ಅನಾಮಧೇಯ ವ್ಯಕ್ತಿಯಿಂದ ಐಐಟಿ ಬಾಂಬೆಗೆ ಭರ್ಜರಿ ದೇಣಿಗೆ
ಅನಾಮಧೇಯ ವ್ಯಕ್ತಿಯೊಬ್ಬರು ಐಐಟಿ ಬಾಂಬೆಗೆ ಭರ್ಜರಿ 160 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಳೆಯ ವಿದ್ಯಾರ್ಥಿಯೊಬ್ಬ ಈ ಭರ್ಜರಿ ಕೊಡುಗೆ ನೀಡಿದ್ದು ಕೊಡುಗೆ ನೀಡಿದವರು ಹೆಸರನ್ನು ತಿಳಿಸಲು ಇಚ್ಛಿಸದ ಕಾರಣ ಹೆಸರನ್ನು ಬಹಿರಂಗಗೊಳಿಸಿಲ್ಲ ಎಂದು ಐಐಟಿ ಪ್ರಕಟಣೆ ತಿಳಿಸಿದೆ.

ಮುಂಬೈ: ಅನಾಮಧೇಯ ವ್ಯಕ್ತಿಯೊಬ್ಬರು ಐಐಟಿ ಬಾಂಬೆಗೆ ಭರ್ಜರಿ 160 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಳೆಯ ವಿದ್ಯಾರ್ಥಿಯೊಬ್ಬ ಈ ಭರ್ಜರಿ ಕೊಡುಗೆ ನೀಡಿದ್ದು ಕೊಡುಗೆ ನೀಡಿದವರು ಹೆಸರನ್ನು ತಿಳಿಸಲು ಇಚ್ಛಿಸದ ಕಾರಣ ಹೆಸರನ್ನು ಬಹಿರಂಗಗೊಳಿಸಿಲ್ಲ ಎಂದು ಐಐಟಿ ಪ್ರಕಟಣೆ ತಿಳಿಸಿದೆ.
ಇದೇ ಮೊದಲ ಬಾರಿಗೆ ನಾವು ಅನಾಮಧೇಯ ವ್ಯಕ್ತಿಯಿಂದ ದೇಣಿಗೆಯನ್ನು ಸ್ವೀಕರಿಸಿದ್ದೇವೆ. ಇಂತಹ ದೇಣಿಗೆಗಳು ಅಮೆರಿಕದಲ್ಲಿ (America) ಸಾಮಾನ್ಯವಾಗಿವೆ. ಆದರೆ ಭಾರತದಲ್ಲಿ ಯಾವುದೇ ವಿಶ್ವವಿದ್ಯಾಲಯ ಈ ಮೊದಲು ಇಂತಹ ದೇಣಿಗೆ ಪಡೆದುಕೊಂಡಿದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ. ಭಾರತದಲ್ಲಿ ದೇಣಿಗೆ ನೀಡಿದ ಯಾರೂ ಸಹ ಹೆಸರನ್ನು ಹೇಳಿಕೊಳ್ಳದೇ ಇರುವುದಿಲ್ಲ. ಆದರೆ ಐಐಟಿ ಬಾಂಬೆಗೆ (IIT Bombay) ದೇಣಿಗೆ ನೀಡಿದರೆ ಅದು ಸರಿಯಾಗಿ ಬಳಕೆಯಾಗುತ್ತದೆ ಎಂದು ನೀಡಿದವರು ನಂಬಿದ್ದಾರೆ ಎಂದು ಪ್ರೊಫೆಸರ್ ಸುಭಾಶಿಸ್ ಚೌಧರಿ ಹೇಳಿದ್ದಾರೆ.
ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಮಾಂಸಾಹಾರ ಸೇವಿಸಿದ ವಿದ್ಯಾರ್ಥಿಗೆ ಅವಮಾನ! ಭುಗಿಲೆದ್ದ ಆಕ್ರೋಶ
ಐಐಟಿಯ ‘ಹಸಿರು ಇಂಧನ ಮತ್ತು ಸುಸ್ಥಿರ ಸಂಶೋಧನಾ ವಿಭಾಗ ಈ ದೇಣಿಗೆಯನ್ನು ಪಡೆದುಕೊಂಡಿದೆ. ಈ ವಿಭಾಗವನ್ನು ಫೋಟೋವೋಲ್ಟಿಕ್ಸ್, ಬ್ಯಾಟರಿ ತಂತ್ರಜ್ಞಾನ, ಶುದ್ಧ ವಾಯು ವಿಜ್ಞಾನ ಮತ್ತು ಇಂಗಾಲ ಹೊರಸೂಸುವಿಕೆಯಂತಹ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಸ್ಥಾಪಿಸಲಾಗಿದೆ. ಅಲ್ಲದೇ ಜಾಗತಿಕ ತಾಪಮಾನ ಏರಿಕೆಯ ನಿಯಂತ್ರಣ ಕ್ರಮಗಳ ಬಗ್ಗೆ ಈ ಕೇಂದ್ರ ಸಂಶೋಧನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದು ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿಗಳಿಂದ ಪಡೆದುಕೊಳ್ಳುತ್ತಿರುವ 2ನೇ ದೇಣಿಗೆಯಾಗಿದೆ. ಕಳೆದ ವರ್ಷ ನಂದನ್ ನಿಲೇಕಣಿ (Nandan nilekani) ಅವರು 315 ಕೋಟಿ ರು. ದೇಣಿಗೆ ನೀಡಿದ್ದರು. ಇಲ್ಲಿಯವರೆಗೆ ಅವರು 400 ಕೋಟಿ ರು. ಹೆಚ್ಚು ದೇಣಿಗೆ ನೀಡಿದ್ದಾರೆ. ಈ ವರ್ಷ ರಾಷ್ಟ್ರೀಯ ರಾರಯಂಕಿಂಗ್‌ನಲ್ಲಿ ಐಐಟಿ ಬಾಂಬೆ 4ನೇ ಸ್ಥಾನ ಪಡೆದುಕೊಂಡಿದೆ.
QS World University Rankings: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅತ್ಯುನ್ನತ ಸ್ಥಾನ ಪಡೆದ ಐಐಟಿ-ಬಾಂಬೆ, ಐಐಟಿ-ದೆಹಲಿ