ನಾನ್‌ವೆಜ್ ಆಹಾರ ಕೊಡಿ: ಕಾನ್ಪುರ ಆಸ್ಪತ್ರೆಯಲ್ಲಿ ತಬ್ಲೀಘಿ ದಾಂಧಲೆ!
ತಬ್ಲೀಘಿ ಜಮಾತ್‌ನಲ್ಲಿ ಪಾಗ್ಲೊಂಡು ಕೊರೋನಾ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವರ್ತನೆ ಮಿತಿ ಮೀರಿದೆ. ಈ ಹಿಂದೆ ವೈದ್ಯರ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿ, ಉಗಿದದಿದ್ದ ತಬ್ಲೀಘಿ ಸದಸ್ಯರು ಈಗ ನಾನ್‌ವೆಜ್ ಆಹಾರಕ್ಕಾಗಿ ಕಾನ್ಪುರ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.
ನಾನ್‌ವೆಜ್ ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಕಾನ್ಪುರದ ಆಸ್ಪತ್ರೆಯಲ್ಲಿ ತಬ್ಲೀಘಿಗಳು ದಾಂಧಲೆ ನಡೆಸಿದ ಘಟನೆ ನಡೆದಿದೆ
ಈ ವೇಳೆ ಆಸ್ಪತ್ರೆ ಸಿಬ್ಬಂದಿ ನೀಡಿದ ಪೌಷ್ಟಿಕಾಂಶಯುಕ್ತ ಆಹಾರವನ್ನು ಎಸೆದು, ವಾರ್ಡ್ ಬಾಯ್‌ಗೆ ಅಟ್ಟಾಡಿಸಿ ಥಳಿಸಲಾಗಿದೆ.
70 ತಬ್ಲೀಘಿಗಳಿಗೆ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆ ಪೈಕಿ 15 ಮಂದಿ ತಮಗೆ ನಾನ್‌ವೆಜ್ ಆಹಾರ ಬೇಕು ಎಂದು ಪಟ್ಟು ಹಿಡಿದು ಗಲಾಟೆ ಎಬ್ಬಿಸಿದ್ದಾರೆ.
ಆಹಾರ ನೀಡಲು ಹೋದ ವಾರ್ಡ್ ಬಾಯ್‌ಗೆ ಅಡ್ಡಾಡಿಸಿ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಆಹಾರ ವಿತರಿಸಲು ನಿರ್ಧರಿಸಲಾಗಿದೆ.
ಈ ಹಿಂದೆಯೂ ತಬ್ಲೀಘಿ ಜಾಮತ್‌ನಲ್ಲಿ ಪಾಲ್ಗೊಂಡು ಕ್ವಾರಂಟೈನ್ ಮಾಡಲಾದ ಸದಸ್ಯರು ವೈದ್ಯರು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿ, ಕಲ್ಲೆಸೆದಿದ್ದ ಹಾಗೂ ಉಗಿದಿದ್ದ ಪ್ರಕರಣ ನಡೆದಿತ್ತು.