70 ವರ್ಷದ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯನ್ನು ವಿವಾಹವಾದ ವಿಚಿತ್ರ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ. ಮಹಮ್ಮದ್‌ ಸಲೀಮುಲ್ಲಾ ನೂರಾನಿ (70) ಎಂಬ ವ್ಯಕ್ತಿ ರೇಷ್ಮಾ ಪರ್ವೀನ್‌ (25) ಎಂಬುವವರನ್ನು ಮದುವೆಯಾಗಿದ್ದಾರೆ. 

ಗಯಾ (ಜು.28): 70 ವರ್ಷದ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯನ್ನು ವಿವಾಹವಾದ ವಿಚಿತ್ರ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ. ಮಹಮ್ಮದ್‌ ಸಲೀಮುಲ್ಲಾ ನೂರಾನಿ(Mohammad Salimullah) (70) ಎಂಬ ವ್ಯಕ್ತಿ ರೇಷ್ಮಾ ಪರ್ವೀನ್‌ (25) ಎಂಬುವವರನ್ನು ಮದುವೆಯಾಗಿದ್ದಾರೆ. 

ನೂರಾನಿ ಪತ್ನಿ 4 ವರ್ಷದ ಹಿಂದೆ ಸಾವನ್ನಪ್ಪಿದ್ದು, ಆತನ ಮಕ್ಕಳಿಗೆ ಮದುವೆಯಾಗಿ ಬೇರೆ ಕಡೆ ಮನೆ ಮಾಡಿಕೊಂಡಿದ್ದಾರೆ. ಇದರಿಂದ ನೂರಾನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಆದ್ದರಿಂದ ನೂರಾನಿ ಆತನ ಸೇವೆ, ಮನೆ ನಿರ್ವಹಣೆ ಮಾಡಲು ಮತ್ತೊಂದು ವಿವಾಹವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ವಿವಾಹದ ವಿಡಿಯೋ ಟ್ವೀಟರ್‌ನಲ್ಲಿ ಹರಿದಾಡುತ್ತಿದ್ದು, ಕಮೆಂಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು

ಈ ಮದುವೆ ಸಮಾರಂಭದಲ್ಲಿ ಬ್ಯಾಂಡ್ ಅಥವಾ ಸಂಗೀತ ವಾದ್ಯ ಸರಳವಾಗಿ ನಡೆದಿದೆ. ಮದುವೆ ಬಳಿಕ ವರನು ತನ್ನ ವಧುವಿನೊಂದಿಗೆ ಹಳ್ಳಿಗೆ ಕಾರಿನಲ್ಲಿ ಹೊರಟನು. ವಯೋವೃದ್ಧ ಒಂಟಿಯಾಗಿದ್ದು ಮನೆಯಲ್ಲಿ ಕೆಲಸ ಮಾಡಲು ಆಸರೆಯಾಗಲು ಯಾರೂ ಇರಲಿಲ್ಲ. ಹೀಗಾಗಿ ಅದೇ ಸಮಯದಲ್ಲಿ, ಸ್ಥಳೀಯ ಜನರು ವಧು ರೇಷ್ಮಾ ಪರ್ವೀನ್ ಅವರನ್ನ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದಕ್ಕೊಪ್ಪಿದ ಸಲಿಮುಲ್ಲಾ ಮದುವೆಯಾಗಿದ್ದಾನೆ. ಆದರೆ ಚಿಕ್ಕ ಯುವತಿಯೊಂದಿಗೆ ಮದುವೆಯಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಕೆಲವರು ಟೀಕಿಸಿದ್ದಾರೆ. ಘಟನೆ ಸಂಬಂಧ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

Scroll to load tweet…