Asianet Suvarna News Asianet Suvarna News

WATCH: ತೆಲಂಗಾಣದಲ್ಲಿ ಹೃದಯ ವಿದ್ರಾವಕ ಘಟನೆ: ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ 11 ವರ್ಷದ ಬಾಲಕಿ!

ತಾಯಿಯ ಅಂತ್ಯಸಂಸ್ಕಾರ ನಡೆಸಲು 11 ವರ್ಷದ ಬಾಲಕಿ ಭಿಕ್ಷಾಟನೆ ಮಾಡಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಪಟ್ಟನದ ತರೋಡ ನಡೆದಿದೆ. ದುರ್ಗಾ (11) ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಮಾಡಿದ ಮಗು.

A 11 years old girl begs for her mothers funeral in telangana video went viral rav
Author
First Published Aug 18, 2024, 10:12 PM IST | Last Updated Aug 18, 2024, 10:22 PM IST

ತೆಲಂಗಾಣ (ಆ.18): ತಾಯಿಯ ಅಂತ್ಯಸಂಸ್ಕಾರ ನಡೆಸಲು 11 ವರ್ಷದ ಬಾಲಕಿ ಭಿಕ್ಷಾಟನೆ ಮಾಡಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಪಟ್ಟನದ ತರೋಡ ನಡೆದಿದೆ.

ದುರ್ಗಾ (11) ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಮಾಡಿದ ಮಗು.  ಗಂಗಾಮಣಿ(36) ಮೃತ ದುರ್ದೈವಿ.  ಕೆಲವು ವರ್ಷಗಳಿಂದ ಗಂಡನಿಂದ ದೂರವಾಗಿದ್ದ ಗಂಗಾಮಣಿ. ಒಬ್ಬಳೇ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಕೂಲಿನಾಡಿ ಮಾಡಿಕೊಂಡು ಜೀವನ ನಡೆಸಿದ್ದಳು. ಆದರೆ ಕೆಲ ದಿನಗಳ ಹಿಂದೆಯಷ್ಟೇ ಬಾಲಕಿಯ ತಂದೆ ತೀರಿಕೊಂಡಿದ್ದು, ಶನಿವಾರ ರಾತ್ರಿ ತಾಯಿ ಕೂಡ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಬಾಲಕಿ ದುರ್ಗಾ ತಾಯಿಯ ಅಂತ್ಯಸಂಸ್ಕಾರಕ್ಕೂ ದುಡ್ಡಿಲ್ಲದೆ, ಹೇಳಿಕೊಳ್ಳಲು ಸಂಬಂಧಿಕರು ಇಲ್ಲದೆ ಅನಾಥವಾಗಿ ಬೀದಿಗೆ ಬಿದ್ದಿರುವ ಬಾಲಕಿ.

ಹತ್ಯೆಯಾದ ದಿನ ಕೋಲ್ಕತ್ತಾ ಟ್ರೈನಿ ವೈದ್ಯೆ ಬರೆದ ಕೊನೆಯ ಡೈರಿಯಲ್ಲಿ ಏನಿತ್ತು?

ಬಾಲಕಿಯ ಹತ್ತಿರ ಕನಿಷ್ಠ ತಾಯಿಯ ಅಂತಿಮ ಸಂಸ್ಕಾರಕ್ಕೂ ಹಣವಿಲ್ಲ.  ಹೀಗಾಗಿ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಮನೆ ಮುಂದೆ ಟವೆಲ್ ಹಾಸಿ ಭಿಕ್ಷೆ ಬೇಡಿದ ಬಾಲಕಿ. ಬಾಲಕಿ ದುರ್ಗಾ ಭಿಕ್ಷೆ ಬೇಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಂಬನಿ ಮೀಡಿದಿದ್ದಾರೆ. ಫೋನ್‌ ಪೇ ಮೂಲಕ ಹಣ ಸಂಗ್ರಹಿಸಿ ಸ್ಥಳೀಯರ ನೆರವಿನಿಂದ ಕೊನೆಗೂ ಬಾಲಕಿಯ ತಾಯಿ ಅಂತ್ಯಸಂಸ್ಕಾರ ನಡೆಸಲಾಗಿದೆ.

ವ್ಹೀಲಿಂಗ್ ಮಾಡುತ್ತಿದ್ದ ಪುಂಡನ ಬೈಕ್‌ ಫ್ಲೈಓವರ್ ಮೇಲಿಂದ ಕೆಳಕ್ಕೆ ಎಸೆದ ಸಾರ್ವಜನಿಕರು!

ಘಟನೆ ಮಾಹಿತಿ ತಿಳಿದು ಮಾಜಿ ಸಚಿವ ಕೆಟಿಆರ್ ಬಾಲಕಿಯ ಸಹಾಯಕ್ಕೆ ದಾವಿಸಿದ್ದಾರೆ. ಆ ಬಾಲಕಿಗೆ ಬಿಎಆರ್ ಪಕ್ಷದ ವತಿಯಿಂದ 10 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಸ್ಥಳೀಯ ಮುಖಂಡರು ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಮುಂದಿನ ಜೀವನಕ್ಕೆ ಸಹಾಯ ಮಾಡುವುದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios