ಜೀವ 24 ಗಂಟೆ ಮಾತ್ರ ಎಂದಿದ್ದ ಸೋಂಕಿತೆ ಕೊರೋನಾದಿಂದ ಸಂಪೂರ್ಣ ಗುಣಮುಖ!
ಕೊರೋನಾ ವೈರಸ್ ಸೋಂಕು ಇಡೀ ದೇಹಕ್ಕೆ ಆವರಿಸಿಕೊಂಡಿದೆ. ಇತ್ತ ಡಯಾಬೆಟಿಕ್ ಸೇರಿದಂತೆ ಇತರ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿತ್ತು. 75ರ ವೃದ್ಧೆಯನ್ನು ಪರಿಶೀಸಿಲಿದ ವೈದ್ಯರು, 24 ಗಂಟೆ ಆಯಸ್ಸು ಮಾತ್ರ ಉಳಿದಿದೆ ಎಂದು ಕುಟಂಬಸ್ಥರಿಗೆ ಹೇಳಿದ್ದಾರೆ. ಆದರೆ ಅಚ್ಚರಿ ಎಂಬಂತೆ 13 ದಿನದಲ್ಲಿ ವೃದ್ಧೆ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಮುಂಬೈ(ಏ.26): ಕರೋನಾ 2ನೇ ಅಲೆ ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿದೆ. ಹಲವು ಯುವಕರೂ ಕೊರೋನಾಗೆ ಬಲಿಯಾಗಿದ್ದಾರೆ. ಅಷ್ಟರ ಮಟ್ಟಿಗೆ ಕೊರೋನಾ ಭಾರತವನ್ನು ಕಂಗೆಡಿಸಿದೆ. ಇದರ ನಡುವೆ ನಮ್ಮೆಲ್ಲ ಆತ್ಮಸ್ಥೈರ್ಯ ಹೆಚ್ಚಿಸುವ ಸುದ್ದಿಯೊಂದಿದೆ. ಕೊರೋನಾ ವಿರುದ್ಧ ಹೋರಾಡಿದ ಮುಂಬೈನ ಡೊಂಬಿವಿಲಿ ನಿವಾಸಿ 75 ವರ್ಷ ಶೈಲಜಾ ನಾಕ್ವೆ ಕತೆ ಎಲ್ಲರಿಗೂ ಸ್ಪೂರ್ತಿಯಾಗಿದೆ.
ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!.
ಕೊರೋನಾ ಸೋಂಕು ತಗುಲಿ ಶ್ವಾಸಕೋಶವನ್ನೇ ಆವರಿಸಿಬಿಟ್ಟಿತ್ತು. ಇತ್ತ ಡಯಾಬೆಟಿಕ್ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಕೂಡ ಅತೀಯಾಗಿ ಕಾಡುತ್ತಿತ್ತು. ಇನ್ನು ಆಮ್ಲಜನಕ ಪ್ರಮಾಣ ಶೇ.69ಕ್ಕೆ ಇಳಿದಿತ್ತು. ತೀವ್ರ ಅಸ್ವಸ್ಥಗೊಂಡ ಶೈಲಜಾ ನಾಕ್ವೆಯನ್ನು ಕುಟುಂಬಸ್ಥರು ಘಾಟ್‌ಕೂಪರ್‌ನ ಸೋನಾಗ್ರ ಮೆಡಿಕಲ್ ಹಾಗೂ ಸರ್ಜಿಕಲ್ ಆಸ್ಪತ್ರೆಗೆ ದಾಖಲಿಸಿದ್ದರು.
75 ವರ್ಷದ ಶೈಲಜಾ ಅವರನ್ನು ಪರಿಶೀಲಿಸಿದ ವೈದ್ಯರು, ಇದೇ ಪರಿಸ್ಥಿತಿ ಮುಂದುವರಿದರೆ ಗರಿಷ್ಠ 24 ಗಂಟೆ ಮಾತ್ರ ಆಯಸ್ಸು ಇರಲಿದೆ. ಚೇತರಿಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದಿದ್ದಾರೆ. ವೈದ್ಯರು ತಮ್ಮ ಕರ್ತವ್ಯ ಮುಂದುವರಿಸಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ - ನ್ಯಾಯಾಲಯ
ತಕ್ಷಣವೇ 6 ಡೊಸೇಡ್ ರೆಮ್ಡಿಸಿವಿರ್ ಲಸಿಕೆ ಬೇಕು ಎಂದಿದ್ದರು. ಸದ್ಯ ಆಸ್ಪತ್ರೆಯಲ್ಲಿ ರೆಮ್ಡಿಸಿವಿರ್ ಲಸಿಕೆ ಇಲ್ಲ ಎಂದಿದ್ದರು. ಹೀಗಾಗಿ ಶೈಲಾಜ ಪುತ್ರ ಪ್ರಶಾಂತ್‌ಗೆ ದಿಕ್ಕೇ ತೋಚದಾಗಿದೆ. ಕೊನೆಗೂ ಪ್ರಯಾಸ ಪಟ್ಟು ಲಸಿಕೆ ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದರು. ಇತ್ತ ಆಕ್ಸಿಜನ್ ಕೂಡ ಬೇರೆಡೆಯಿಂದ ಒದಗಿಸಲಾಯಿತು.
ಆಸ್ಪತ್ರೆ ದಾಖಲಾದ ದಿನದಿಂದ ದಿನಕ್ಕೆ ಶೈಲಾಜ ಚೇತರಿಸಿಕೊಂಡಿದ್ದಾರೆ. 13 ದಿನಗಳ ಬಳಿಕ ಶೈಲಜಾ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 13 ದಿನಗಳ ಬಳಿಕ ಶೈಲಜಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಾವಿನ ದವಡೆಯಿಂದ ನನ್ನ ತಾಯಿ ಪಾರಾಗಿದ್ದಾರೆ. ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದು ನಮ್ಮೆಲ್ಲರಲ್ಲಿ ಸಂತಸ ಮೂಡಿಸಿದೆ ಎಂದು ಪ್ರಶಾಂತ್ ಹೇಳಿದ್ದಾರೆ.