Asianet Suvarna News Asianet Suvarna News

ವ್ಹೀಲಿಂಗ್ ಮಾಡುತ್ತಿದ್ದ ಪುಂಡನ ಬೈಕ್‌ ಫ್ಲೈಓವರ್ ಮೇಲಿಂದ ಕೆಳಕ್ಕೆ ಎಸೆದ ಸಾರ್ವಜನಿಕರು!

ನೆಲಮಂಗಲದ ಫ್ಲೈಓವರ್ ಮೇಲೆ ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಹಿಡಿದು ವಾಹನವನ್ನು ಮೇಲಿಂದ ಕೆಳಕ್ಕೆ ಎಸೆದು ಪುಡಿಪುಡಿದ ಸ್ಥಳೀಯರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Public throws bikes who were doing wheeling on Bangalore flyover went viral video rav
Author
First Published Aug 17, 2024, 8:48 PM IST | Last Updated Aug 17, 2024, 8:56 PM IST

ಬೆಂಗಳೂರು (ಆ.17) : ನಗರದಲ್ಲಿ ದಿನೇದಿನೆ ವ್ಹೀಲಿಂಗ್ ಹಾವಳಿ ಹೆಚ್ಚುತ್ತಲೇ ಇದೆ. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದ ಪುಂಡರು ಪ್ರತಿನಿತ್ಯ ಒಂದಿಲ್ಲೊಂದು ನಗರ, ಫ್ಲೈಓವರ್ ಮೇಲೆ ವೀಲಿಂಗ್ ಮಾಡಿ ಸುದ್ದಿಯಾಗುತ್ತಲೇ ಇದ್ದಾರೆ.  ಪುಂಡರ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧರು, ವಾಹನ ಸವಾರು ಪ್ರಾಣ ಕಳೆದುಕೊಂಡ ಘಟನೆ ನಡೆದಿವೆ. ಆದರೂ ವ್ಹೀಲಿಂಗ್ ಮಾಡುವುದು ಬಿಡದ ಪುಂಡರು. ಇದರಿಂದ ಸಾರ್ವಜನಿಕರೇ ರೋಸಿಹೋಗಿದ್ದು.  ಬೆಂಗಳೂರಿನ ಹೊರವಲಯದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.

ಯಾರು ಏನ್ ಮಾಡ್ತಾರೆ ಅಂತಾ ವ್ಹೀಲಿಂಗ್ ಮಾಡುವ ಪುಂಡರೇ ಇನ್ನು ಎಚ್ಚರಿಕೆಯಿಂದ ಇರಿ. ಇನ್ಮುಂದೆ ವ್ಹೀಲಿಂಗ್ ಹುಚ್ಚಾಟ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕರೆ ಪುಡಿಪುಡಿಯಾಗುತ್ತೆ ನಿಮ್ಮ ಬಾಡಿ ಮತ್ತು ಬೈಕ್.  ಇನ್ನೆಷ್ಟು ದಿನ ಪುಂಡರ ಹುಚ್ಚಾಟ ಸಹಿಸಿಕೊಳ್ಳೋದು, ಇನ್ನೆಷ್ಟು ಜೀವಗಳು ಬಲಿಯಾಗಬೇಕು? ರೊಚ್ಚಿಗೆದ್ದ ಸಾರ್ವಜನಿಕರು ವ್ಹೀಲಿಂಗ್ ಮಾಡುತ್ತಿದ್ದವನ ಬೈಕ್‌ ಅನ್ನೇ ಫ್ಲೈಓವರ್ ಮೇಲಿಂದ ಕೆಳಗೆ ಎಸೆದು ನುಜ್ಜುಗುಜ್ಜು ಮಾಡಿದ್ದಾರೆ. ಇನ್ನೊಮ್ಮೆ ವೀಲಿಂಗ್ ಮಾಡಲು ಬೈಕ್‌ ಇಲ್ಲದಂತೆ ಮಾಡು ಸಾರ್ವಜನಿಕರು ಬುದ್ಧಿ ಕಲಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇರಲ್ಲ: ಅಚ್ಚರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಸೋಮಣ್ಣ

ಬೆಂಗಳೂರಿನ ಹೊರವಲಯದ ನೆಲಮಂಗಲದ ಫ್ಲೈಓವರ್ ಮೇಲೆ ವೇಗವಾಗಿ ಬೈಕ್ ಓಡಿಸಿ ಬೈಕ್‌ ವ್ಹೀಲಿಂಗ್ ಮಾಡುತ್ತಿದ್ದ ಪುಂಡ. ಇದರಿಂದ ಅಕ್ಕಪಕ್ಕದ ವಾಹನ ಸವಾರರಿಗೂ ತೊಂದರೆ ಕೊಡುತ್ತಿದ್ದ. ಸ್ವಲ್ಪ ಯಾಮಾರಿದರು ವಾಹನ ಸವಾರರು ಪ್ರಾಣ ಕಳೆದುಕೊಳ್ಳಬೇಕು ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು. ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡನನ್ನು ಹಿಡಿದು ಗೂಸಾ ಕೊಟ್ಟಿದ್ದಾರೆ. ಬಳಿಕ ಫ್ಲೈ ಓವರ್ ಮೇಲಿಂದಲೇ ಪುಂಡನ ಬೈಕ್ ಎತ್ತಿ ಬಿಸಾಕಿದ್ದಾರೆ.

ಫ್ಲೈಓವರ್ ಮೇಲಿಂದ ವಾಹನ ಸವಾರರು ಬೈಕ್ ಎತ್ತಿ ಬಿಸಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

Latest Videos
Follow Us:
Download App:
  • android
  • ios