ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರಾ ಜಿಲ್ಲೆಯ ಜವಾಹರನಗರ ಪ್ರದೇಶದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿ, 7 ಮಂದಿ ಗಾಯಗೊಂಡ ಭೀಕರ ಘಟನೆ ನಡೆದಿದೆ. 

ಭಂಡಾರ (ಮಹಾರಾಷ್ಟ್ರ) (ಜ.25): ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರಾ ಜಿಲ್ಲೆಯ ಜವಾಹರನಗರ ಪ್ರದೇಶದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿ, 7 ಮಂದಿ ಗಾಯಗೊಂಡ ಭೀಕರ ಘಟನೆ ನಡೆದಿದೆ. ಮೊದಲು ಸ್ಫೋಟ ಸಂಭವಿಸಿದೆ ಹಾಗೂ ನಂತರ ಘಟಕದ ಮೇಲ್ಛಾವಣಿ ಕುಸಿದಿದೆ. ಇದರಿಂದ ಸಾವು ನೋವು ಹೆಚ್ಚಿದೆ. ಘಟನಾ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಂಡಾರದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಆರಂಭಿಕ ವರದಿಯಂತೆ 8 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಆಘಾತ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?: ‘ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಘಟನೆ ವೇಳೆ ಕಾರ್ಖಾನೆಯಲ್ಲಿ 13ರಿಂದ 14 ಮಂದಿ ಕೆಲಸ ಮಾಡುತ್ತಿದ್ದರು. ಅಗ್ನಿಶಾಮಕ ದಳ ಬೆಂಕಿ ನಂದನ ಆರಂಭಿಸಿದಾಗ ಛಾವಣಿ ಕೂಡ ಕುಸಿಯಿತು. ಈ ವೇಳೆ 8 ಜನರನ್ನು ಹೊರತುಪಡಿಸಿ ಉಳಿದವರನ್ನು ರಕ್ಷಿಸಲಾಯಿತು’ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ತಿಳಿಸಿದ್ದಾರೆ.

ದಾಳಿಕೋರನನ್ನು ಹಿಡಿದೆ, ಆದರೆ ಇರಿದು ಓಡಿದ: ಪೊಲೀಸರಿಗೆ ನಟ ಸೈಫ್‌ ಹೇಳಿಕೆ

ಲೌಡ್‌ಸ್ಪೀಕರ್‌ ಯಾವುದೇ ಧರ್ಮಕ್ಕೂ ಅವಶ್ಯಕವಲ್ಲ: ‘ಧ್ವನಿವರ್ಧಕಗಳು ಯಾವುದೇ ಧರ್ಮದ ಅಗತ್ಯವಾದುದ್ದಲ್ಲ. ಅವು ಧರ್ಮಕ್ಕೆ ಅವಶ್ಯಕವಾದವೂ ಅಲ್ಲ’ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಮುಂಬೈನಲ್ಲಿ ಮಸೀದಿ ಮತ್ತು ಮದರಸಾಗಳು ಧ್ವನಿವರ್ಧಕಗಳನ್ನು ಬಳಸುತ್ತಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳದ ಬಗ್ಗೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ಧ್ವನಿವರ್ಧಕಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವಂತದ್ದು. 

ಅವುಗಳನ್ನು ನಿಷೇಧ ಮಾಡಿದರೆ ಅದು ಧರ್ಮದ ಹಕ್ಕು ಮತ್ತು ಆಚರಣೆಯ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತಾಗುವುದಿಲ್ಲ. ಇಂಥಹ ದೂರುಗಳು ಬಂದಲ್ಲಿ ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ತಮ್ಮ ಮೊಬೈಲ್‌ನಲ್ಲಿ ಶಬ್ದದ ಪ್ರಮಾಣ ಅಳೆವ ಅಪ್ಲಿಕೇಶನ್‌ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿತು. ಜೊತೆಗೆ ಈಗಾಗಲೇ ಧ್ವನಿವರ್ಧಕಗಳಿಗೆ ಹಗಲಿಗೆ 55 ಡೆಸಿಬಲ್‌ ರಾತ್ರಿ ವೇಳೆ 45 ಡೆಸಿಬಲ್‌ ಮಿತಿಯನ್ನು ಸುಪ್ರೀಂ ಕೋರ್ಟ್‌ ವಿಧಿಸಿದೆ. ಇದನ್ನು ಎಲ್ಲಾ ಧಾರ್ಮಿಕ ಕೇಂದ್ರಗಳು ಪಾಲಿಸಬೇಕು ಮತ್ತು ರಾಜ್ಯ ಸರ್ಕಾರ ಇಂಥಹ ಕಾನೂನು ಬಾಹೀರ ಧ್ವನಿವರ್ಧಕ ಅಳವಡಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಿತು.