ಕೇರಳದಲ್ಲಿ ಭಾನುವಾರ ನಿಪಾ ವೈರಸ್‌ಗೆ ಬಲಿಯಾದ 12 ವರ್ಷದ ಬಾಲಕ ಸಂಪರ್ಕಕ್ಕೆ ಬಂದಿದ್ದವರ ಪೈಕಿ ಯಾರಲ್ಲೂ ನಿಪಾ ವೈರಸ್‌ ಪತ್ತೆಯಾಗಿಲ್ಲ 

ಕಲ್ಲಿಕೋಟೆ (ಸೆ.08): ಕೇರಳದಲ್ಲಿ ಭಾನುವಾರ ನಿಪಾ ವೈರಸ್‌ಗೆ ಬಲಿಯಾದ 12 ವರ್ಷದ ಬಾಲಕನ ಸಂಪರ್ಕಕ್ಕೆ ಬಂದಿದ್ದವರ ಪೈಕಿ ಯಾರಲ್ಲೂ ನಿಪಾ ವೈರಸ್‌ ಪತ್ತೆಯಾಗಿಲ್ಲ ಎಂಬುದು ದೃಢಪಟ್ಟಿದೆ. 

ಬಾಲಕನ ಸಂಪರ್ಕಕ್ಕೆ ಬಂದಿದ್ದ 8 ಮಂದಿಯ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವರ ವರದಿಗಳು ನೆಗೆಟಿವ್‌ ಆಗಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾಜ್‌ರ್‍ ಮಂಗಳವಾರ ಹೇಳಿದ್ದಾರೆ. ಅಲ್ಲದೆ ನಿಪಾ ವೈರಸ್‌ಗೆ ತುತ್ತಾಗಿರುವ 48 ಮಂದಿಯನ್ನು ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಕೇರಳ ನಿಪಾ ವೈರಸ್‌ ಬಗ್ಗೆ ಕರ್ನಾಟಕ ಕಟ್ಟೆಚ್ಚರ

ಇದೇ ವೇಳೆ ರಾಜ್ಯದಲ್ಲಿ ನಿಪಾ ಹರಡದಂತೆ ಮತ್ತು ನಿಪಾಕ್ಕೆ ತುತ್ತಾದವರ ಚಿಕಿತ್ಸೆಗೆ ಸಂಬಂಧಿಸಿದಂತೆ ಕಟ್ಟೆಚ್ಚರ ವಹಿಸುವಂತೆ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಏನೆಲ್ಲಾ ಸೂಚನೆಗಳು?

1. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಹೆಚ್ಚು ನಿಗಾ.

2. ಸಕ್ರಿಯ ನಿಪಾ ಕೇಸ್‌ ಪತ್ತೆ ಮಾಡಿ.

3. ಸೋಂಕಿತರಿಗೆ ಸೂಕ್ತ ಔಷಧ ಪೂರೈಸಿ

4. ರಾಜ್ಯಾದ್ಯಂತ ಸೂಕ್ತ ತಪಾಸಣಾ ವ್ಯವಸ್ಥೆ ಕೈಗೊಳ್ಳಿ

5. ನಿಪಾ ಪೀಡಿತ ನೆರೆಹೊರೆ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಿ

6. ಜಿಲ್ಲೆಯಲ್ಲಿ 24 ಗಂಟೆಗಳ ಕಾಲ ಆಸ್ಪತ್ರೆ ಕೊಠಡಿ ತೆರೆದಿಡಿ

7. ಸಮುದಾಯ ಸುತ್ತಮುತ್ತ ಸರ್ವೆಲೆನ್ಸ್‌ ಹೆಚ್ಚಳಕ್ಕೆ ಆದೇಶ