ಶ್ರೀನಗರ- ಮುಜಫರಾಬಾದ್ ಹೆದ್ದಾರಿಯಲ್ಲಿ ಮಂಗಳವಾರ ಎಂದಿನಂತೆ ಸಂಚಾರ| ಗಡಿ ನಿಯಂತ್ರಣ ರೇಖೆ ಹಾದುಹೋದ ಉಭಯ ದೇಶಗಳ 70 ಟ್ರಕ್
ಶ್ರೀನಗರ[ಫೆ.27]: ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಯ ಹೊರತಾಗಿಯೂ ಶ್ರೀನಗರ- ಮುಜಫರಾಬಾದ್ ಹೆದ್ದಾರಿಯಲ್ಲಿ ಮಂಗಳವಾರ ಸಂಚಾರ ಎಂದಿನಂತೆಯೇ ಇತ್ತು. ದಾಳಿ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ 70 ಟ್ರಕ್‌ಗಳು ಜಮ್ಮು- ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಮೂಲಕ ಹಾದು ಹೊಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
All Is Well ಎಂದಿದ್ದ ಪಾಕ್ ಆರ್ಮಿ: ಸಾಲಾ ಕಣ್ತೆರೆದು ಮಲಗಿತ್ತು ಎಂದ ಪಾಕಿ ಸಿಟಿಜನ್ಸ್!
ಸುಮಾರು 35 ಟ್ರಕ್‌ಗಳು ಉರಿಯಲ್ಲಿರುವ ಸಲಾಮ್‌ಬಾದ್ ವ್ಯಾಪಾರಿ ಸೌಲಭ್ಯ ಕೇಂದ್ರದಿಂದ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿವೆ. ಅದೇ ರೀತಿ ಪಾಕಿಸ್ತಾನದ ಕಡೆಯಿಂದಲೂ ಅಷ್ಟೇ ಪ್ರಮಾಣದ ಟ್ರಕ್‌ಗಳು ಭಾರತವನ್ನು ಪ್ರವೇಶಿಸಿವೆ. ಭಾರತ ಮತ್ತು ಪಾಕ್ ಮಧ್ಯೆ ಪ್ರತಿವಾರ ಮಂಗಳವಾರದಿಂದ ಶುಕ್ರವಾರದವರೆಗೆ ಸರಕು ಸಾಮಗ್ರಿಗಳ ವಿನಿಯಮ ನಡೆಯುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 27, 2019, 8:01 AM IST