ಪಂಜಾಬ್(ನ.17): ರೈತರ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಪಂಜಾಬ್‌ನಲ್ಲಿ 3 ಕೃಷಿ ಕಾಯ್ದೆ ಜಾರಿಗೆ ತರಲಾಗಿದೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020,  ರೈತ (ಸಬಲೀಕರಣ ಮತ್ತು ಸಂರಕ್ಷಣೆ)  ಬೆಲೆ ಭರವಸೆ , ಕೃಷಿ ಸೇವೆಗಳ ಕಾಯ್ದೆ 2020  ಸರಕುಗಳ (ತಿದ್ದುಪಡಿ) ಕಾಯ್ದೆ 2020 ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಪಂಜಾಬ್‌ನಲ್ಲಿ ಪ್ರಮುಖ ರೈಲು ಸಂಚಾರ ರದ್ದು ಮಾಡಲಾಗಿದೆ.

ಏಕಾಂಗಿ ಸ್ಪರ್ಧೆ: ಬಿಜೆಪಿಯಿಂದ ಮಹತ್ವದ ಘೋಷಣೆ!

ಪ್ರತಿಭಟನಾ ರೈತರು ರೈಲು ಹಳಿ ಮೇಲೆ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ರೈಲು ಹಳಿಯಿಂದ ದೂರ ಸರಿದಿದ್ದರೂ, ಗೂಡ್ಸ್ ರೈಲು ಹೊರತು ಪಡಿಸಿ ಇನ್ಯಾವ ರೈಲು ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ರೈಲು ಸಂಚಾರ ರದ್ದು ಮಾಡಲಾಗಿದೆ.

ಕಳೆದ ವಾರ ಸರ್ಕಾರ ಹಾಗೂ ರೈತರ ನಡುವೆ ನಡೆದ ಪ್ರತಿಭಟನೆ ಫಲಪ್ರದವಾಗಿಲ್ಲ. ಸರ್ಕಾರ ನಿರ್ಧರಿಸಿರುವ ಕೃಷಿ ಮಸೂದೆ ರದ್ದು ಪಡಿಸಬೇಕು. ಇನ್ನು  ಕನಿಷ್ಠ ಬೆಂಬಲ ಬೆಲೆ ಹಾಗೂ ರೈತ  ಸಮಸ್ಯೆಗಳಿಗೆ ಕಾನೂನು ಬೆಂಬಲವನ್ನು ನೀಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿತ್ತು.

ರೈತರ ಪ್ರತಿಭಟನೆ ಕಾರಣ ಹಬ್ಬದ ಪ್ರಯುಕ್ತ ಬಿಟ್ಟಿದ್ದ 27 ವಿಶೇಷ ರೈಲು ಸಂಚಾರ ರದ್ದು ಮಾಡಲಾಗಿದೆ. 30ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು 9 ಎಕ್ಸ್‌ಪ್ರೆಸ್ ರೈಲು ಕೂಡ ರದ್ದು ಮಾಡಲಾಗಿದೆ.