ನವದೆಹಲಿ(ಜು.  22)  ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿ ಒಂದು ಐತಿಹಾಸಿಕ ಕಾನೂನಾಗಿತ್ತು. ಮುಸ್ಲಿಂ ಮಹಿಳೆಯರ ಹಿತ ಕಾಪಾಡುವ ಕಾನೂನು ಜಾರಿ ನಂತರ ಏನಾಗಿದೆ ಎಂಬುದನ್ನು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಬಿಚ್ಚಿಟ್ಟಿದ್ದಾರೆ. 

ಕಾನೂನು ಜಾರಿ ನಂತರ ತಲಾಖ್ ನೀಡುವ ವಿಚಾರದಲ್ಲಿ ಶೇ.  82 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದ್ದು ಕಾನೂನು ಜಾರಿಯಾದ ಆಗಸ್ಟ್ 1 ನ್ನು ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೋದಿ ಒಂದು ವರ್ಷದ ಸಾಧನೆಗಳ ನೋಟ ನಿಮ್ಮ ಮುಂದೆ

ಕಳೆದ ವರ್ಷ ಆಗಸ್ಟ್ 1  ರಂದು ಐತಿಹಾಸಿಕ ಕಾನೂನು ಜಾರಿಯಾಗಿತ್ತು. ಜಾತ್ಯತೀತ ಶಕ್ತಿ ಅಂದರೆ ತಾವು ಎಂದು ಕರೆಸಿಕೊಳ್ಳುವ ಕಾಂಗ್ರೆಸ್, ಬಹುಜನ್ ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್  ಈ ಕಾನೂನನ್ನು ವಿರೋಧಿಸಿತ್ತು ಎಂದು ಸಚಿವರು ಹೇಳಿದ್ದಾರೆ.

ಈ ಕಾನೂನು ಜಾರಿಯಾದ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಲಾಗಿದೆ. ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯಲ್ಲಿ ಸಕಲಿರಿಗೆ ಒಂದೇ ನ್ಯಾಯ ಕಲ್ಪಿಸಿಕೊಟ್ಟ ಕಾನೂನು ಎಂದು ಕೇಂದ್ರ ಸಚಿವರು ವಿಶ್ಲೇಷಣೆ ಮಾಡಿದ್ದಾರೆ.

ರಾಜೀವ್ ಗಾಂಧಿ ಕಾಲದಲ್ಲಿ ಕಾಂಗ್ರೆಸ್   ಸಂಸತ್ ಉಭಯ ಸದನದಲ್ಲಿಯೂ ಬಹುಮತ ಪಡೆದುಕೊಂಡಿತ್ತು ಆವೇಳೆಯೇ ತಿದ್ದುಪಡಿ ಮಾಡುವ ಕೆಲಸ ಮಾಡಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಇಂಥ ಒಂದು ಕಾನೂನು ಬರು  70 ವರ್ಷಗಳೆ ಬೇಕಾದವು ಎಂದು ಅಬ್ಬಾಸ್ ಕಾನೂನು ರೂಪುಗೊಂಡ ಬಗೆಯನ್ನು ವಿವರಿಸಿದರು. 

ಆಂಗ್ಲ ಮಾಧ್ಯಮದಲ್ಲಿಯೂ ಓದಿ