* ಹೆಣ್ಣುಮಗು ಜನಿಸಿದ ಸಂತೋಷ, ಗ್ರಾಹಕರಿಗೆ ಉಚಿತವಾಗಿ ಪಾನಿಪುರಿ* ಮಕ್ಕಳಲ್ಲಿ ಲಿಂಗಭೇದ ಮಾಡಬಾರದು ಎಂಬ ಸಂದೇಶ

ಭೋಪಾಲ್‌(ಸೆ.14): ಹೆಣ್ಣುಮಗು ಜನಿಸಿದ ಸಂತೋಷಕ್ಕೆ ಬೀದಿ ಬದಿ ವ್ಯಾಪಾರಿಯೊಬ್ಬ ಗ್ರಾಹಕರಿಗೆ ಉಚಿತವಾಗಿ ಪಾನಿಪುರಿ ಹಂಚಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಲಿಂಗಭೇದ ಮಾಡಬಾರದು ಎಂಬ ಸಂದೇಶವನ್ನು ಸಾರಿದ್ದಾರೆ.

ಭೋಪಾಲ್‌ನ ಕೋಲಾರ್‌ನಲ್ಲಿ ಪಾನಿಪುರಿ ಮಾರಾಟ ಮಾಡುವ ಅಂಚಲ್‌ ಗುಪ್ತಾ ಎನ್ನುವ ವ್ಯಕ್ತಿ ಇಡೀ ದಿನ ಸುಮಾರು 35 ಸಾವಿರ ರು. ಬೆಲೆಯ ಪಾನಿಪುರಿಯನ್ನು ಉಚಿತವಾಗಿ ಹಂಚಿದ್ದಾರೆ.

Scroll to load tweet…

‘ಮಗಳೊಂದಿಗೆ ಭವಿಷ್ಯ ಇರುತ್ತದೆ ಎಂದು ಹೇಳುವ ಅಂಚಲ್‌ ಸಂತೋಷವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ‘ಮದುವೆಯಾದಾಗಿನಿಂದಲು ಹೆಣ್ಣುಮಗು ಬೇಕು ಎಂದು ನಾವು ಬಯಸಿದ್ದೆವು.

ಈಗ ಆ ಕನಸು ನನಸಾಗಿದೆ. ಈ ಸಂಭ್ರಮವನ್ನು ಪಾನಿಪುರಿ ಹಂಚುವ ಮೂಲಕ ಆಚರಿಸಬೇಕು ಎಂದು ತೀರ್ಮಾನಿಸಿದೆ’ ಎಂದು ಅವರು ಹೇಳಿದ್ದಾರೆ.