ರಿಷಿಕೇಶ್(ಜ.29): ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು, ಜನಸಾಮಾನ್ಯರು ತಮ್ಮ ಕೈಲಾದ ಹಣವನ್ನು ರಾಮ ಮಂದಿರಕ್ಕೆ ದೇಣಿಕೆಯಾಗಿ ನೀಡುತ್ತಿದ್ದಾರೆ. ಇದೀಗ ರಿಷಿಕೇಶದಲ್ಲಿನ ಸಂತ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್ ಗಂಭೀರ್!.

ಉತ್ತರಖಂಡದ ರಿಷಿಕೇಶದಲ್ಲಿರುವ ಗುಹೆಯಲ್ಲೇ ವಾಸ ಸ್ಥಾನ ಮಾಡಿರುವ ಸಂತ ಸ್ವಾಮಿ ಶಂಕರ್ ದಾಸ್, ಕಳೆದ 50 ವರ್ಷದಿಂದ ಇದೇ ಗುಹೆಯಲ್ಲಿ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ತಾವು ಅಂದಿನಿಂದ ಕೂಡಿಟ್ಟ ಹಣವನ್ನೀಗ ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದೇನೆ ಎಂದು ಸ್ವಾಮಿ ಶಂಕರ್ ದಾಸ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!.

ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ಜನವರಿ 14 ರಿಂದ ದೇಣಿಗೆ ಸಂಗ್ರಹ ಆರಂಭಗೊಂಡಿದೆ. ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಕಾರ್ಯಕರ್ತರು ದೇಶದ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಆರಂಭಿಕ ಮೂರೇ ದಿನದಲ್ಲಿ ದೇಣಿಗೆ ಹಣ 100 ಕೋಟಿ ರೂಪಾಯಿ ದಾಟಿತ್ತು. ಫೆಬ್ರವರಿ ಅಂತಿಮ ವಾರದ ವರೆಗೆ ದೇಣಿಗೆ ಸಂಗ್ರಹ ನಡೆಯಲಿದೆ.