2 ದಿನದಲ್ಲಿ ವಾರಂಗಲ್‌ ಕೊಳವೆ ಬಾವಿಯಲ್ಲಿ 9 ಮೃತದೇಹಗಳ ಪತ್ತೆ!| ಸಾಮೂಹಿಕ ಆತ್ಮಹತ್ಯೆ ಇರಬಹುದೇ ಎಂಬ ಶಂಕೆ| ಮೃತರೆಲ್ಲರೂ ಗೋಣಿ ಚೀಲದ ಬ್ಯಾಗ್‌ ತಯಾರಿಸುವ ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು

ಹೈದರಾಬಾದ್‌(ಮೇ.24): ವಾರಂಗಲ್‌ನಲ್ಲಿರುವ ತೆರೆದ ಕೊಳವೆ ಬಾವಿಯೊಂದರಿಂದ ಎರಡು ದಿನಗಳಲ್ಲಿ 9 ಮೃತದೇಹಗಳು ಪತ್ತೆಯಾಗಿವೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇದು ಸಾಮೂಹಿಕ ಆತ್ಮಹತ್ಯೆ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತರೆಲ್ಲರೂ ಗೋಣಿ ಚೀಲದ ಬ್ಯಾಗ್‌ ತಯಾರಿಸುವ ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಈ ಕೊಳವೆ ಬಾವಿಯಲ್ಲಿ ಗುರುವಾರ 4 ಮತ್ತು ಶುಕ್ರವಾರ ಮತ್ತೆ 5 ಮೃತದೇಹಗಳು ಪತ್ತೆಯಾಗಿವೆ.

Scroll to load tweet…

ಮರಣೋತ್ತರ ಪರೀಕ್ಷೆ ವೇಳೆ ದೇಹದ ಮೇಲೆ ಗಾಯದ ಗುರುತುಗಳು ಅಥವಾ ದೇಹದಲ್ಲಿ ವಿಷದ ಅಂಶವೂ ಪತ್ತೆಯಾಗಿಲ್ಲ. ಹೀಗಾಗಿ, ಇದೊಂದು ಸಾಮೂಹಿಕ ಆತ್ಮಹತ್ಯೆ ಅಥವಾ ಕೊಲೆ ಇರಬಹುದು ಎಂಬ ವದಂತಿಗಳು ಹರದಾಡುತ್ತಿವೆ.