Asianet Suvarna News Asianet Suvarna News

ವಿದೇಶದಿಂದ ಬಂತು 790 ಟನ್ ಈರುಳ್ಳಿ : ಬೆಲೆ ಇಳಿಕೆ ಸಂಭವ

ಗ್ರಾಹಕರಿಗೆ ಸಿಹಿಸುದ್ಧಿ! ಭಾರತ ವಿದೇಶದಿಂದ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಜನವರಿ ನಂತರ ಈರುಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.  

790 tonnes of imported onions reaches India however prices relief after January only
Author
Bengaluru, First Published Dec 24, 2019, 10:55 AM IST

ನವದೆಹಲಿ (ಡಿ. 24): ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ 790 ಟನ್ ಈರುಳ್ಳಿ ಆಮದು ಮಾಡಿಕೊಂಡಿದೆ. ಬೇಡಿಕೆಯನುಸಾರ ಅದನ್ನು ದೆಹಲಿ ಹಾಗೂ ಆಂಧ್ರ ಪ್ರದೇಶಕ್ಕೆ ಕಳುಹಿಸಿಕೊಟ್ಟಿದೆ. 

290 ಟನ್ ಹಾಗೂ 500 ಟನ್ ತೂಕದ ಪ್ರತ್ಯೇಕ ಸರಕು ಮುಂಬೈಗೆ ಬಂದಿದ್ದು, ಇದರ ಬೆಲೆ ಕೇಜಿಗೆ 57-60 ರು. ಇದೆ. ಮಾಸಾಂತ್ಯಕ್ಕೆ ಇನ್ನೂ 12 ಸಾವಿರ ಟನ್ ಈರುಳ್ಳಿ ದೇಶಕ್ಕೆ ಬರಲಿದೆ. ಹೀಗಾಗಿ ಈರುಳ್ಳಿ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಒಟ್ಟು 49500 ಟನ್ ಈರುಳ್ಳಿ ಆಮದಿಗಾಗಿ ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಗುತ್ತಿಗೆ ನೀಡಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಲವೆಡೆ 160 ರು. ವರೆಗೆ ಬಿಕರಿಯಾಗುತ್ತಿದೆ.

ಉಳ್ಳಾಗಡ್ಡಿ ದರ ಏರಿದ್ದೇ ತಡ ಕಾರ್ಮಿಕರ ಸಂಬಳವೂ ಹೆಚ್ಚಳ!

ಈರುಳ್ಳಿ ಬೆಲೆ 100 ರೂ ದಾಟಿ ಜನಸಾಮಾನ್ಯರು ಕೊಳ್ಳಲು ಪರದಾಡುವಂತಾಗಿತ್ತು. ಈರುಳ್ಳಿ ಬೆಲೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ನಾನು ಈರುಳ್ಳಿ ಬೆಳ್ಳುಳ್ಳಿ ತಿನ್ನಲ್ಲ. ನನಗೆ ಗೊತ್ತಿಲ್ಲ' ಎಂದಿದ್ದು ಭಾರೀ ಚರ್ಚೆಗೊಳಗಾಗಿತ್ತು. 

ಎರಡು ತಿಂಗಳ ಹಿಂದೆ 20 ರಿಂದ 30ಕ್ಕೆ ಪ್ರತಿ ಕೆಜಿ ಸಿಗುತಿದ್ದ ಈರುಳ್ಳಿ, ಸದ್ಯ 60-100ಕ್ಕೆ ಒಂದು ಕೆಜಿ ಮಾರಾಟ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈರುಳ್ಳಿ ಸೇರಿದಂತೆ ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಮಳೆ, ಪ್ರವಾಹ ಹಿನ್ನೆಲೆ ಬೆಳೆಯಲಾದ ಈರುಳ್ಳಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬೇರೆ ರಾಜ್ಯಗಳ ಮೇಲೆ ಅವಲಂಬನೆಯಾಗಿರುವುದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಆದರೆ, ರೈತರು ಮುಂದಿನ ದಿನಗಳ ಲೆಕ್ಕವಿಟ್ಟುಕೊಂಡು ಈರುಳ್ಳಿ ಬೆಳೆಯುತ್ತಿದ್ದಾರೆ.ಆದರೆ, ಇದಕ್ಕೆ ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಇದರು ರೈತನ್ನು ಕಂಗಾಲು ಮಾಡಿದೆ.

 

 

Follow Us:
Download App:
  • android
  • ios