Asianet Suvarna News Asianet Suvarna News

ಚಳವಳಿ ಬೆಂಬಲಿಸದ 7 ಗ್ರಾಮಸ್ಥರ ಹತ್ಯೆಗೈದ ಹೋರಾಟಗಾರರು!

ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ‘ಪಾತಾಳಗಡಿ’ ಚಳುವಳಿ| ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು ಅಪಹರಿಸಿ ಕೊಂದು ಹಾಕಿದ ಹೋರಾಟಗಾರರು| ಮೂವರು ಹೋರಾಟಗಾರರ ಬಂಧನ

7 killed by Pathalgadi supporters for opposing the movement in Jharkhand
Author
Bangalore, First Published Jan 23, 2020, 2:53 PM IST

ರಾಂಚಿ[ಜ.23]: ರಾಂಚಿ: ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ಜಾರ್ಖಂಡ್‌ ಬುಡಕಟ್ಟು ಜನಾಂಗ ನಡೆಸುತ್ತಿರುವ ‘ಪಾತಾಳಗಡಿ’ ಚಳುವಳಿಗೆ ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು, ಚಳುವಳಿಯ ಹೋರಾಟಗಾರರು ಅಪಹರಿಸಿ ಹತ್ಯೆಗೈದ ಘಟನೆ ಪಶ್ಚಿಮ ಸಿಂಘೂಮ್‌ ಜಿಲ್ಲೆಯ ಬುರುಗುಲಿಕೇರಾ ಎಂಬ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಜಾರ್ಖಂಡ್‌ನಲ್ಲಿ ಸೋರೆನ್ ಸರ್ಕಾರ: ಪ್ರತಿಪಕ್ಷಗಳ ಬಲ ಪ್ರದರ್ಶನದ ಮಧ್ಯೆ ಅಧಿಕಾರ!

ಚಳವಳಿ ಕುರಿತು ನಡೆದ ಸಭೆ ವೇಳೆ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವೇಳೆ ಹೋರಾಟಗಾರರ ಗುಂಪು, ವಿರೋಧ ಮಾಡಿದ 7 ಜನರನ್ನು ಅಪಹರಿಸಿ, ಲಾಠಿಗಳಿಂದ ಬಡಿದು ಹತ್ಯೆ ಮಾಡಿದೆ. ಗ್ರಾಮಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಪಾತಾಳಗಡಿ ಎಂದು ಹೆಸರಿಡಲಾಗಿದೆ.

ಮೂವರು ಅರೆಸ್ಟ್

ಸದ್ಯ 7 ಮಂದಿ ಗ್ರಾಮಸ್ಥರಬನ್ನು ಅಪಹರಿಸಿ, ಕೊಲೆಗೈದ ಆರೋಪದಡಿಯಲ್ಲಿ ಮೂವರು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದೆ ಈ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಷ್ಟೇ

Follow Us:
Download App:
  • android
  • ios