Asianet Suvarna News Asianet Suvarna News

ನಿಷೇಧಿತ ಪಿಎಫ್‌ಐ ಜೊತೆಗೆ ನಂಟು: ಮಾಧ್ಯಮ ವರದಿ ತಳ್ಳಿಹಾಕಿದ ಕೇರಳ ಪೊಲೀಸರು

ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡಿದ ಕಾರಣಕ್ಕಾಗಿ ಇತ್ತೀಚೆಗೆ ನಿಷೇಧಕ್ಕೆ ಒಳಪಟ್ಟ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಜೊತೆಗೆ ಕೇರಳದ 873 ಪೊಲೀಸ್‌ ಸಿಬ್ಬಂದಿಗೆ ನಂಟಿದೆ ಎಂಬ ಮಾಧ್ಯಮ ವರದಿಯನ್ನು ಕೇರಳ ಪೊಲೀಸರು ತಳ್ಳಿ ಹಾಕಿದ್ದಾರೆ. 

873 Kerala police linked with banned PFI, kerala police rejected media report akb
Author
First Published Oct 6, 2022, 7:34 AM IST

ತಿರುವನಂತಪುರ: ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡಿದ ಕಾರಣಕ್ಕಾಗಿ ಇತ್ತೀಚೆಗೆ ನಿಷೇಧಕ್ಕೆ ಒಳಪಟ್ಟ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಜೊತೆಗೆ ಕೇರಳದ 873 ಪೊಲೀಸ್‌ ಸಿಬ್ಬಂದಿಗೆ ನಂಟಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಮಾಹಿತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಆದರೆ ಮಾಧ್ಯಮಗಳ ವರದಿಯನ್ನು ಕೇರಳ ಪೊಲೀಸರು ತಳ್ಳಿಹಾಕಿದ್ದಾರೆ.

ವಿಶೇಷ ಶಾಖೆ, ಗುಪ್ತಚರ (intelligence), ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳಿಗೆ (law and order departments) ಸೇರಿದ ಪೊಲೀಸ್‌ ಸಿಬ್ಬಂದಿ, ಉನ್ನತ ಪೊಲೀಸ್‌ ಅಧಿಕಾರಿಗಳ ಕಚೇರಿಯ ಕೆಲಸಗಾರರು ಪಿಎಫ್‌ಐ ಜೊತೆ ನಂಟು ಹೊಂದಿದ್ದಾರೆ. ಇವರಲ್ಲಿ ಎಸ್‌ಐ(SI) ಎಸ್‌ಎಚ್‌ಒ(SHO) ಮತ್ತು ಇತರೆ ದರ್ಜೆ ಅಧಿಕಾರಿಗಳು ಸೇರಿದ್ದಾರೆ. ಹೀಗಾಗಿ ಇವರ ಹಣಕಾಸಿನ ವಹಿವಾಟಿನ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ (NIA) ತನ್ನ ಮಾಹಿತಿಯಲ್ಲಿ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ (Media Report) ಮಾಡಿವೆ.

PFI Twitter Accounts Taken Down: ಪಿಎಫ್‌ಐ, ಸಿಎಫ್‌ಐ ನಾಯಕರ ಖಾತೆಗೆ ಟ್ವಿಟರ್‌ ಬೇಲಿ!

ಮಾಹಿತಿ ಸೋರಿಕೆ:

ಹೀಗೆ ಪಿಎಫ್‌ಐ ನಂಟು ಹೊಂದಿರುವ ಪೊಲೀಸರು, ‘ಪಿಎಫ್‌ಐ ಕುರಿತು ಪೊಲೀಸರು ಸಂಗ್ರಹಿಸುವ ಮಾಹಿತಿ ಮತ್ತು ರಾಜ್ಯ ಪೊಲೀಸರ ಮುಂದಿನ ನಡೆಗಳು ಮೊದಲಾದವುಗಳ ಬಗ್ಗೆ ಪಿಎಫ್‌ಐ ನಾಯಕರಿಗೆ ಮಾಹಿತಿ ಸೋರಿಕೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಫೆಬ್ರುವರಿಯಲ್ಲಿ ಕರಿಮನ್ನೂರು ಠಾಣೆಯ ಪೇದೆಯೊಬ್ಬರನ್ನು, ಆರ್‌ಎಸ್‌ಎಸ್‌ ನಾಯಕರ ಕುರಿತ ಮಾಹಿತಿಯನ್ನು ಪಿಎಫ್‌ಐಗೆ ರವಾನಿಸಿದ ಕಾರಣಕ್ಕಾಗಿ ಅಮಾನತು ಮಾಡಲಾಗಿತ್ತು ಎಂಬ ವಿಷಯ ಈ ವರದಿಯ ಅಂಶಗಳನ್ನು ದೃಢೀಕರಿಸಿದೆ.

PFI Ban ವಿರುದ್ಧ ಸುಪ್ರೀಂ ಕೋರ್ಟ್‌ಗೆ: ಸಿಎಫ್‌ಐ, ತಮಿಳುನಾಡು ಪಿಎಫ್‌ಐ ಮುಖ್ಯಸ್ಥ ಘೋಷಣೆ

ಪಿಎಫ್‌ಐ ನಿಷೇಧಕ್ಕೂ (PFI Ban) ಪೂರ್ವದಲ್ಲಿ ಎನ್‌ಐಎ (ಒಂದೇ ವಾರದಲ್ಲಿ 15 ರಾಜ್ಯಗಳಲ್ಲಿ ಒಟ್ಟು 93 ಕರೆ ದಾಳಿ ನಡೆಸಿ 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರು ಹಾಗೂ ನಾಯಕರನ್ನು ಬಂಧಿಸಿತ್ತು. ಇದಾದ ಬೆನ್ನಲ್ಲೇ 873 ಕೇರಳ ಪೊಲೀಸರು ಪಿಎಫ್‌ಐ ನಂಟು ಹೊಂದಿದ್ದಾರೆ ಎಂದು ಹಲವಾರು ಮಾಧ್ಯಮಗಳು ಪ್ರಕಟಿಸಿದ್ದವು.
 

Follow Us:
Download App:
  • android
  • ios