ಯುಪಿಎ 9 ವರ್ಷದ ಅವಧಿಯಲ್ಲಿ 84, ಮೋದಿ 10 ವರ್ಷದ ಅವಧಿಯಲ್ಲಿ 7264 ಇ.ಡಿ. ದಾಳಿ!
ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧಗಳು ಕಳೆದ 10 ವರ್ಷದಲ್ಲಿ 86 ಪಟ್ಟು ಹೆಚ್ಚಿವೆ ಹಾಗೂ ಬಂಧನ ಮತ್ತು ಆಸ್ತಿ ಜಪ್ತಿ ಪ್ರಮಾಣ 25 ಪಟ್ಟು ಹೆಚ್ಚಿದೆ.
ನವದೆಹಲಿ (ಏ.18): ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧಗಳು ಕಳೆದ 10 ವರ್ಷದಲ್ಲಿ 86 ಪಟ್ಟು ಹೆಚ್ಚಿವೆ ಹಾಗೂ ಬಂಧನ ಮತ್ತು ಆಸ್ತಿ ಜಪ್ತಿ ಪ್ರಮಾಣ 25 ಪಟ್ಟು ಹೆಚ್ಚಿದೆ. 2014ಕ್ಕಿಂತ ಹಿಂದಿನ 9 ವರ್ಷಗಳ ಶೋಧ, ಬಂಧನ ಹಾಗೂ ಜಪ್ತಿಗೆ ಹೋಲಿಸಿದರೆ ಈ ಅಂಕಿ ಅಂಶಗಳು ಕಂಡುಬಂದಿವೆ. 2014ರ ನಂತರದ 10 ವರ್ಷದ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದಕ್ಕಿಂತ ಹಿಂದಿನ 10 ವರ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವದಲ್ಲಿತ್ತು. ಹೀಗಾಗಿ ಮೋದಿ ಸರ್ಕಾರದ ಅವಧಿಯಲ್ಲಿ ಇ.ಡಿ. ದಾಳಿಗಳು 86 ಪಟ್ಟು ಹೆಚ್ಚಿವೆ.
ಬಂಧನ/ಜಪ್ತಿ ಪ್ರಮಾಣ 25 ಪಟ್ಟು ಹೆಚ್ಚಿದೆ ಎಂದು ಹೇಳಬಹುದಾಗಿದೆ. ಮೋದಿ ಸರ್ಕಾರವು ಇ.ಡಿ., ಐಟಿ, ಸಿಬಿಐಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪದ ನಡುವೆ ಈ ಅಂಕಿ-ಅಂಶ ಲಭ್ಯವಾಗಿದೆ. ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಕಾಯ್ದೆ ಅಡಿ ಇ.ಡಿ. ಕಾರ್ಯಾಚರಣೆ ನಡೆಸುತ್ತದೆ. ಕಾಯ್ದೆ ಜಾರಿಗೆ ಬಂದಿದ್ದು 2005ರ ಜುಲೈ 1ರಂದು. ತೆರಿಗೆ ವಂಚನೆ, ಕಪ್ಪು ಹಣದ ಉತ್ಪಾದನೆ ಮತ್ತು ಮನಿ ಲಾಂಡರಿಂಗ್‌ನ ಗಂಭೀರ ಅಪರಾಧಗಳನ್ನು ಪರಿಶೀಲಿಸಲು ಈ ಕಾಯ್ದೆ ಸಹಾಯ ಮಾಡುತ್ತದೆ.
