ನವದೆಹಲಿ(ಜೂ.13): ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಕೊರೋನಾಕ್ಕೆ ಬಲಿಯಾಗುವ ಪ್ರಮಾಣ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ 258 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಇವರೆಗೆ ಬಲಿಯಾದವರ ಸಂಖ್ಯೆ 8743ಕ್ಕೆ ತಲುಪಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 127 ಜನರು ಸಾವನ್ನಪ್ಪಿದ್ದಾರೆ.

ಉಳಿದಂತೆ ಶುಕ್ರವಾರ ದೇಶಾದ್ಯಂತ 9651 ಹೊಸ ಕೇಸು ಪತ್ತೆಯಾಗುವುದರೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 2,98,382ಕ್ಕೆ ತಲುಪಿದೆ. ಇನ್ನು ಒಟ್ಟು ಗುಣಮುಖರಾದವರ ಸಂಖ್ಯೆ 1.52 ಲಕ್ಷಕ್ಕೆ ತಲುಪಿದೆ.

ಸಾವಿನ ಸುನಾಮಿ: ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ ಕೊರೋನಾ ವೈರಸ್‌ನ ರಣಕೇಕೆಗೆ 127 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಈ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3717ಕ್ಕೆ ತಲುಪಿದೆ. ಇನ್ನು ತಮಿಳುನಾಡಿನಲ್ಲಿ 18 (ಒಟ್ಟು 367) ಗುಜರಾತ್‌ನಲ್ಲಿ 31(ಒಟ್ಟು 1416), ಉತ್ತರ ಪ್ರದೇಶ 20(365), ದೆಹಲಿ71(1214), ತಮಿಳುನಾಡು 18(367), ಪಶ್ಚಿಮ ಬಂಗಾಳದಲ್ಲಿ 9(451), ರಾಜಸ್ಥಾನ 4(269), ಮಂದಿ ಕೊರೋನಾ ವ್ಯಾಧಿಯಿಂದ ಸಾವನ್ನಪ್ಪಿದ್ದಾರೆ.