ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಬಲಕಿ ರಾತ್ರಿ ಮೊಬೈಲ್ ನೋಡುತ್ತಿದ್ದಾಗಲೇ ಸ್ಫೋಟ ಸಂಭಿಸಿ ಬಾಲಕಿಯ ಮುಖಕ್ಕೆ ಬಡಿದು ಬಾಲಕಿ ಸಾವನ್ನಪ್ಪಿದ್ದಾಳೆ.

ತ್ರಿಶೂರ್: ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಬಲಕಿ ರಾತ್ರಿ ಮೊಬೈಲ್ ನೋಡುತ್ತಿದ್ದಾಗಲೇ ಸ್ಫೋಟ ಸಂಭಿಸಿ ಬಾಲಕಿಯ ಮುಖಕ್ಕೆ ಬಡಿದು ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಈಕೆ ತಿರುವಿಲ್ವಮಲ ನಿವಾಸಿಯಾಗಿದ್ದು, 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ರಾತ್ರಿ 10.30ರ ವೇಳೆ ಮಲಗುವ ಸಮಯದಲ್ಲಿ ಈಕೆ ಪೋಷಕರ ಮೊಬೈಲ್ ಬಳಸುತ್ತಿದ್ದು ಈ ವೇಳೆ ದಿಢೀರನೇ ಮೊಬೈಲ್ ಸ್ಫೋಟಗೊಂಡಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ. 

ಬಾಲಕಿ ಆದಿತ್ಯಶ್ರೀ ತಿರುವಿಲ್ವಮಲ್‌ನ ನ್ಯೂ ಕ್ರೈಸ್ಟ್‌ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಪ್ರಸ್ತುತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ್‌ನ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಬಹಳ ಹೊತ್ತಿನಿಂದ ವೀಡಿಯೋ ವೀಕ್ಷಿಸುತ್ತಿದ್ದು, ಇದರಿಂದ ಬ್ಯಾಟರಿ ಓವರ್ ಹೀಟ್ ಆಗಿ ಈ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿ ಆದಿತ್ಯಶ್ರೀ ಪಜ್ಜನೂರು ಪಂಚಾಯತ್‌ನ ಮಾಜಿ ಸದಸ್ಯ ಅಶೋಕ್ ಹಾಗೂ ಸೌಮ್ಯ ದಂಪತಿಯ ಪುತ್ರಿಯಾಗಿದ್ದಾಳೆ. ವಿಧಿ ವಿಜ್ಞಾನ ಪ್ರಯೋಗದ ಬಳಿಕವಷ್ಟೇ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ : ಯುವಕನಿಗೆ ಗಂಭೀರ ಗಾಯ