ಯುವಕನಿಗೆ ಈ ವಿಚಿತ್ರ ಅನುಭವವಾಗಿದೆ. ಅಚ್ಚರಿಯಿಂದ ಅಷ್ಟು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಟು ಹೋಗಿರುವ ವಿದೇಶಿಗ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವ್ಲಾಗ್ ಅನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ವೈರಲ್ ಆಗಿದೆ.

View post on Instagram