Asianet Suvarna News Asianet Suvarna News

ಪಾನಿಪುರಿ ತಿಂದು 55 ಮಕ್ಕಳು ಸೇರಿ 77 ಜನ ಅಸ್ವಸ್ಥ!

-ಪಾನಿ ಪುರಿ ತಿಂದಿದ್ದ 77 ಜನ ಅಸ್ವಸ್ಥ
-ವಾರದ ಸಂತೆಯಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಸೇವಿಸಿದ್ದ ಜನ
-ಛತ್ತೀಸ್‌ಘಡದ ರಾಜಗಂದಗಾವ್‌ನಲ್ಲಿ ಘಟನೆ
 

77 people fall ill after eating panipuri in Chattisgarh
Author
Bengaluru, First Published Oct 21, 2021, 2:22 PM IST
  • Facebook
  • Twitter
  • Whatsapp

ಛತ್ತೀಸ್‌ಘಡ (ಅ. 21) : ಛತ್ತೀಸ್‌ಘಡದ ರಾಜಗಂದಗಾವ್‌ನಲ್ಲಿ (Rajnandgaon) ವಾರದ ಸಂತೆಯಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಸೇವಿಸಿದ 77 ಜನರು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಪ್ರಾಥಮಿಕ ವರದಿಯ ಪ್ರಕಾರ ಇವರೆಲ್ಲರೂ ವಾರದ ಸಂತೆಯಲ್ಲಿ ಪಾನಿ ಪುರಿ (Panipuri) ಸೇವಿಸಿದ್ದರು ಎಂದು ತಿಳಿದು ಬಂದಿದೆ.  ಇದರಲ್ಲಿ ಬಹುತೇಕರು ಮಕ್ಕಳಾಗಿದ್ದು ಜಿಲ್ಲೆಯ ಗತಪಾರ್‌ ಕಲಾ ಗ್ರಾಮದಲ್ಲಿ ಮಂಗಳವಾರ ವಾರದ ಸಂತೆಯಲ್ಲಿ ಇವರೆಲ್ಲರೂ ಪಾನಿಪುರಿ ತಿಂದಿದ್ದರು ಎಂದು ಹೇಳಲಾಗಿದೆ.

ಸಂತೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸಂಜೆ  ಹೊತ್ತಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಸಿಕೊಂಡಿದೆ. ಇದರಿಂದ ಆತಂಕಕ್ಕೊಳಗಾಗಿ ತಕ್ಷಣ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಅಸ್ವಸ್ಥಗೊಂಡ ಜನರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ನಂತರ ಇವರಲ್ಲಿ 55 ಮಕ್ಕಳು ಸೇರಿದಂತೆ ಒಟ್ಟು 77 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೆಂಡ್ರಿಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ  ದಾಖಲಿಸಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 26 ಜನರನ್ನು ಬುಧವಾರ ಡಿಸ್ಚಾರ್ಜ್‌ ಮಾಡಲಾಗಿದ್ದು ಉಳಿದವರ ಮೇಲೆ ನಿಗಾ ಇಡಲಾಗಿದ್ದು ಪ್ರಾಣಾಪಾಯದ ಭಯ ಇಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಕಲುಷಿತ ಆಹಾರ ಪದಾರ್ಥಗಳಿಂದ ತಯಾರಿಸಿದ ತಿಂಡಿ ಸೇವಿಸಿದ್ದೇ ಇದಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.. 

ಹೆಣ್ಣು ಮಗು ಜನಿಸಿದ ಖುಷಿ: ಉಚಿತ ಪಾನಿಪುರಿ ಹಂಚಿದ ಬೀದಿಬದಿ ವ್ಯಾಪಾರಿ!

ಫುಡ್ ಪಾಯ್ಸನಿಂಗ್‌ (Food Poisoning) ಇದಕ್ಕೆ ಕಾರಣವಾಗಿದ್ದು ಮುಂದಿನ ತನಿಖೆ ಜಾರಿಯಲ್ಲಿದೆ. ಘಟನೆಯ ನಂತರ ಬುಧವಾರ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ತಪಾಸಣಾ ಶಿಬಿರದಲ್ಲಿ ಗ್ರಾಮದ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಕ್ಟೋಬರ್‌ 6 ರಂದು ಕೂಡ ಇದೇ ರೀತಿಯ ಘಟನೆ ಮಹಾಸಮುಂದ್‌ ಜಿಲ್ಲೆಯಲ್ಲಿ ನಡೆದಿತ್ತು. ತಿಥಿ ಕಾರ್ಯಕ್ರಮದಲ್ಲಿ ಭೋಜನ ಮಾಡಿದ್ದ ಸುಮಾರು 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಅಕ್ಟೋಬರ್‌ 17 ರಂದು ಬಿಲಸ್‌ಪುರ್‌ ಜಿಲ್ಲೆಯಲ್ಲಿ ಕೂಡ ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ್ದ 17 ಜನ ಅಸ್ವಸ್ಥಗೊಂಡ ಘಟನೆ ನಡೆದಿತ್ತು. ರಾಜ್ಯದಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ  ಪ್ರಕರಣಗಳು ಪದೇ ಪದೇ  ದಾಖಲಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಪಾನಿಪುರಿ ನೀರಿಗೆ ಮೂತ್ರ ಬೆರೆಸಿದ 'ಅಂಕಲ್': ತೆರೆ ಹಿಂದಿನ ವಿಡಿಯೋ ವೈರಲ್!

ಅಡುಗೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ, ಅಶುದ್ಧ ನೀರಿನ ಬಳಕೆಯೇ ಇಂಥಹ ಘಟನೆಗೆ ಕಾರಣವಾಗುತ್ತದೆ. ಅಲ್ಲದೇ ಅಡುಗೆಯಲ್ಲಿ ರಾಸಾಯನಿಕ ಮಿಶ್ರಿತ ಪದಾರ್ಥಗಳನ್ನು ಬಳಸುವುದು, ಕಳಪೆ ಗುಣಮಟ್ಟದ ಎಣ್ಣೆ ಬಳಸುವುದು ಆಹಾರ ಗುಣಮಟ್ಟವನ್ನು ತಗ್ಗಿಸುತ್ತವೆ. ಇಂಥಹ ಆಹಾರವನ್ನು ಸೇವಿಸಿದಾಗ ಜನರು ಸಹಜವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹಾಗಾಗಿ ಈ ನಿಟ್ಟಿನಲ್ಲಿ ಆಹಾರ ತಯಾರಿಸುವ ಮತ್ತು ಸೇವಿಸುವ ಮುನ್ನ ಕಾಳಜಿವಹಿಸುವುದು ಅತ್ಯವಶ್ಯವಾಗಿದೆ.

Follow Us:
Download App:
  • android
  • ios