ಮತಗಟ್ಟೆಯಲ್ಲಿ ಮತದಾರರ ಸೇವಾ ಕೇಂದ್ರ ಸ್ಥಾಪನೆ: ತುಷಾರ್ ಗಿರಿನಾಥ್
10 ವರ್ಷಗಳ ಹೋಲಿಕೆ: ಕಳೆದ 10 ವರ್ಷಗಳಲ್ಲಿ 5,155 ಪಿಎಂಎಲ್‌ಎ ಪ್ರಕರಣ ದಾಖಲಾಗಿದ್ದರೆ, 2005-14ರ ನಡುವೆ ಪಿಎಂಎಲ್‌ಎ ಅಡಿ ದಾಖಲಾದ ಒಟ್ಟು ದೂರು 1,797 ಮಾತ್ರ. ಇನ್ನು ಪಿಎಂಎಲ್‌ಎ ಅಡಿ 2014ಕ್ಕಿಂತ ಮುನ್ನ ಯಾವುದೇ ಶಿಕ್ಷೆ ಆಗಿರಲಿಲ್ಲ. 2014ರಲ್ಲಿ ಮೊದಲ ಶಿಕ್ಷೆ ಆಯಿತು. ಈವರೆಗೆ 63 ಶಿಕ್ಷೆಗಳು ಆಗಿವೆ. 2014-2024ರ ಅವಧಿಯಲ್ಲಿ ದೇಶಾದ್ಯಂತ ಹಣ ವರ್ಗಾವಣೆ ಪ್ರಕರಣಗಳಲ್ಲಿ 7,264 ದಾಳಿ/ಶೋಧಗಳನ್ನು ಇ.ಡಿ. ನಡೆಸಿದೆ. ಇದರ ಸಂಖ್ಯೆ 2005ರಿಂದ 2014ರವರೆಗೆ ಕೇವಲ 84 ಆಗಿತ್ತು. ಹೀಗಾಗಿ ದಾಳಿ ಪ್ರಮಾಣ 86 ಪಟ್ಟು ಜಿಗಿತವಾದಂತಾಗಿದೆ. ಅದೇ ರೀತಿ 2005ರಿಂದ 9 ವರ್ಷ ಅವಧಿಯಲ್ಲಿ 29 ಜನರನ್ನು ಇ.ಡಿ. ಬಂಧಿಸಿ 5,086.43 ಕೋಟಿ ಮೌಲ್ಯದ ಸೊತ್ತು ಜಪ್ತಿ ಮಾಡಿತ್ತು.
ಆದರೆ 2014ರಿಂದ 24ರವರೆಗೆ ಇ.ಎಇ. ಒಟ್ಟು 755 ಜನರನ್ನು ಬಂಧಿಸಿದೆ ಹಾಗೂ 1,21,618 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಇದರಿಂದಾಗಿ ಬಂಧನಗಳು 26 ಪಟ್ಟು ಹೆಚ್ಚು ಆದರೆ, ಆಸ್ತಿ ಲಗತ್ತು 24 ಪಟ್ಟು ಹೆಚ್ಚಿದಂತಾಗಿದೆ. ಚಾರ್ಜ್ ಶೀಟ್‌ಗಳ ಸಲ್ಲಿಕೆಯು ಕಳೆದ ದಶಕದಲ್ಲಿ 12 ಪಟ್ಟು ಜಿಗಿತವನ್ನು ಕಂಡಿದೆ. 2014-24ರ ಅವಧಿಯಲ್ಲಿ ಭಾರತವನ್ನು ತೊರೆದು ವಿದೇಶಿ ತೀರಗಳಲ್ಲಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳಿಗೆ ಇ.ಡಿ. ಮುಖಾಂತರ 24 ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿ ಆಗಿವೆ. ಹಿಂದಿನ ಅವಧಿಯಲ್ಲಿ ಸಂಸ್ಥೆಯು ಅಂತಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಗ್ಯಾರಂಟಿ ಯೋಜನೆಗಳಿಂದ ಬಡವರು ಸಂಭ್ರಮದಿಂದ ಹಬ್ಬ ಮಾಡುತ್ತಿದ್ದಾರೆ: ಎಚ್.ಕೆ.ಪಾಟೀಲ್
ಇ.ಡಿ. ದಾಳಿಗಳ ವಿವರ
ವಿಷಯ ಯುಪಿಎ ಎನ್‌ಡಿಎ
ಕೇಸ್ ದಾಖಲು 1797 5155
ಬಂಧನ 29 755
ಆಸ್ತಿ ಜಪ್ತಿ 5086 ಕೋಟಿ 121618 ಕೋಟಿ
ಶಿಕ್ಷೆ 0 63